ಡೈಲಿ ವಾರ್ತೆ: 15/ಆಗಸ್ಟ್/ 2025

ಬೈಂದೂರು ಜಾಮಿಯ ಮಸೀದಿಯಲ್ಲಿ ಸಂಭ್ರಮದ 79ನೇ ಸ್ವಾತಂತ್ರ್ಯೋತ್ಸವ ಆಚರಣೆ

ಬೈಂದೂರು ಜಾಮಿಯ ಮಸೀದಿಯಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಅಂಜುಮನ್ ಶಭಾಬುಲ ಇಸ್ಲಾಂ ವೆಲ್ಫೇರ್ ಟ್ರಸ್ಟ್ ಇದರ ಅಧ್ಯಕ್ಷರಾದ ಜನಾಬ್ ಸೈಯದ್ ಅಲಿ ಕೋಯಾ ಅವರು ಧ್ವಜಾರೋಹಣ ನೆರವೇರಿಸಿದರು.

ಬೈಂದೂರು ಜಾಮಿಯ ಮಸೀದಿ ಇಮಾಮ್ ತಯ್ಯಬ್ ಹುಸೇನ್ ನೂರಿ, ನೂರ್ ಮಸೀದಿ ಬೈಂದೂರು ಇದರ ಇಮಾಮ್ ಮಸೂದ್ ಮದನಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷರಾದ ಶಬ್ಬೀರ್ ಬೈಂದೂರ್, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷರಾದ ಮನ್ಸೂರ್ ಹಳೆಗೇರಿ, ಧಾರ್ಮಿಕ ಮುಖಂಡರಾದ ನಾಗೂರ್ ನಾಸಿರ ಅಹಮದ್ ಸಾಹೇಬ್, ಬೈಂದೂರು ಮುಸ್ಲಿಂ ಒಕ್ಕೂಟ ಕಾರ್ಯದರ್ಶಿ ತುಫೈಲ್ ಅಹಮದ್, ಬೈಂದೂರು ದಫ್ ಕಮಿಟಿ ನಾಯಕರಾದ ಸುಭಾನ್ ಶಿಂಗೇರಿ, ಸಾಮಾಜಿಕ ಕಾರ್ಯಕರ್ತ ಮಹಮ್ಮದ್ ಇಲ್ಯಾಸ್ ಬಂಕೇಶ್ವರ ಮತ್ತಿತರ ಮುಖಂಡರು ಹಾಗೂ ಊರಿನ ಜಮಾತ್ ಬಾಂಧವರು ಭಾಗವಹಿಸಿದರು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು