ಡೈಲಿ ವಾರ್ತೆ: 07/DEC/2023
ಡಿ. 9 ರಂದು ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ
ಬಂಟ್ವಾಳ: ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ ಕಾರ್ಯಕ್ರಮ ಡಿ. 9 ರಂದು ಸಂಜೆ 6 ಗಂಟೆಯಿಂದ ನಡೆಯಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ತಿಳಿಸಿದ್ದಾರೆ.
ಅವರು ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಯೋಚನೆಯಲ್ಲಿ ಆರಂಭವಾದ ಶಿಕ್ಷಣ ಸಂಸ್ಥೆ ಇಂದು ಅತ್ಯಂತ ಎತ್ತರಕ್ಕೆ ಬೆಳೆದು ನಿಂತಿದೆ.
ರಾಷ್ಟ್ರೀಯ ಶಿಕ್ಷಣಕ್ಕೆ ಪೂರಕವಾದ ರೀತಿಯಲ್ಲಿ ಶಿಕ್ಷಣ ನೀಡುತ್ತಿರುವ ಸಂಸ್ಥೆ ಉಳಿದ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ.
ಆರಂಭದಲ್ಲಿ ಹಗಲು ಹೊತ್ತಿನಲ್ಲಿ ನಡೆಯುತ್ತಿದ್ದ ಕ್ರೀಡೋತ್ಸವ ಕಳೆದ 30 ವರ್ಷಗಳಿಂದ ಹೊನಲು ಬೆಳಕಿನಲ್ಲಿ ನಡೆಯುತ್ತದೆ. ಸಂಸ್ಥೆಯಲ್ಲಿರುವ ಎಲ್ಲಾ 3900 ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಳುವಿಕೆ ವಿಶೇಷವಾಗಿದೆ. 20 ಕಾರ್ಯಕ್ರಮಗಳು ಅ ದಿನ ನಡೆಯಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಸಹಿತ ಶಾಸಕರುಗಳು ಹಾಗೂ ಅನೇಕ ಗಣ್ಯರು ಪಾಲ್ಗೊಳ್ಳಿದ್ದಾರೆ ಎಂದು ತಿಳಿಸಿದರು..
ಪತ್ರಿಕಾಗೋಷ್ಠಿಯಲ್ಲಿ ನಾರಾಯಣ ಸೋಮಯಾಜಿ, ವಸಂತ ಮಾದವ, ರಮೇಶ್ ಉಪಸ್ಥಿತರಿದ್ದರು.
*ಕ್ರೀಡೋತ್ಸವದ ಪ್ರದರ್ಶನಗಳು*
1. ಸಂಚಲನ- ಸಮವಸ್ತ್ರ ಧರಿಸಿದ ಕಾಲೇಜು ವಿದ್ಯಾರ್ಥಿಗಳು ಘೋಷನ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತ ಆಕರ್ಷಕವಾಗಿ ಶಿಸ್ತಿನ ಸೈನಿಕರಂತೆ ವಿವಿಧ ವಾಹಿನಿಗಳಲ್ಲಿ ಪಥ ಸಂಚಲನ ಮಾಡುತ್ತಾರೆ. ಕೋವಿಯನ್ನು ಹಿಡಿದ ಕಾಲೇಜು ವಿದ್ಯಾರ್ಥಿಗಳಿಂದ ಕೋವಿ ಸಮತಾ ಪ್ರದರ್ಶನಗಳು.
2. ಶಿಶುನೃತ್ಯ- “ಚಟಕಾ ಚಟಕಾ ಹೇ ಚಟಕಾ” ಎಂಬ ಸಂಸ್ಕೃತ ಹಾಡಿಗೆ ಶ್ರೀರಾಮ ಶಿಶುಮಂದಿರದ ಪುಟಾಣಿಗಳಿಂದ ಆಕರ್ಷಕ ನೃತ್ಯ.
3. ಘೋಷ್ ಪ್ರದರ್ಶನ – ಅನಕ, ಶಂಖ, ವಂಶಿ, ಪಣವ, ಝಲ್ಲರಿ, ತ್ರಿಭುಜ, ನಾಗಾಂಗ, ಟ್ರಂಪೆಟ್ ಮೊದಲಾದ ವಾದ್ಯಗಳನ್ನು ಸಾಮೂಹಿಕವಾಗಿ ನುಡಿಸುವುದು. ತಾಳದ ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ವಿವಿಧ ರಚನೆಯಲ್ಲಿ ಸಂಯೋಜನೆಗೊಂಡು ಸಂಗೀತದೊಂದಿಗೆ ಮನರಂಜಿಸುವ ಬಾಲಕ ಬಾಲಕಿಯರು ಘೋಷ್ ಪ್ರದರ್ಶನ.
4. ಜಡೆಕೋಲಾಟ – ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು “ಲಾಜಲೀ ಕೃಷ್ಣಲಾ ರಾಧಾ ಲಾಜಲಿ” ಮರಾಠಿ ಭಾಷೆಯ ಹಾಡಿನೊದಿಗೆ ಜಡೆ ಹೆಣೆಯುವ ಮತ್ತು ಬಿಚ್ಚುವ ವಿಶೇಷ ನೃತ್ಯ ವೈಭವ.
5. ನಿಯುದ್ಧ – ಭಾರತೀಯ ನಿಶ್ಯಸ್ತ್ರ ಯುದ್ಧ ಕಲೆ. ವಿದ್ಯಾರ್ಥಿಗಳಲ್ಲಿ ಆತ್ಮಸ್ಥೆರ್ಯ ಹೋರಾಟದ ಮನೋಭಾವ ಬೆಳೆಸುವುದಕ್ಕೆ ಸಹಕಾರಿ. ಮತ್ತು ವಿದ್ಯಾರ್ಥಿಗಳ ಆತ್ಮ ರಕ್ಷಣೆಯ ಕರಾಟೆ ಪ್ರಯೋಗ ಮತ್ತು ವಿವಿಧ ಪ್ರದರ್ಶನಗಳು.
6. ದೀಪಾರತಿ “ಮಾತೃ ಮಂದಿರ್ ಕಾ ಸಮರ್ಪಿತ್” ಎಂಬ ಹಾಡಿಗೆ ಪ್ರೌಢ ಶಾಲಾ ವಿದ್ಯಾರ್ಥಿಗಳು ದೀಪಧಾರಿಗಳಾಗಿ ವಿವಿಧ ರಚನೆಗಳು ನಕ್ಷತ್ರ, ಸ್ವಸ್ತಿಕ್, ಅಖಂಡ ಭಾರತ ರಚನೆಗಳ ಮೂಲಕ ಸಾಲುದೀಪಗಳ ಸಂಯೋಜನೆ.
7. ಯೋಗಾಸನ – ಜಗತ್ತಿನ ಅಶಾಂತಿಯನ್ನು ತಣಿಸುವ ಭಾರತೀಯ ಮನಃಶಾಸ್ತ್ರದ ಮೂಲ ಯೋಗಾಸನ ಯೋಗಾಸನ ಪ್ರದರ್ಶನವಲ್ಲ ಇದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವ ಭಾರತೀಯ ವ್ಯಾಯಾಮ ಪದ್ಧತಿ. ಪರಿಕರಗಳ ಬಳಕೆಯಿಲ್ಲದೆ ದೇಹವನ್ನೇ ತನಗೆ ಬೇಕಾದಂತೆ ನಿಯಂತ್ರಿಸಿಕೊಳ್ಳುವ ಒಂದು ವಿಧಾನ, ವಿವಿಧ ಯೋಗಗುಚ್ಚಗಳ ರಚನೆ…
8. ಪ್ರಾಥಮಿಕ ಸಾಮೂಹಿಕ – “ಲಿಂಗಯ್ಯ ಮಾತನಾಡೋ ತೋಂಟದ ಸಿದ್ದ ಲಿಂಗಯ್ಯ ಮಾತನಾಡು” ಹಾಡಿಗೆ ಪುಟಾಣಿಗಳು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಆಕರ್ಷಕ ಚಿತ್ತಾರಗಳನ್ನು ಮೂಡಿಸುವ ಒಂದು ಸಂಯೋಜನೆ. ಶಿಲಿಂಗ, ರಥ, ತಾವರೆ ರಚನೆಗಳೊಂದಿಗೆ 600ಕ್ಕೂ ಮಿಕ್ಕಿದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಒಟ್ಟಾಗಿ ಭಾಗವಹಿಸುವ ಒಂದು ವಿಶೇಷ ಪ್ರದರ್ಶನ.
9. ಕೋಲ್ಕಿಂಚು( ಮೆನ್ಸುರಿ) – ಶಾಲಾ ಅಟಲ್ ಟಿಂಕರಿಂಗ್ ಲ್ಯಾಬ್‌ನಲ್ಲಿ ತಯಾರಾದ ಮಿನುಗುವ ಎಲ್.ಇ.ಡಿ ಕೋಲುಗಳನ್ನು ಹಿಡಿದು ಆಕರ್ಷಕ ವ್ಯಾಯಾಮ ಪ್ರದರ್ಶನ.
10. ನೃತ್ಯ ಭಜನೆ- ವಿವಿಧ ಭಜನೆಗಳಿಗೆ ವಿದ್ಯಾರ್ಥಿಗಳಿಂದ ನೃತ್ಯ ಭಜನೆ
11. ಮಲ್ಲಕಂಬ – ಹೆಸರೇ ಸೂಚಿಸುವಂತೆ ಇದು ಮಲ್ಲರ ಕಂಬ ಶರೀರ ದಾರ್ಡ್ಯತೆಯನ್ನು ಹೆಚ್ಚಿಸುವುದಕ್ಕೆ ಇರುವ ಒಂದು ಜನಪದ ಕ್ರೀಡೆ ಎರಡು ಕಂಬಗಳಲ್ಲಿ ವಿದ್ಯಾರ್ಥಿಗಳು ವಿವಿಧ ಆಸನಗಳನ್ನು ಪ್ರದರ್ಶಿಸಿಸುತ್ತಾರೆ. ಕಂಬ ಹತ್ತಿ ಇಳಿಯುವುದೇ ಒಂದು ಆಕರ್ಷಕ ನೋಟ.
12. ತಿರುಗುವ ಮಲ್ಲಕಂಬ – ಬಾಟಲಿಗಳ ಮೇಲೆ ಜೋಡಿಸಿದ ತಿರುಗುವ ಮಲ್ಲಕಂಬಗಳಲ್ಲಿ ವಿಶೇಷ ಯೋಗಾಸನ ಪ್ರದರ್ಶನ
13. ಟಿಕ್-ಟಿಕ್ ಪ್ರದರ್ಶನ – ಘೋಷನ ಆನಕ, ಪಣವಾ ವಾದನಗಳಿಂದ ಟಿಕ್-ಟಿಕ್ ಪ್ರದರ್ಶನ
14. ನೃತ್ಯ ವೈವಿಧ್ಯ – ಕಾಲೇಜು ವಿದ್ಯಾರ್ಥಿಗಳಿಂದ
ನೃತ್ಯ ಹಾಗೂ ಸಾಂಸ್ಕೃತಿಕ ಪ್ರಕಾರಗಳ ಪ್ರದರ್ಶನ “ತುಳು ಹಾಡಿಗೆ” ತುಳು ನಾಡ ವೈಭವವನ್ನು ಬಿಂಬಿಸುವ ನೃತ್ಯ.
15. ಚಕ್ರ ಸಮತೋಲನ – ದ್ವಿಚಕ್ರ, ಏಕಚಕ್ರಗಳ ವಿವಿಧ ಕಸರತ್ತುಗಳ ಮೂಲಕ ಮೈನವಿರೇಳಿಸುವ ರೋಮಾಂಚನ ದೃಶ್ಯಗಳು, ಮೋಟಾರು ಸೈಕಲುಗಳಲ್ಲಿ ಸಾಹಸಮಯ ಸವಾರಿ. ಬೆಂಚಿನ ಮೇಲೆ ಏಕಚಕ್ರದಲ್ಲಿ ಸವಾರಿ. ಧುಮುಕುವ ಧೈರ್ಯದ ಪಂಜನು ಬೆಳಗುವ ಸಾಹಸಿಗರ ಪ್ರದರ್ಶನ.
ಟ್ಯೂಬ್ ಲೈಟ್‌ಗಳ ಸಾಲನ್ನು ಎದೆಯೊಡ್ಡಿ ಒಡೆಯುವ ಅದ್ಭುತ ಸಾಹಸ.
16. ಬೆಂಕಿ ಸಾಹಸ -ಬೆಂಕಿಯೊಂದಿಗೆ ನಿರ್ಭೀತಿಯಿಂದ ತಾಲೀಮುಗಳ ಪ್ರದರ್ಶನ, ಬೆಂಕಿ ಚಕ್ರದೊಳಗೆ
17. ಕಾಲೇಜು ವಿದ್ಯಾರ್ಥಿಗಳಿಂದ ಕೇರಳ ಶೈಲಿಯ ಚೆಂಡೆ, ಡೋಲು, ಚಕ್ರತಾಲಗಳನ್ನೊಳಗೊಂಡ ವಾದ್ಯ ವಿಶೇಷ. . ಕಾಲಕ್ರ – ಕಾಲಲ್ಲಿ ಚಕ್ರ, ಬಾಯಲ್ಲಿ ಶರ್ಕರ, ಕಾಲಚಕ್ರ ತಿರುಗಿದಲ್ಲಿ ಬಾಳಚಕ್ರ ಸಾಗಬಲ್ಲುದು .
18 ಮಾತಿನಂತೆ ಚಲಿಸುವುದು ಪ್ರಕೃತಿಯ ನಿಯಮ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸ್ಟೇಟಿಂಗ್ ಪ್ರದರ್ಶನ.
19. ಕೂಪಿಕಾ- ಚಿಕ್ಕ ಅಂಶಗಳಿಗೆ ಸರಿಯಾಗಿ ಗಮನಕೊಟ್ಟಾಗ ದೊಡ್ಡವನ್ನು ಸಾಧಿಸಬಹುದು ಧೈರ್ಯ, ಏಕಾಗ್ರತೆಗಳ ಸಮ್ಮಿಲನ ಈ ಕೂಪಿಕಾ ಸಮತೋಲನ ಏಕಾಗ್ರತೆಗೊಂದು ನಿದರ್ಶನ.
20. ಪ್ರೌಢ ಸಾಮೂಹಿಕ – ಪ್ರೌಢಶಾಲೆಯ 856 ವಿದ್ಯಾರ್ಥಿಗಳು ಮೈದಾನದ ಹೊನಲು ಬೆಳಕಿನಲ್ಲಿ ಲಯಬದ್ಧವಾಗಿ ಕುಣಿದು ಕುಪ್ಪಳಿಸಿ ನಿರ್ಮಿಸುವ ರಂಗೋಲಿಗಳ ಚಿತ್ತಾರ. ಸಾಲುಸಾಲಾಗಿ ಕುಳಿತು ಮಾಡುವ ಸಾಮೂಹಿಕ ರಚನೆಗಳು, ಚಂದ್ರಯಾನ 3 ಭಾರತದ ಸಾಧನೆಗಳು ಹೀಗೆ ಒಟ್ಟು 20 ಪ್ರದರ್ಶನಗಳು ನಡೆಯಲಿವೆ.