ಡೈಲಿ ವಾರ್ತೆ: 07/DEC/2023
ಬಂಟ್ವಾಳ ಸಂಚಾರ ಠಾಣೆಯ ಕಾಮಗಾರಿ ವೀಕ್ಷಿಸಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್
ಬಂಟ್ವಾಳ : ಪಾಣೆಮಂಗಳೂರು ಸಮೀಪದ ಅಕ್ಕರಂಗಡಿಯಲ್ಲಿ ನಿರ್ಮಾಣವಾಗುತ್ತಿರುವ ಬಂಟ್ವಾಳ ಸಂಚಾರ ಠಾಣೆಯ ಕಾಮಗಾರಿಯನ್ನು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ವೀಕ್ಷಿಸಿದರು.
ಅಕ್ಕರಂಗಡಿಯಲ್ಲಿ 75 ಸೆಂಟ್ಸ್ ಜಾಗದಲ್ಲಿ ಸುಮಾರು 2.44 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದ ಅವರು ಠಾಣೆಯ ಹೊರ ಹಾಗೂ ಒಳ ವಿನ್ಯಾಸಗಳ ಬಗ್ಗೆ ಚರ್ಚಿಸಿ, ಕೆಲವು ಮಾರ್ಪಡುಗಳನ್ನು ಮಾಡುವಂತೆ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ತಿಳಿಸಿದರು.
ಸುತ್ತಮುತ್ತಲಿನ ತಗ್ಗು ಪ್ರದೇಶಗಳನ್ನು ಮಣ್ಣು ತುಂಬಿಸಿ ಸಮತಟ್ಟುಗೊಳಿಸಬೇಕು.ಮತ್ತು ಠಾಣಾಯ ಸುತ್ತಮುತ್ತಲು ಸುಂದರವಾಗಿ ಕಾಂಪೌಂಡ್ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಪೋಲೀಸ್ ಹೌಸಿಂಗ್ ಕಾರ್ಪೋರೇಷನ್ ಎ.ಇ.ಇ. ರಾಜೇಶ್, ಗುತ್ತಿಗೆದಾರ ಪುನೀತ್ ಶೆಟ್ಟಿ, ಡಿ.ವೈ.ಎಸ್.ಪಿ. ವಿಜಯಪ್ರಸಾದ್, ಇನ್ಸ್ ಪೆಕ್ಟರ್ ಆನಂತ ಪದ್ಮನಾಭ, ಟ್ರಾಫಿಕ್ ಪಿಎಸ್ಐ ಗಳಾದ ಸುತೇಶ್ ಮತ್ತು ಸಂಜೀವ ಅವರು ಹಾಜರಿದ್ದರು.