



ಡೈಲಿ ವಾರ್ತೆ: 15/ಆಗಸ್ಟ್/ 2025


ತೆಕ್ಕಟ್ಟೆ ಹ್ಯಾಪಿ ಕಾರ್ ಸಂಸ್ಥೆಯಿಂದ 79ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕೋಟ: ತೆಕ್ಕಟ್ಟೆ ಹ್ಯಾಪಿ ಕಾರ್ ಸಂಸ್ಥೆಯಿಂದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮ ದಿಂದ ಆಚರಿಸಲಾಯಿತು.

ಮುಖ್ಯ ಅತಿಥಿಗಳಾದ ಖಾಜಿ ಇಲಿಯಾಸ್ ಕೋಟೇಶ್ವರ, ಉದ್ಯಮಿ ಮಲ್ಯಾಡಿ ಶಿವರಾಮ್ ಶೆಟ್ಟಿ, ಕುಂದಾಪುರ ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷರಾದ ಲಿಯಾಖತ್ ಆಲಿ ಇವರು ಧ್ವಜಾರೋಹಣವನ್ನು ನೆರವೇರಿಸಿದರು.


ಈ ಸಂದರ್ಭದಲ್ಲಿ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತೆಕ್ಕಟ್ಟೆ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಸಲಾಂ, ಉದ್ಯಮಿ ಆದಿಲ್ ತೆಕ್ಕಟ್ಟೆ, ಉದ್ಯಮಿ ಖರಾಮತುಲ್ಲಾ, ಸಂಸ್ಥೆಯ ಮಾಲೀಕರಾದ ಮುದಸ್ಸರ್ & ನಿಹಾಲ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮಹಮ್ಮದ್ ಆಸಿಫ್ ನಿರೂಪಿಸಿ ವಂದಿಸಿದರು.