ಡೈಲಿ ವಾರ್ತೆ: 15/Jan/2024

ಲೀಸಿಗೆ ಕೊಟ್ಟ ಹೋಟೆಲಿಗೆ ಅಗ್ರಿಮೆಂಟ್ ಮುಗಿಯುವ ಮೊದಲೇ ಕಟ್ಟಡ ಮಾಲೀಕರಿಂದ ಅಕ್ರಮ ಪ್ರವೇಶ: ಸುಳ್ಳು ದೂರು ದಾಖಲು, “ಲೀಸ್ ಪಡೆದವರಿಂದ ಸ್ಪಷ್ಟೀಕರಣ “

ಉಡುಪಿ: ಉಡುಪಿ ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿ ಇರುವ ಶಾಂಭವಿ ಫಾರ್ಚೂನ್ ಹೊಟೇಲನ್ನು ಅದರ ಮಾಲಕಿ ಮಮತಾ ಶೆಟ್ಟಿ ಯವರಿಂದ ದಿನೇಶ್ ಶೆಟ್ಟಿ ಯವರು 2021ರಲ್ಲಿ ಹತ್ತು ವರ್ಷದವರೆಗೆ ಲೀಸಿಗೆ ಪಡೆದಿರುತ್ತಾರೆ. ಇದರ ಬಗ್ಗೆ ಕ್ರಮವತ್ತಾದ ಎಗ್ರಿಮೆಂಟ್ ಕೂಡಾ ಆಗಿರುತ್ತದೆ.
ಇದರ ಮಧ್ಯೆ, ಕಳೆದ 2023ರ ಡಿ. 22 ರಂದು ಬೆಳಿಗ್ಗೆ 7:30 ರ ಸುಮಾರಿಗೆ ದಿನೇಶ್ ಶೆಟ್ಟಿ ಇಲ್ಲದ ಸಂದರ್ಭದಲ್ಲಿ ಕಟ್ಟಡದ ಮಾಲೀಕರಾದ ಮಮತಾ ಶೆಟ್ಟಿಯವರು ಹೋಟೆಲಿಗೆ ಅಕ್ರಮ ಪ್ರವೇಶ ಮಾಡಿ ಯಾವುದೋ ದುರುದ್ದೇಶದಿಂದ ದಿನೇಶ್ ಶೆಟ್ಟಿ ಮೇಲೆ ಸುಳ್ಳು ಆರೋಪ ಮಾಡಿ ಕೆಲಸಗಾರರನ್ನು ಹೊರಗೆ ಕಳಿಸಿ ಹೋಟೆಲ್ ಕೀ ಯನ್ನು ಬೇರೆಯವರಿಗೆ ಹಸ್ತಾಂತರ ಮಾಡಿದ್ದಾರೆ ಎಂದು ಆರೋಪಿಸಿ ಉಡುಪಿ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ದಿನೇಶ್ ಶೆಟ್ಟಿ ಹೋಟೆಲ್ ಕಟ್ಟಡವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ, ಲೀಸ್ ಎಗ್ರಿಮೆಂಟಿನ ಶರತ್ ಗಳನ್ನು ಉಲ್ಲಂಘಹಿಸಿದ್ದಾರೆ ಎಂದೂ ಆರೋಪಿಸಲಾಗಿದೆ. ಹೋಟೆಲ್ ನಲ್ಲಿ ಮಮತಾ ಶೆಟ್ಟಿಗೆ ಹಲ್ಲೆ ಮಾಡಲಾಗಿದೆ ಎಂದು ಕೂಡಾ ಸುಳ್ಳು ಆಪಾದನೆ ಮಾಡಿದ್ದು, ಇದು ಸತ್ಯಕ್ಕೆ ದೂರವಾಗಿದ್ದು ಇಲ್ಲಿ ಮಮತಾ ಶೆಟ್ಟಿ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ. ಅಲ್ಲದೆ ಕಟ್ಟಡವನ್ನು ದುರುಪಯೋಗ ಪಡಿಸಿಕೊಂಡಿಲ್ಲ ಬೇಕಿದ್ದಲ್ಲಿ ಸಿ.ಸಿ. ಟಿವಿಯನ್ನು ಪರಿಶೀಲಿಸಲಿ ಎಂದು ದಿನೇಶ್ ಶೆಟ್ಟಿಯವರು ಸ್ಪಷ್ಟೀಕರಣ ನೀಡಿದ್ದಾರೆ. ತನ್ನ ಮೇಲಿನ ಎಲ್ಲಾ ಆರೋಪಗಲೂ ದುರುದ್ದೇಶಪೂರಿತವಾಗಿದ್ದು, ಹೋಟೆಲಿನ ಲೀಸ್ ಎಗ್ರಿಮೆಂಟ್ ವಾಯಿದೆ ಮುಗಿಯುವ ಮುನ್ನವೇ ಅದನ್ನು ಬೇರೆಯವರಿಗೆ ಹಸ್ತಾಂತರಿಸುವ ಹುನ್ನಾರದಿಂದ ಹೀಗೆಲ್ಲ ಮಾಡಲಾಗಿದೆ ಎಂದ ಲೀಸ್ ದಾರ ಮಾಲಕಿ ಮಾಡಿದ ಎಲ್ಲ ಆಪಾದನೆಗಳನ್ನೂ ನಿರಾಕರಿಸಿದ್ದಾರೆ.