ಡೈಲಿ ವಾರ್ತೆ: 10/DEC/2023

ಕಾವಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಅಂಗವಾಗಿ ಹಳೆ ವಿದ್ಯಾರ್ಥಿಗಳ ಕ್ರೀಡಾ ಕೂಟ

ಕೋಟ: ಬ್ರಹ್ಮಾವರ ತಾಲೂಕಿನ ಕಾವಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಅಂಗವಾಗಿ ಹಳೆ ವಿದ್ಯಾರ್ಥಿಗಳ ಕ್ರೀಡಾ ಕೂಟವು ದಿನಾಂಕ 10 ರಂದು ಭಾನುವಾರ ಕಾವಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಯಿತು.

ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ ದೀಪಪ್ರಜ್ವಲನೆ ಮೂಲಕ ಉದ್ಘಾಟಿಸಿದರು.
ಅವರು ಮಾತನಾಡಿ ಕ್ರೀಡೆ ಇಲ್ಲದ ಜೀವನ ಕೀಟತಿಂದ ಹಣ್ಣಿನಂತೆ ಇರುತ್ತದೆ. ಅಂತ ಜೀವನ ವ್ಯರ್ಥವಾದದ್ದು ಎಂದರು.
ಯಾವುದೇ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಕ್ರೀಡೆಯನ್ನು ಅಳವಡಿಸಿಕೊಂಡಿರುತ್ತಾನೆ ಅಂತಹ ವ್ಯಕ್ತಿಯೂ ತನ್ನ ವ್ಯಕ್ತಿತ್ವವನ್ನು ವಿಕಾಸನಗೊಳಿಸಲು ಸಾಧ್ಯವಾಗುತ್ತದೆ ಎಂದು ಚಂದ್ರಶೇಖರ್ ಶೆಟ್ಟಿ ಹೇಳಿದರು.

ಮುಖ್ಯ ಅತಿಥಿಗಳಾದ ಡಾ. ಡಿಜಿ ಶೆಟ್ಟಿ ಕ್ರೀಡಾಕೂಟದ ಎಲ್ಲಾ ಹಳೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ನಿವೃತ್ತ ಮುಖ್ಯೋಪಾಧ್ಯಾಯರಾದ ಪ್ರಭಾಕರ್ ಶೆಟ್ಟಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಕ್ರೀಡೆಗೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವಡಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪದ್ಮನಾಭ ಕಾಂಚನ್ ವಹಿಸಿದ್ದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಡಿಜಿ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ ಪ್ರಭಾಕರ್ ಶೆಟ್ಟಿ, ವಡ್ಡರ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಲೋಕೇಶ್ ಕಾಂಚನ್, ಶ್ರೀಮತಿ ಜಯಂತಿ, ಶ್ರೀಮತಿ ಉಷಾ ಶೆಡ್ತಿ, ವರದರಾಜ ಶೆಟ್ಟಿ, ಸುವಿರ ಹೊಳ್ಳ, ರಾಘವೇಂದ್ರ ಶೆಟ್ಟಿ, ಅನಿಲ್ ಶೆಟ್ಟಿ, ರಮೇಶ್ ರಾವ್, ರೇಖಾ ಶರತ್ ಶೆಟ್ಟಿ, ಗಣೇಶ್ ರಾವ್, ಉಲ್ಲಾಸ್ ಕುಮಾರ್ ಶೆಟ್ಟಿ ಕಾವಡಿ, ಹರೀಶ್ ಶೆಟ್ಟಿ, ಗುರುರಾಜ್ ಕಾಂಚನ್, ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಕೆ ಉದಯ್ ಚಂದ್ರ ಶೆಟ್ಟಿ ಹವರಾಲು, ಶಿವರಾಮ ಶೆಟ್ಟಿ, ಮಂಜುನಾಥ ಹೆಬ್ಬಾರ್, ನೀಲಕಂಠ ರಾವ್, ಲೀಲಾವತಿ ಶೆಟ್ಟಿ, ಸುರೇಶ್ ಶೆಟ್ಟಿ, ಸುನಿಲ್ ಕುಮಾರ್ ಶೆಟ್ಟಿ, ಅಚುತಾನಂದ ಕಾಂಚನ್, ನಾರಾಯಣ ಪೂಜಾರಿ, ಸುಧಾಕರ್ ಕಾಂಚನ್, ಸುಕುಮಾರ್ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ ಹೆಗಡೆ ಹೌಸ್, ಸುಧಾಕರ್ ಶೆಟ್ಟಿ, ಸುಧೀರ್ ಕುಮಾರ್ ಶೆಟ್ಟಿ, ನಾಗರಾಜ್, ಸೋಮಪ್ಪ ಪೂಜಾರಿ ಮೊದಲದವರು ಉಪಸ್ಥಿತರಿದ್ದರು.