ಡೈಲಿ ವಾರ್ತೆ: 16/Jan/2024

ಉಳ್ಳಾಲ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ DYFI – ಪೊಲೀಸ್ ಬಿಗಿ ಬಂದೋಬಸ್ತ್

ಉಳ್ಳಾಲ:ಉಳ್ಳಾಲ ಠಾಣಾಗೆ ಡಿವೈಎಫ್ ಐ ಸಂಘಟನೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಜ.16ರ ಮಂಗಳವಾರ ನಡೆದಿದೆ.
ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಭಟ್ ವಿರುದ್ಧ ಪ್ರತಿಭಟಿಸಿದ ಡಿವೈಎಫ್ ಐ ಮುಖಂಡರ ಮೇಲೆ ಪ್ರಕರಣ ದಾಖಲು ಮಾಡಿದ ಹಿನ್ನಲೆಯಲ್ಲಿ ಉಳ್ಳಾಲ ಠಾಣಾಗೆ ಡಿವೈಎಫ್ ಐ ಮುತ್ತಿಗೆ ಹಾಕಲು ಯತ್ನಿಸಿದೆ.
ಈ ವೇಳೆ ಮುಂಜಾಗ್ರತ ಕ್ರಮವಾಗಿ ಠಾಣೆಗೆ ಬೀಗ ಹಾಕಿ ಪೊಲೀಸರು ಸುರಕ್ಷತೆ ನೀಡಿದ ಘಟನೆಯೂ ನಡೆಯಿತು.

ಆರ್ ಎಸ್ಎಸ್ ಹಾಗೂ ಶಾಸಕರ ಚೇಲಾಗಳಂತೆ ಪೊಲೀಸರು ವರ್ತಿಸುತ್ತಿದ್ದಾರೆ ಎಂದು ಡಿವೈಎಫ್ ಐ ಆರೋಪಿಸಿ ಮಾಸ್ತಿಕಟ್ಟೆಯಿಂದ ಉಳ್ಳಾಲ ಠಾಣೆವರೆಗೆ ರ್‍ಯಾಲಿ ನಡೆಸಿ ಘೋಷಣೆಗಳೊಂದಿಗೆ ಕಾರ್ಯಕರ್ತರು ಮುತ್ತಿಗೆ ಹಾಕಿಲು ಯತ್ನಿಸಿದರು.

ಡಿವೈಎಫ್ ಐ ಪ್ರತಿಭಟನೆ ಹಿನ್ನಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಪೊಲೀಸರು ಉಳ್ಳಾಲ ಠಾಣೆಯ ಸುತ್ತಮುತ್ತ ನಿಯೋಜಿಸಲಾಗಿತ್ತು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.