ಡೈಲಿ ವಾರ್ತೆ: 11/DEC/2023

ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ಜೀವನದ ಅವಿಸ್ಮರಣೀಯ ದಿನ : ಎಚ್. ಡಿ. ಕುಮಾರ ಸ್ವಾಮಿ

ಬಂಟ್ವಾಳ : ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಆಗಮಿಸಿರುವುದು ಮತ್ತು ಇಲ್ಲಿನ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ನನ್ನ ಜೀವನದ ಅವಿಸ್ಮರಣೀಯ ದಿನ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರ ಸ್ವಾಮಿ ಹೇಳಿದ್ದಾರೆ.

ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಿಂದ ಇಲ್ಲಿನ ಹನುಮಾನ್ ನಗರದ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ದೇಶದ ಸಂಸ್ಕೃತಿ ಹೊಂದಿರುವ ಗುರುಕುಲ ಪರಂಪರೆ, ಹಿರಿಯರಿಗೆ ಗೌರವ, ಸಂಸ್ಕಾರ, ಮಕ್ಕಳಿಗೆ ಶಿಸ್ತಿನ ಬದುಕು, ದೇಶದ ಸಾಂಸ್ಕೃತಿಕ ಪರಿಚಯವನ್ನು ಈ ವಿದ್ಯಾ ಸಂಸ್ಥೆಯಲ್ಲಿ ನೀಡುತ್ತಿರುವುದು ಅಭಿನಂದನೀಯವಾಗಿದೆ ಎಂದ ಅವರು ಬಾಲ್ಯದಲ್ಲಿ‌ ತಾನು ಶ್ರೀರಾಮನ ಭಜನೆಯನ್ನು ಮಾಡುತ್ತಿದ್ದ ದಿನವನ್ನು ಕ್ರೀಡೋತ್ಸವ ಮತ್ತೆ ನೆನಪಿಸಿದೆ ಎಂದರು.

ಈ ಹಿಂದೆ ಕಲ್ಲಡ್ಕ ಡಾ.ಪ್ರಭಾಕರ ಭಟ್ ಅವರ ಬಗ್ಗೆ ಮಾಡಿದ್ದ ಟೀಕೆ ಪ್ರತಿಕ್ರಿಯೆಗಳ ಮನಸ್ಥಿತಿ‌ ಇಂದು ಬದಲಾಗಿದೆ. ನನ್ನನ್ನು ದಾರಿ ತಪ್ಪಿಸಿದ ಕಾರ್ಯಕ್ಕೆ ವಿಷಾಧ ವ್ಯಕ್ತಪಡಿಸುತ್ತೆನೆ. ಸಂಸ್ಕೃತಿಯ ಪಾಠ ಕಲಿಸುವ ಶಿಕ್ಷಣ ಪ್ರತೀ ಗ್ರಾಮದ ಶಾಲೆಗಳಲ್ಲಿ ಸಿಗಲು ಈ ಶಿಕ್ಷಣ ಸಂಸ್ಥೆ ಪ್ರರೇಣೆಯಾಗಿದೆ ಎಂದರು.

ಸೇಡಂ ನ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಅಧ್ಯಕ್ಷ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಜಾಪುರ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಗುರುರಾಜ್ ಗಂಟಿಹೊಳೆ, ಭಾಗೀರಥಿ ಮುರುಳ್ಯ, ಉಮಾನಾಥ ಕೋಟ್ಯಾನ್, ಯಶ್ ಪಾಲ್ ಸುವರ್ಣ, ವೇದವ್ಯಾಸ ಕಾಮತ್, ಧೀರಜ್ ಮುನಿರಾಜು, ಕೋಟಿ ಶ್ರೀನಿವಾಸ ಪೂಜಾರಿ, ಎಸ್.ಎಲ್.ಬೋಜೇ ಗೌಡ, ಮಾಜಿ ಸಚಿವರಾದ ಕೃಷ್ಣ ಜೆ.ಪಾಲೇಮಾರ್, ಬಿ.ನಾಗರಾಜಶೆಟ್ಟಿ, ಪ್ರಮೋದ್ ಮಧ್ವರಾಜ್, ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಜಿ.ಪಂ.ಮಾಜಿ ಸದಸ್ಯ ಚೆನ್ನಪ್ಪ ಕೋಟ್ಯಾನ್, ಕಮಲಾ ಪ್ರಭಾಕರ ಭಟ್, ಮುಂಬೈ ಉದ್ಯಮಿ ರಘನಂದನ್ ಕಾಮತ್, ಮುಂಬೈ ಜಾಗತಿಕ‌ ಮಲ್ಲ ಕಂಬದ ಕಾರ್ಯದರ್ಶಿ ಉದಯ ವಿ.ದೇಶಪಾಂಡೆ, ಬೆಂಗಳೂರು ಯೂತ್ ಫಾರ್ ಸೇವಾ ಸಂಸ್ಥೆಯ ಮುಖ್ಯ‌ಕಾರ್ಯ ನಿರ್ವಾಹಕ ವೆಂಕಟೇಶ್ ಮೂರ್ತಿ, ಪರಿಮಳ ವಿ.ಮೂರ್ತಿ, ಉದ್ಯಮಿಗಳಾದ ಸಂಜೀತ್ ಶೆಟ್ಟಿ, ಸುಖಾನಂದ ಶೆಟ್ಟಿ, ಯದುನಾರಾಯಣ ಶೆಟ್ಟಿ, ಗಣೇಶಾನಂದ ಸೋಮಾಯಾಜಿ, ಕೂಳೂರು ಸದಾಶಿವ ಶೆಟ್ಟಿ, ಬರಿಮಾರು ಗಣೇಶ, ಕಿರಣ್ ಕುಮಾರ್ ಗಂಗಾವತಿ, ಸಾಧು ಸಾಲ್ಯಾನ್, ಪತ್ರಕರ್ತ ಜಿತೇಂದ್ರ ಕುಂದೇಶ್ವರ, ಇಸ್ರೋ ವಿಜ್ಞಾನಿ ಪ್ರೋ.ನಾಗೇಂದ್ರಯ್ಯ ಸೇರಿದಂತೆ 100 ಕ್ಕು ಹೆಚ್ಚು ವಿವಿಧ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾ ಕೇಂದ್ರದ ಸಂಸ್ಥಾಪಕ, ಡಾ.ಪ್ರಭಾಕರ ಭಟ್ ಪ್ರಸ್ತಾವಿಸಿ,ಸ್ವಾಗತಿಸಿದರು.
ಶಾಲಾ ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತಮಾಧವ, ಸಹ ಸಂಚಾಲಕ ರಮೇಶ್ ಉಪಸ್ಥಿತರಿದ್ದರು.

ಇದೇ ವೇಳೆ ರಾಷ್ಟ್ರಮಟ್ಟದಲ್ಲಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಇತ್ತೀಚಿಗೆ ವೀರಮರಣವನ್ನಪ್ಪಿದ ಕರ್ನಾಟಕದ ವೀರಯೋಧ ಕ್ಯಾ.ಪ್ರಾಂಜಲ್ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆಗೈಯಲಾಯಿತು.

40 ವಿಶೇಷ ಚೇತನ ಮಕ್ಜಳು ಸೇರಿದಂತೆ ಶಿಶುಮಂದಿರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪ.ಪೂ. ಹಾಗೂ ಪದವಿ ತರಗತಿಗಳ ಒಟ್ಟು 3,500 ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

ವಿದ್ಯಾರ್ಥಿಗಳಿಂದ ಪಥಸಂಚಲನ, ಶಿಶುನೃತ್ಯ, ಘೋಷ್ ವಾದನ, ಜಡೆಕೋಲಾಟ, ನಿಯುದ್ಧ, ದೀಪಾರತಿ, ಯೋಗಾಸನ, ಪ್ರಾಥಮಿಕ ವಿದ್ಯಾರ್ಥಿಗಳ ಸಾಮೂಹಿಕ ಪ್ರದರ್ಶನ, ನೃತ್ಯ ಭಜನೆ, ಮಲ್ಲಕಂಬ, ಘೋಷ್‌ ಟಿಕ್‌ಟಿಕ್ ಪ್ರದರ್ಶನ, ನೃತ್ಯ ವೈವಿಧ್ಯ, ತುಳುನಾಡಿನ ವೈಭವ,
ದ್ವಿಚಕ್ರ- ಏಕಚಕ್ರ ಸಮತೋಲನ, ಬೆಂಕಿ ಸಾಹಸ, ಕೇರಳದ ಚೆಂಡೆ ವಾದ್ಯ, ಕಾಲ್ಚಕ್ರ, ಕೂಪಿಕಾ ಸಮತೋಲನ, ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರುವ ಆಕರ್ಷಕ ಚಂದ್ರಯಾನ -3 ಉಡ್ಡಯಾನ , ಅಯೋಧ್ಯೆಯಲ್ಲಿ ನಿರ್ಮಾಣ ಗೊಳ್ಳುತ್ತಿರುವ ಶ್ರೀರಾಮ ಮಂದಿರ ಸೇರಿದಂತೆ 20 ವೈಶಿಷ್ಟ್ಯಪೂರ್ಣ ಕಲಾ ಕೌಶಲ್ಯಗಳ ಪ್ರದರ್ಶನ ನಡೆಯಿತು.