ಡೈಲಿ ವಾರ್ತೆ: 12/Jan/2024

ಜ.14 ರಂದು ವಿಟ್ಲದಲ್ಲಿ ಡಿ.ಗ್ರೂಪ್ ವಿಟ್ಲ ಮತ್ತು ಹಾಸನದ ಜನಪ್ರಿಯ ಆಸ್ಪತ್ರೆ ವತಿಯಿಂದ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರ

ಬಂಟ್ವಾಳ : ಡಿ.ಗ್ರೂಪ್ ವಿಟ್ಲ ಇದರ 15 ನೇ ವಾರ್ಷಿಕದ ಪ್ರಯುಕ್ತ ಜನಪ್ರಿಯ ಆಸ್ಪತ್ರೆ ಹಾಸನ ಹಾಗೂ ಮಂಗಳೂರು, ಮತ್ತು ಮಂಗಳೂರಿನ ಬ್ಲಡ್ ಡೋನರ್ಸ್ ಹಾಗೂ ವೆನ್ಲಾಕ್ ಆಸ್ಪತ್ರೆ ಇವುಗಳ ಸಹಯೋಗದೊಂದಿಗೆ ಉಚಿತ ಆರೋಗ್ಯ ಮತ್ತು ರಕ್ತದಾನ ಶಿಬಿರವು ಜ.14 ರಂದು ವಿಟ್ಲದ ಬ್ರೈಟ್ ಆಡಿಟೋರಿಯಂ ನಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2.30ರ ತನಕ ನಡೆಯಲಿದೆ ಎಂದು ಡಿ.ಗ್ರೂಪ್ ಅದ್ಯಕ್ಷ ಖಲಂದರ್ ಪರ್ತಿಪ್ಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ, ರಾಜಕೀಯ, ಸಾಮಾಜಿಕ ಗಣ್ಯರು ಭಾಗವಹಿಸಲಿದ್ದು ಹಾಸನದ ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥ ಅಬ್ದುಲ್ ಬಶೀರ್ ವಿ.ಕೆ.ಅವರ ನೇತೃತ್ವದಲ್ಲಿ ವಿವಿಧ ರೋಗಗಳ ನುರಿತ ತಜ್ಞ ವೈದ್ಯರುಗಳಾದ ಡಾ. ಅನೂಪ್, ಡಾ. ಅರವಿಂದ್, ಡಾ.ಸಹೀರ್ ವಿ.ಕೆ, ಡಾ.ಅವಿನಾಶ್, ಡಾ.ಆಲಂ ನವಾಝ್, ಡಾ.ಕಿರಾಸ್ ಪರ್ತಿಪ್ಪಾಡಿ, ಡಾ.ಮುಹಮ್ಮದ್ ನುಹ್ಮಾನ್, ಡಾ.ಶಾರೂಕ್ ಅಬ್ದುಲ್ಲಾ, ಡಾ.ಶಫೀಕ್ ಅಹಮದ್. ಡಾ.ಮುಹಮ್ಮದ್ ಅಫರ್, ಡಾ.ಮುಹಾದ್, ಡಾ.ಫಾತಿಮಾ ಇಸ್ಮತ್, ಡಾ.ಹವ್ವಾ ಇಲ್ಫತ್, ಡಾ.ಜೆಸ್ನಿ ಬಶೀರ್, ಡಾ.ಕೌಲತ್ ಶಾಝ್ ಶಾಫಿ, ಡಾ.ಸಅಲ ಅಹ್ಮದ್ ಶಾಫಿ ಅವರು ತಪಾಸಣೆ ನಡೆಸಲಿದ್ದಾರೆ.

ಶಿಬಿರದಲ್ಲಿ ರಕ್ತ ಪರೀಕ್ಷೆ, ಇಸಿಜಿ, ಹೃದಯ, ಕ್ಯಾನ್ಸರ್, ಕಿಡ್ನಿ, ಮೂತ್ರ ಕೋಶ, ಕಣ್ಣು, ದಂತ, ಸ್ತ್ರೀರೋಗ ಹಾಗೂ ಇನ್ನಿತರ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತದೆ. ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಡಿ.ಗ್ರೂಪ್ ಅದ್ಯಕ್ಷ ಖಲಂದರ್ ಪರ್ತಿಪ್ಪಾಡಿ ವಿನಂತಿಸಿದ್ದಾರೆ.