ಡೈಲಿ ವಾರ್ತೆ: 12/Jan/2024
ಉತ್ತಮ ಸ್ವಭಾವದಿಂದ ಜನಮನಸ್ಸುಗಳಲ್ಲಿ ಅಮರ ; ಮೌಲಾನಾ ಯೂಸುಫ್ ಅಮ್ಜದಿ
ಬಂಟ್ವಾಳ : ಉತ್ತಮ ಸ್ವಭಾವವು ಮನುಷ್ಯನನ್ನು ಉನ್ನತ ಸ್ಥಾನಕ್ಕೇರಿಸುತ್ತದೆ. ಜನರನ್ನು ಪರಸ್ಪರ ಪ್ರೀತಿಸುವುದು, ಪರರಿಗೆ ಒಳಿತನ್ನು ಬಯಸುವುದು, ತನ್ನಿಂದ ಯಾರಿಗೂ ತೊಂದರೆಯಾಗದಂತೆ ಬದುಕುವುದು ಇದು ಮನುಷ್ಯನನ್ನು ಮರಣದ ನಂತರವೂ ಜನ ಮನಸ್ಸುಗಳಲ್ಲಿ ಅಮರವಾಗಿಸುತ್ತದೆ ಈ ವಿಚಾರದಲ್ಲಿ ನಮ್ಮನ್ನಗಲಿದ ಅಮ್ಜದೀಸ್ ಕರ್ನಾಟಕ ಇದರ ರಾಜ್ಯಾಧ್ಯಕ್ಷರಾಗಿದ್ದ ಖಾಲಿದ್ ಅಮ್ಜದಿ ಕಲ್ಲಡ್ಕ ರವರು ಬಹಳ ಮುಂದಿದ್ದರು ಎಂದು ಕರ್ನಾಟಕ ರಾಜ್ಯ ಅಮ್ಜದೀಸ್ ಅಸೋಸಿಯೇಷನ್ ನ ನಿರ್ದೇಶಕ, ಕಾವಳಕಟ್ಟೆಯ ಅಲ್ ಖಾದಿಸ ಸಂಸ್ಥೆಯ ಮುದರ್ರಿಸ್ ಮೌಲಾನಾ ಯೂಸುಫ್ ರಝಾ ಅಮ್ಜದಿ ದಾವಣಗೆರೆ ನುಡಿದರು.
ಅವರು ಇತ್ತೀಚೆಗೆ ಅಲ್ ಖಾದಿಸಾ ವಿದ್ಯಾ ಸಂಸ್ಥೆಯಲ್ಲಿ ಕರ್ನಾಟಕ ರಾಜ್ಯ ಅಮ್ಜದೀಸ್ ಅಸೋಸಿಯೇಷನ್ ವತಿಯಿಂದ ನಡೆದ ಮರ್ಹೂಮ್ ಖಾಲಿದ್ ಅಮ್ಜದಿ ಅಲ್ ಅಫ್ಳಲಿ ರವರ ಅನುಸ್ಮರಣಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ನಝೀರ್ ಅಮ್ಜದಿ ಮಿತ್ತೂರು ಉದ್ಘಾಟಿಸಿ, ಅಬ್ದುಲ್ ಅಝೀಝ್ ಅಮ್ಜದಿ ಅಧ್ಯಕ್ಷತೆ ವಹಿಸಿದ್ದರು. ಡಾ.ಹನೀಫ್ ರಝಾ ಅಮ್ಜದಿ ಬೆಳ್ಳಾರೆ, ಎ.ಕೆ. ರಝಾ ಅಮ್ಜದಿ ಉಪ್ಪಿನಂಗಡಿ ಮಾತನಾಡಿದರು.
ಹಾಫಿಳ್ ಮುಈನುದ್ದೀನ್ ರಝಾ ಅಮ್ಜದಿ ಉಳ್ಳಾಲ, ಇರ್ಷಾದ್ ಅಮ್ಜದಿ ಮಠ, ರಫೀಕ್ ಅಮ್ಜದಿ ಬೆಳ್ಳಾರೆ, ಅಬ್ದುರ್ರಝಾಕ್ ಅಮ್ಜದಿ, ಇಬ್ರಾಹಿಂ ಅಮ್ಜದಿ, ಇಲ್ಯಾಸ್ ಅಮ್ಜದಿ ಕೂರ, ಆಸಿಫ್ ಅಮ್ಜದಿ ಉಪಸ್ಥಿತರಿದ್ದರು.
ಪಿ.ಎ.ಉಮರುಲ್ ಫಾರೂಕ್ ರಝಾ ಅಮ್ಜದಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.