



ಡೈಲಿ ವಾರ್ತೆ: 15/ಆಗಸ್ಟ್/ 2025


ಸೋಶಿಯಲ್ ಡೆಮಾಕ್ರಟಿಕ್ ಆಟೋ ಚಾಲಕರ ಯೂನಿಯನ್ ಚೊಕ್ಕಬೆಟ್ಟು ವತಿಯಿಂದ ಅದ್ದೂರಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ರಿಕ್ಷಾ ಪಾರ್ಕ್ ಉದ್ಘಾಟನೆ

ಸುರತ್ಕಲ್, ಆ15 : ಸೋಶಿಯಲ್ ಡೆಮಾಕ್ರಟಿಕ್ ಆಟೋ ಚಾಲಕರ ಯೂನಿಯನ್ ಚೊಕ್ಕಬೆಟ್ಟು ಘಟಕದ ವತಿಯಿಂದ ಅಧ್ಯಕ್ಷರಾದ ಸಯ್ಯದ್ ಇಬ್ರಾಹಿಂ ರವರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಎಸ್.ಡಿ.ಟಿ.ಯು ಆಟೋ ಪಾರ್ಕ್ ಉದ್ಘಾಟನೆ ನಡೆಯಿತು.
ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ಮುಹಿಯದ್ದೀನ್ ಜುಮ್ಮಾ ಮಸೀದಿ ಖತೀಬರಾದ ಬಹು| ಅಝೀಝ್ ದಾರಿಮಿಯವರು ನೆರೆವೆರಿಸಿ ಸಂದೇಶ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್.ಡಿ.ಟಿ.ಯು ಮಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಹಿಮಾನ್ ಬೋಳಿಯಾರ್ ರವರು ಎಸ್.ಡಿ.ಟಿ.ಯು ಆಟೋ ಪಾರ್ಕ್ ಉದ್ಘಾಟಿಸಿ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ವಿವರಿಸಿ ದಿಕ್ಸೂಚಿ ಭಾಷಣ ಮಾಡಿದರು.
ಚೊಕ್ಕಬೆಟ್ಟು 5 ನೇ ವಾರ್ಡಿನ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಶಂಸಾದ್ ಅಬೂಬಕ್ಕರ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಎಸ್.ಡಿ.ಟಿ.ಯು ಆಟೋ ಚಾಲಕರ ಸಾಮಾಜಿಕ ಸೇವೆಗಳನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಜಾಮಿಯಾ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಶಂಸುದ್ದೀನ್ ಪ್ಲೈಕಿಂಗ್,ಎಸ್.ಡಿ.ಪಿ.ಐ ಸುರತ್ಕಲ್ ಬ್ಲಾಕ್ ಅಧ್ಯಕ್ಷರಾದ ನೌಶಾದ್ ಚೊಕ್ಕಬೆಟ್ಟು,
ಎಸ್.ಡಿ.ಟಿ.ಯು ಆಟೋ ಚಾಲಕರ ಯೂನಿಯನ್ ಚೊಕ್ಕಬೆಟ್ಟು ಉಪಾಧ್ಯಕ್ಷರಾದ ಇಲ್ಯಾಸ್,ಕಾರ್ಯದರ್ಶಿ ಅಝೀಝ್ ಅಹ್ಮದ್,ಜೊತೆ ಕಾರ್ಯದರ್ಶಿ ಕಬೀರ್,
ಕೋಶಾಧಿಕಾರಿ ಹೈದರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಇಲ್ಯಾಸ್ ಸ್ವಾಗತಿಸಿ ಕಮಾಲ್ ನಿರೂಪಿಸಿ ಧನ್ಯವಾದಗೈದರು.