ಡೈಲಿ ವಾರ್ತೆ: 15/Jan/2024
ರಿಲಯನ್ಸ್ ಎಸೋಸಿಯೇಶನ್ ಬೊಳ್ಳೂರು ವತಿಯಿಂದ ಸರಳ ಸಾಮೂಹಿಕ ವಿವಾಹ – ಅರ್ಹ ವಧು ವರರಿಂದ ಅರ್ಜಿ ಆಹ್ವಾನ
ರಿಲಯನ್ಸ್ ಎಸೋಸಿಯೇಶನ್ ಬೊಳ್ಳೂರು(ರಿ.) ಹಳೆಯಂಗಡಿ ಇದರ ವತಿಯಿಂದ ಹಮ್ಮಿಕೊಳ್ಳಲಾಗಿರುವ ಸರಳ ಸಾಮೂಹಿಕ ವಿವಾಹಕ್ಕೆ ಸೂಕ್ತ ಹಾಗೂ ಅರ್ಹ ವಧು-ವರರ ಅರ್ಜಿ ಅಹ್ವಾನಿಸಲಾಗಿದೆ.
ಸಾಮೂಹಿಕ ವಿವಾಹ ಕಾರ್ಯಕ್ರಮವು ಇಂದಿರಾನಗರದ ರಿಲಯನ್ಸ್ ಭವನದಲ್ಲಿ ಮೇ 26 2024ರಂದು ನಡೆಯಲಿದೆ. ಆಸಕ್ತ ವಧು-ವರರು ಅರ್ಜಿ ನಮೂನೆಯನ್ನು ರಿಲಯನ್ಸ್ ಭವನ, ಇಂದಿರಾನಗರ, ಹಳೆಯಂಗಡಿ ಇಲ್ಲಿಗೆ ಮಾರ್ಚ್ 31 ರೊಳಗಾಗಿ ತಲುಪಿಸುವಂತೆ ಈ ಮೂಲಕ ಕೋರಲಾಗಿದೆ.
ವಧುವಿಗೆ 18 ವರ್ಷ ಮತ್ತು ವರನಿಗೆ 21 ವರ್ಷ ಪೂರ್ಣಗೊಂಡಿರಬೇಕು. ಅರ್ಜಿ ನಮೂನೆಯಲ್ಲಿ ವರ ಮತ್ತು ವಧುವಿನ ಭಾವಚಿತ್ರಗಳನ್ನು ಲಗತ್ತಿಸಿರಬೇಕು. ವಧು, ವರರ ವಯಸ್ಸಿನ ಬಗ್ಗೆ ಶಾಲಾ ಪ್ರಮಾಣ ಪತ್ರ ಅಥವಾ ಜನ್ಮ ದಿನಾಂಕ ಹೊಂದಿರುವ ಇತರ ದಾಖಲೆಗಳನ್ನು ಲಗತ್ತಿಸಿರಬೇಕೆಂದು ರಿಲಯನ್ಸ್ ಎಸೋಸಿಯೇಶನ್ ಬೊಳ್ಳೂರು (ರಿ.) ಇದರ ಅಧ್ಯಕ್ಷರು ಕಲಂದರ್ ಕೌಶಿಕ್ ಹಾಗು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮುಬಾರಕ್ ಇವರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಪರ್ಕಿಸಲು ಮೊ.ಸಂ:
74111 88899 , 9731643471.