ಡೈಲಿ ವಾರ್ತೆ: 19/Jan/2024



– ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ.

“ಅಯೋಧ್ಯಯಲ್ಲಿ ರಾಮ ಮಂದಿರ ನಿರ್ಮಾಣ….!”ರಾಮನ ಮೂರ್ತಿ ಕೆತ್ತನೆಗೆ ಮೈಸೂರು ಶಿಲ್ಪಿ ಅರುಣ್ ಯೋಗರಾಜ್ ನೇಮಕ….!” ಇವರು 2000 ಕೆತ್ತನೆಯ ಖ್ಯಾತಿ ಶಿಲ್ಪಿ….!”ಇದು ನಮ್ಮ ದೇಶದ ಹೆಮ್ಮೆ….!” ಜನವರಿ 22 ರಂದು ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠೆ….!”ದೇಶಾದಂತ್ಯ ಮೊಳಗಲಿದೆ ಜೈ ಶ್ರೀ ರಾಮ್ ಗೋಶಾವಾಕ್ಯ…!”

ಸುದ್ದಿ :ಮೈಸೂರು /ಅಯೋಧ್ಯ :-
ಶ್ರೀ ರಾಮ್, ಶ್ರೀ ರಾಮ್, ಶ್ರೀ ರಾಮ್… ಶ್ರೀ ರಾಮನ ಮೂರ್ತಿ ಪ್ರತಿಷ್ಠೆ ಕಾರ್ಯ ಬರ ದಿಂದ್ದ ಸಾಗುತಿದ್ದೆ. ಅಯೋಧ್ಯ ರಾಮ ಮಂದಿರ ಸ್ಥಾಪನೆ ನಮ್ಮ ಕನಸು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರೆ, ಒಂದೆಡೆ ಕೆಲವು ವಿರೋಧ ಪಕ್ಷಗಳು ಇದನ್ನ ಟೀಕೆ ಮಾಡುತ್ತಿರುವುದು ಎಲ್ಲೆಡೆ ಆಕ್ರೋಶಕ್ಕೆ ಗುರಿಯಾಗಿದೆ. ಏನೇ ಇರಲಿ ಹಿಂದುಗಳ ಭಾವನೆಯನ್ನು ಜೊತೆಗೂಡುವ ಶ್ರೀ ರಾಮನ ಅಯೋಧ್ಯ ನಿರ್ಮಾಣ ಹಂತದಲ್ಲಿ ಸಕಲ ಸಿದ್ಧತೆಗಳು ಸಿದ್ಧಗೊಂಡಿದ್ದು, ಜನವರಿ 22 ರಂದು ಲೋಕಾರ್ಪಣೆಗೆ ಸಿದ್ಧತೆ ಕೊಂಡಿದೆ. ಶ್ರೀರಾಮನ ದಿವ್ಯ ಕ್ಷೇತ್ರವಾಗಿರುವ ಅಯೋಧ್ಯ ಇನ್ನಷ್ಟು ಕಳೆಕಟ್ಟಲು ಸಿದ್ಧವಾಗಿದೆ.

ಮೈಸೂರಿನ ಶಿಲ್ಪಿ ಶ್ರೀ ಅರುಣ್ ಯೋಗರಾಜ್ ಪರಿಚಯ :-
ಮೈಸೂರಿನ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶ್ರೀರಾಮನ ಮೂರ್ತಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದೆ.
ಶ್ರೀರಾಮನ ವಿಗ್ರಹ ಕೆತ್ತನೆಗೆ ಬಳಸಲಾದ ಕಲ್ಲು ಸಹ ನಮ್ಮ ಕರ್ನಾಟಕದ ಎಚ್.ಡಿ.ಕೋಟೆಯದ್ದು ಎಂಬುದು ಕರ್ನಾಟಕಕ್ಕೆ ಮತ್ತೊಂದು ಗರಿ.
ರಾಮದೂತ ಹನುಮಂತನ ನಾಡು ಕರ್ನಾಟಕಕ್ಕೂ ಶ್ರೀರಾಮನಿಗೂ ಅವಿನಾಭಾವ ಸಂಭವವಿದೆ.
ಶ್ರೀ ರಾಮನ ಮೂರ್ತಿ ಕೆತ್ತುವ ಐತಿಹಾಸಿಕ ಮತ್ತು ಪುಣ್ಯ ಕಾರ್ಯದಲ್ಲಿ ಭಾಗಿಯಾದ ಕರುನಾಡಿನ ಹೆಮ್ಮೆಯ ಶಿಲ್ಪಿಗೆ ನಮ್ಮೆಲ್ಲರ ಅಭಿನಂದನೆಗಳು.

ಈ ಹಿಂದೆ ಪೂಜ್ಯ ಸಿದ್ದಗಂಗಾ ಸ್ವಾಮಿಗಳ ಪ್ರತಿಮೆ ಅನಾವರಣ ಸಮಯದಲ್ಲಿ ತುಮಕೂರು ಬಳಿಯ ಅರಳೂರಿ ನಲ್ಲಿ ಶ್ರೀ ಅರುಣ್ ಯೋಗಿರಾಜ್ ತುಂಬಾ ಶ್ರಮ ವಹಿಸಿದರು. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ಉದ್ಘಾಟನೆಗೆ ಇನ್ನು ಕೆಲವು ದಿನಗಳು ಬಾಕಿ ಇವೆ. ರಾಮಮಂದಿರದ ಗರ್ಭಗುಡಿಯಲ್ಲಿ ಸ್ಥಾಪಿಸಲಾಗುವ ಭಗವಾನ್ ರಾಮ್ ಲಲ್ಲಾನ ಮೂರ್ತಿ ಆಯ್ಕೆ ಪ್ರಕ್ರಿಯೆ ಅಂತಿಮಗೊಂಡಿದೆ. ಈ ನಡುವೆ ಮೈಸೂರಿನ ಶಿಲ್ಪಿ ಅರುಣ್ ಯೋಗರಾಜ್ ಕೆತ್ತನೆ ಮಾಡಿರುವ ಬಾಲರಾಮನ ಮೂರ್ತಿ ಆಯ್ಕೆಯಾಗಿರುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ವಿಪಕ್ಷನಾಯಕ ಆರ್ ಅಶೋಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಮೈಸೂರಿನ ಹೆಚ್ ಡಿ ಕೋಟೆಯ ಕೃಷ್ಣ ಶಿಲೆಯಲ್ಲಿ 5 ವರ್ಷದ ರಾಮಲಲ್ಲಾ ವಿಗ್ರಹ ಮಾಡಿದ್ದಾರೆ. ರಾಮನ ಮಂದಹಾಸದ ಮುಖ, ಹಾವಭಾವಗಳು ಚೆನ್ನಾಗಿ ಮೂಡಿ ಬಂದಿವೆ ಎಂದು ಅರುಣ್ ಹೇಳುತ್ತಿದ್ದರು. ಅಯೋಧ್ಯೆಯಲ್ಲಿ ಮೂರು ಕಡೆ ರಾಮನ ವಿಗ್ರಹ ಕೆತ್ತನೆ ಆಗುತ್ತಿದೆ. ಒಬ್ಬರು ಕೆತ್ತಿದ ಮೂರ್ತಿಯನ್ನು ಇನ್ನೊಬ್ಬರು ನೋಡುವಂತಿಲ್ಲ. ಆರು ತಿಂಗಳಿನಿಂದ ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ನಾವು ಬೇರೆ ಯಾವುದೇ ಕೆಲಸವನ್ನು ತೆಗೆದುಕೊಂಡಿಲ್ಲ. ಅಂತಿಮವಾಗಿ ನಾವು ಮಾಡಿರುವ ಮೂರ್ತಿ ಆಯ್ಕೆಯಾದರೆ ಅದು ನಮ್ಮ ಪುಣ್ಯ. ಜೊತೆಗೆ ಶ್ರೀ ರಾಮನ ಮೂರ್ತಿ ಮಾಡಲು ಅವಕಾಶ ಸಿಕ್ಕಿರುವುದೇ ನಮ್ಮ ಭಾಗ್ಯ. ರಾಮ ಜನ್ಮಭೂಮಿಗಾಗಿ, ಧರ್ಮದ ಉಳಿವಿಗಾಗಿ ಹಲವು ಜನರು ಹೋರಾಟ ಮಾಡಿದ್ದಾರೆ ಎಂದು ಹೇಳಿದರು. ಅರುಣ್ ಯೋಗಿರಾಜ್ ಇಲ್ಲಿಯವರೆಗೆ 1500 ರಿಂದ 2000 ಪ್ರತಿಮೆಗಳನ್ನು ಕೆತ್ತಿದ್ದಾರೆ. ಅದರಲ್ಲಿ ಮೈಸೂರಿನ ಹಾರ್ಡಿಂಜ್ ಸರ್ಕಲ್ನಲ್ಲಿರುವ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ, ಟೌನ್ ಹಾಲ್ನಲ್ಲಿರುವ ಅಂಬೇಡ್ಕರ್ ಪ್ರತಿಮೆ, ಮೈಸೂರಿನ ಪಾರಂಪರಿಕ ರೈಲ್ವೆ ನಿಲ್ದಾಣದಲ್ಲಿರುವ ಲೈಫ್ ಇಸ್ ಜರ್ನಿ ಪ್ರತಿಮೆಗಳು ಸೇರಿದಂತೆ ಹಲವು ಪ್ರಮುಖ ಪ್ರತಿಮೆಗಳನ್ನು ಇವರು ಕೆತ್ತಿದ್ದಾರೆ.

ಇದರ ಜೊತೆಗೆ ಹಲವು ದೇವಾಲಯಗಳಿಗೆ ದೇವರ ಮೂರ್ತಿಗಳನ್ನು ಕೆತ್ತಿದ್ದಾರೆ. ಮುಖ್ಯವಾಗಿ ದೆಹಲಿಯ ಇಂಡಿಯಾ ಗೇಟ್ನಲ್ಲಿರುವ ಸುಭಾಷ್ ಚಂದ್ರ ಬೋಸ್, ಉತ್ತರಾಖಂಡ್ನಲ್ಲಿರುವ ಆದಿಶಂಕರಚಾರ್ಮ ದೇಶಾದ್ಯಂತ ಗಮನ ಸೆಳೆದಿದ್ದವು. ಈ ಎರಡೂ ಪ್ರತಿಮೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ್ದು, ಶಿಲ್ಪಿ ಅರುಣ್ ಯೋಗಿರಾಜ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಅಯೋಧ್ಯೆಯಲ್ಲಿ ಅರುಣ್ ಕೆತ್ತನೆ ಮಾಡಿರುವ ರಾಮಲಲ್ಲಾ ಮೂರ್ತಿ ಆಯ್ಕೆ ಆಗಿ ಪ್ರಧಾನಿ ಉದ್ಘಾಟನೆ ಮಾಡಿದರೆ, ಒಟ್ಟು ಮೂರು ಪ್ರತಿಮೆಗಳನ್ನು ಉದ್ಘಾಟನೆ ಮಾಡಿದ ಕೀರ್ತಿಗೆ ಶಿಲ್ಪಿ ಅರುಣ್ ಯೋಗಿರಾಜ್ ಪಾತ್ರರಾಗಲಿದ್ದಾರೆ.

ಶ್ರೀ ರಾಮ ಜನ್ಮಭೂಮಿ ಮಂದಿರದ ವೈಶಿಷ್ಟ್ಯಗಳು
ಮಂದಿರವು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿದೆ.
ಮಂದಿರವು 380 ಅಡಿ ಉದ್ದ (ಪೂರ್ವ-ಪಶ್ಚಿಮ), 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ.
ಮಂದಿರವು ಮೂರು ಅಂತಸ್ತಿನದ್ದಾಗಿದ್ದು, ಪ್ರತಿ ಮಹಡಿಯು 20 ಅಡಿ ಎತ್ತರವಿದೆ. ಇದು ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿದೆ.
ಮುಖ್ಯ ಗರ್ಭಗುಡಿಯಲ್ಲಿ, ಭಗವಾನ್ ಶ್ರೀರಾಮನ ಬಾಲ್ಯದ ರೂಪವಿದೆ (ಶ್ರೀರಾಮಲಲಾ ವಿಗ್ರಹ) ಮತ್ತು ಮೊದಲ ಮಹಡಿಯಲ್ಲಿ ಶ್ರೀರಾಮ ದರ್ಬಾರ್ ಇರುತ್ತದೆ. ಐದು ಮಂಟಪಗಳು (ಹಾಲ್) – ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನೆ ಮತ್ತು ಕೀರ್ತನ ಮಂಟಪಗಳು.
ದೇವತೆಗಳು, ದೇವರುಗಳು ಮತ್ತು ದೇವತೆಗಳ ಪ್ರತಿಮೆಗಳು ಕಂಬಗಳು ಮತ್ತು ಗೋಡೆಗಳನ್ನು ಅಲಂಕರಿಸುತ್ತವೆ. ಪ್ರವೇಶವು ಪೂರ್ವದಿಂದ, ಸಿಂಹ ದ್ವಾರದ ಮೂಲಕ 32 ಮೆಟ್ಟಿಲುಗಳನ್ನು ಏರುತ್ತದೆ.
ಅಂಗವಿಕಲರು ಮತ್ತು ವೃದ್ಧರ ಅನುಕೂಲಕ್ಕಾಗಿ ಇಳಿಜಾರು ಮತ್ತು ಲಿಫ್ಟ್‌ಗಳನ್ನು ಒದಗಿಸಲಾಗುತ್ತದೆ.
732 ಮೀಟರ್ ಉದ್ದ ಮತ್ತು 14 ಅಡಿ ಅಗಲವಿರುವ (ಆಯತಾಕಾರದ ಸಂಯುಕ್ತ ಗೋಡೆ) ಮಂದಿರವನ್ನು ಸುತ್ತುವರೆದಿದೆ.
ಆವರಣದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಂದಿರಗಳಿವೆ – ಸೂರ್ಯ ದೇವ್, ದೇವಿ ಭಗವತಿ, ಗಣೇಶ್ ಭಗವಾನ್ ಮತ್ತು ಭಗವಾನ್ ಶಿವನಿಗೆ ಸಮರ್ಪಿತವಾಗಿದೆ. ಉತ್ತರದಲ್ಲಿ ಮಾ ಅನ್ನಪೂರ್ಣ ಮಂದಿರವಿದೆ ಮತ್ತು ದಕ್ಷಿಣದಲ್ಲಿ ಹನುಮಾನ್ ಜಿ ಮಂದಿರವಿದೆ. ಮಂದಿರದ ಹತ್ತಿರ ಒಂದು ಐತಿಹಾಸಿಕ ಬಾವಿ (ಸೀತಾ ಕೂಪ್) ಇದೆ, ಇದು ಪ್ರಾಚೀನ ಯುಗದ ಹಿಂದಿನದು. ಶ್ರೀ ರಾಮ ಜನ್ಮಭೂಮಿ ಮಂದಿರ ಸಂಕೀರ್ಣದಲ್ಲಿ, ಮಹರ್ಷಿ ವಾಲ್ಮೀಕಿ, ಮಹರ್ಷಿ ವಶಿಷ್ಠ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯ, ನಿಶಾದ್ ರಾಜ್, ಮಾತಾ ಶಬ್ರಿ ಮತ್ತು ದೇವಿ ಅಹಲ್ಯಾಳ ಪೂಜ್ಯ ಪತ್ನಿಗೆ ಸಮರ್ಪಿತವಾದ ಮಂದಿರಗಳಿವೆ. ಸಂಕೀರ್ಣದ ನೈಋತ್ಯ ಭಾಗದಲ್ಲಿ, ಕುಬೇರ್ ತಿಲಾದಲ್ಲಿ, ಭಗವಾನ್ ಶಿವನ ಪ್ರಾಚೀನ ಮಂದಿರವನ್ನು ಜಟಾಯು ಸ್ಥಾಪನೆಯೊಂದಿಗೆ ಪುನಃಸ್ಥಾಪಿಸಲಾಗಿದೆ.
ಮಂದಿರದಲ್ಲಿ ಎಲ್ಲಿಯೂ ಕಬ್ಬಿಣವನ್ನು ಬಳಸುವುದಿಲ್ಲ.
ಮಂದಿರದ ಅಡಿಪಾಯವನ್ನು 14-ಮೀಟರ್ ದಪ್ಪದ ರೋಲರ್-ಕಾಂಪ್ಯಾಕ್ಟ್ ಕಾಂಕ್ರೀಟ್ (RCC) ಪದರದಿಂದ ನಿರ್ಮಿಸಲಾಗಿದೆ, ಇದು ಕೃತಕ ಬಂಡೆಯ ನೋಟವನ್ನು ನೀಡುತ್ತದೆ.
ನೆಲದ ತೇವಾಂಶದಿಂದ ರಕ್ಷಣೆಗಾಗಿ, ಗ್ರಾನೈಟ್ ಬಳಸಿ 21 ಅಡಿ ಎತ್ತರದ ಸ್ತಂಭವನ್ನು ನಿರ್ಮಿಸಲಾಗಿದೆ. ಮಂದಿರ ಸಂಕೀರ್ಣವು ಒಳಚರಂಡಿ ಸಂಸ್ಕರಣಾ ಘಟಕ, ನೀರು ಸಂಸ್ಕರಣಾ ಘಟಕ, ಅಗ್ನಿ ಸುರಕ್ಷತೆಗಾಗಿ ನೀರು ಸರಬರಾಜು ಮತ್ತು ಸ್ವತಂತ್ರ ವಿದ್ಯುತ್ ಕೇಂದ್ರವನ್ನು ಹೊಂದಿದೆ.
25,000 ಜನರ ಸಾಮರ್ಥ್ಯದ ಪಿಲ್ಗ್ರಿಮ್ಸ್ ಫೆಸಿಲಿಟಿ ಸೆಂಟರ್ (PFC) ಅನ್ನು ನಿರ್ಮಿಸಲಾಗುತ್ತಿದೆ, ಇದು ಯಾತ್ರಾರ್ಥಿಗಳಿಗೆ ವೈದ್ಯಕೀಯ ಸೌಲಭ್ಯಗಳು ಮತ್ತು ಲಾಕರ್ ಸೌಲಭ್ಯವನ್ನು ಒದಗಿಸುತ್ತದೆ.
ಸಂಕೀರ್ಣವು ಸ್ನಾನದ ಪ್ರದೇಶ, ವಾಶ್‌ರೂಮ್‌ಗಳು, ವಾಶ್‌ಬಾಸಿನ್, ತೆರೆದ ಟ್ಯಾಪ್‌ಗಳು ಇತ್ಯಾದಿಗಳೊಂದಿಗೆ ಪ್ರತ್ಯೇಕ ಬ್ಲಾಕ್ ಅನ್ನು ಸಹ ಹೊಂದಿರುತ್ತದೆ.
ಮಂದಿರವನ್ನು ಸಂಪೂರ್ಣವಾಗಿ ಭಾರತದ ಸಾಂಪ್ರದಾಯಿಕ ಮತ್ತು ಸ್ಥಳೀಯ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗುತ್ತಿದೆ. ಪರಿಸರ-ಜಲ ಸಂರಕ್ಷಣೆಗೆ ನಿರ್ದಿಷ್ಟ ಒತ್ತು ನೀಡಿ 70 ಎಕರೆ ಪ್ರದೇಶದಲ್ಲಿ 70% ರಷ್ಟು ಹಸಿರು ಬಿಡಲಾಗಿದೆ. ಒಟ್ಟಾರೆಯಾಗಿ ರಾಮನ ಜನ್ಮಭೂಮಿ ಇನ್ನಷ್ಟು ಸುಂದರಗೊಳ್ಳಲು ಕ್ಷಣಗಣನೆ ಪ್ರಾರಂಭವಾಗಿದೆ.