ಡೈಲಿ ವಾರ್ತೆ: 21/DEC/2023

ಕೊಡಾಜೆ : ಡಿ.22 ರಂದು ಭಾರತ್ ಕನ್ ಸ್ಟ್ರಕ್ಷನ್ ಕಛೇರಿ ಉದ್ಘಾಟನೆ.

ಬಂಟ್ವಾಳ : ಭಾರತ್ ಕನ್ ಸ್ಟ್ರಕ್ಷನ್ ಕಛೇರಿಯ ಉದ್ಘಾಟನಾ ಸಮಾರಂಭವು ಡಿ.22 ರಂದು ಬೆಳಿಗ್ಗೆ 8 00 ಕ್ಕೆ ಕೊಡಾಜೆಯ ಎ.ಆರ್ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.

ಸಯ್ಯಿದ್ ಇಬ್ರಾಹಿಂ ಅಲ್ ಹಾದಿ ಹಂಝ ತಂಙಳ್ ಪಾಟ್ರಕೋಡಿ ನೂತನ ಕಛೇರಿಯನ್ನು ಉದ್ಘಾಟಿಸಲಿದ್ದು, ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ ಅಧ್ಯಕ್ಷತೆ ವಹಿಸುವರು.

ಉದ್ಯಮಿಗಳಾದ ಫಾರೂಕ್ ಹಾಜಿ ಸುಲ್ತಾನ್, ಯೂಸುಫ್ ಹಾಜಿ ನೌಫಲ್, ಅದ್ದ ಹಾಜಿ ಅಫ್ಘಾನ್, ಉಮ್ಮರ್ ಹಾಜಿ ರಾಜ್ ಕಮಲ್, ಅಹಮದ್ ಹಾಜಿ ಯುನೈನ್, ಹರೀಶ್ ಶೆಟ್ಟಿ ಮಾಣಿ, ಅಶೋಕ್ ಕೊಂಡೆ, ಅತಾವುಲ್ಲಾ ನೇರಳಕಟ್ಟೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಇಬ್ರಾಹಿಂ ಕೆ.ಮಾಣಿ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಶ್ರೀಧರ್ ರೈ ಕುರ್ಲೆತ್ತಿಮಾರು, ಕೊಡಾಜೆ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ರಫೀಕ್ ಹಾಜಿ ಸುಲ್ತಾನ್, ಸಮಸ್ತ ಕೇರಳ ಮದರಸ ಮೇನೇಜ್ ಮೆಂಟ್ ಎಸೋಸಿಯೇಶನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ರಫೀಕ್ ಹಾಜಿ ನೇರಳಕಟ್ಟೆ, ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ರಾಜ್ ಕಮಲ್, ಕಾರ್ಯದರ್ಶಿ ನವಾಝ್ ಭಗವಂತಕೋಡಿ, ಸೋಷಿಯಲ್ ಇಖ್ವಾ ಫೆಡರೇಶನ್ ಸಲಹೆಗಾರ ಹನೀಫ್ ಖಾನ್ ಕೊಡಾಜೆ, ಅದ್ಯಕ್ಷ ಅಬ್ದುಲ್ ರಹಿಮಾನ್ ಸುಲ್ತಾನ್, ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಉಪಾಧ್ಯಕ್ಷ ಲತೀಫ್ ನೇರಳಕಟ್ಟೆ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಭಾರತ್ ಕನ್ ಸ್ಟ್ರಕ್ಷನ್ ಮಾಲಕ ಫಾರೂಕ್ ಗೋಳಿಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.