ಡೈಲಿ ವಾರ್ತೆ: 16/Jan/2024
ಬಾಳೆಬೆಟ್ಟು ಫ್ರೆಂಡ್ಸ್ ವತಿಯಿಂದ ಸ್ಪರ್ಶ ಕಾರ್ಯಕ್ರಮ – ಡಾ. ಪಿ.ಸಿ. ಸುಧಾಕರ ಅವರಿಗೆ ಹುಟ್ಟೂರ ಪ್ರಶಸ್ತಿ ಪ್ರದಾನ
ಕೋಟ: ಸಂಘಟನೆಯ ಮೂಲಕ ಎಲ್ಲ ಸಾಧನೆಗಳನ್ನು ಸಾಧಿಸಬಹುದು. ಯುವ ಜನಾಂಗ ಕಟ್ಟಿ ಬೆಳೆಸಿದ ಸಂಘಟನೆ ಊರಿಗೆ ಉಪಕಾರಿಯಾಗುತ್ತದೆ ಕಾರ್ಯಕ್ರಮವನ್ನು ಆಯೋಜಿಸುವುದು ಮುಖ್ಯವಲ್ಲ ಕಲಾತ್ಮಕವಾಗಿ, ಸಮಾಜಮುಖಿಯಾಗಿ ಕಾರ್ಯಕ್ರಮ ರೂಪಿಸುವುದು ಅತೀ ಮುಖ್ಯ. ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಅವರು ಜ.14ರಂದು ಕೋಟ ಸಮೀಪದ ಬಾಳೆಬೆಟ್ಟು ಫ್ರೆಂಡ್ಸ್ ಮತ್ತು ಭಗತ್ ಸಿಂಗ್ ಯುವ ವೇದಿಕೆಯ ಆಶ್ರಯದಲ್ಲಿ ನಡೆದ ಸ್ಪರ್ಶ-2024ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು ಸಾಲಿಗ್ರಾಮದ ಖ್ಯಾತ ವೈದ್ಯ ಡಾ. ಪಿ.ಸಿ. ಸುಧಾಕರ ಅವರಿಗೆ ಹುಟ್ಟೂರ ಪ್ರಶಸ್ತಿ ಪ್ರದಾನ ಮಾಡಿದರು.
ಕೋಟ ಗೀತಾನಂದ ಫೌಂಡೇಶನ್ನ ಪ್ರವರ್ತಕ ಆನಂದ ಸಿ ಕುಂದರ್ ಸಂಸ್ಥೆಯ ಲಾಂಛನ ಅನಾವರಣಗೊಳಿಸಿದರು.
ಅಧ್ಯಕ್ಷತೆಯನ್ನು ಬಾಳೆಬೆಟ್ಟು ಫ್ರೆಂಡ್ಸ್ ಅಧ್ಯಕ್ಷ ರತ್ನಾಕರ ಪೂಜಾರಿ ವಹಿಸಿದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧಕರಾದ ಶಿವಮೂರ್ತಿ ಐತಾಳ್, ಅಣ್ಣಪ್ಪ ಪೂಜಾರಿ, ಗಣೇಶ್ ಕೊರಗ, ರಾಜು ಪೂಜಾರಿ ಬಾಳೆಬೆಟ್ಟು ಸಮಾಜ ಸೇವಕ ಗಣೇಶ್ ಭಂಡಾರಿ ಕೋಟ, ಪ್ರದೀಪ್ ಕುಮಾರ್ ಬನ್ನೂರು ಇವರನ್ನು ಸನ್ಮಾನಿಸಲಾಯಿತು. ಪರಿಸರದ ಮಾದರಿ ಸಂಘಟನೆಗಳಾದ ಕೋಟ ಮಹಿಳಾ ಮಂಡಳಿ, ಬೀಜಾಡಿ ಗೋಪಾಡಿ ಮಿತ್ರ ಸಂಗಮ, ಉಡುಪಿ ಕಿನಾರ ಮೀನುಗಾರರ ಕಂಪೆನಿಯನ್ನು ಗುರುತಿಸಿ ಗೌರವಿಸಲಾಯಿತು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಅನಾರೋಗ್ಯಪೀಡಿತರಿಗೆ ಆರೋಗ್ಯ ನಿಧಿ ವಿತರಿಸಲಾಯಿತು. ಮಾಜಿ ಶಾಸಕ ರಘುಪತಿ ಭಟ್, ಬ್ರಹ್ಮಾವರ ಪ್ರಿಯಾ ಆಸೋಸಿಯೇಟ್‌ನ ಆಕ್ಷತ್ ರಾಜ್, ಉದ್ಯಮಿಗಳಾದ ಗಣೇಶ್ ಕಿಣಿ ಬೆಳ್ವೆ, ಕುಶಲ್ ಶೆಟ್ಟಿ ಬೆಂಗಳೂರು ಚಾರ್ಟಡ್ ಅಕೌಂಟೆಂಟ್ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕಟ್ಟೆರೆ, ಕೋಟ ಗ್ರಾ.ಪಂ. ಉಪಾಧ್ಯಕ್ಷ ಪಾಂಡು ಪೂಜಾರಿ, ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸತೀಶ್ ಎಚ್. ಕುಂದರ್, ಉಮೇಶ್ ಪೂಜಾರಿ, ಕಾಂತಾರ ಚಲನಚಿತ್ರದ ನಟಿ ಸಪ್ತಮಿ ಗೌಡ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಘಟಕ, ಭಗತ್ ಸಿಂಗ್ ಯುವ ವೇದಿಕೆ ಅಧ್ಯಕ್ಷ ಪ್ರಸಾದ್ ಬಿಲ್ಲವ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕ ಹರೀಶ್ ಕುಮಾರ್ ಶೆಟ್ಟಿ ಪ್ರಾಸ್ತಾವಿಸಿದರು. ಪ್ರನುತ್ ಆರ್.ಗಾಣಿಗ ನಿರೂಪಿಸಿದರು.