ಡೈಲಿ ವಾರ್ತೆ: 02/Feb/2024
ಮುಂಬೈ: 6 ಕಡೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂಗೆ ಬೆದರಿಕೆ ಕರೆ
ಮುಂಬೈ: ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಅಪರಿಚಿತರು ಬೆದರಿಕೆ ಹಾಕಿದ್ದಾರೆ. ಮುಂಬೈನ 6 ಸ್ಥಳಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಮುಂಬೈ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂಗೆ ಅಪರಿಚಿತರು ಬೆದರಿಕೆ ಕರೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಗರದ 6 ಸ್ಥಳಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಎಂಬ ಸುದ್ದಿ ತಿಳಿದ ತಕ್ಷಣ ಮುಂಬೈ ಸಂಚಾರ ಪೊಲೀಸ್ ನಿಯಂತ್ರಣ ಕೊಠಡಿಗೆ ತಲುಪಿತ್ತು.
ಈ ಮಾಹಿತಿಯನ್ನು ತಕ್ಷಣವೇ ಮುಂಬೈ ಪೊಲೀಸರಿಗೆ ನೀಡಲಾಯಿತು. ಮಾಹಿತಿ ಪಡೆದ ಮುಂಬೈ ಪೊಲೀಸರು ಸಂದೇಶ ಕಳುಹಿಸಿದವ ಬಗ್ಗೆ ಮಾಹಿತಿ ಪತ್ತೆ ಹಚ್ಚಲು ಆರಂಭಿಸಿದ್ದಾರೆ.
ಮುಂಬೈ ನಗರದಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆಯ ಫೋನ್ ಅಥವಾ ಸಂದೇಶ ಬಂದಿರುವುದು ಇದೇ ಮೊದಲಲ್ಲ. ಈ ಮೊದಲು ಮುಂಬೈ ಪೊಲೀಸ್ ಮತ್ತು ಕಂಟ್ರೋಲ್ ರೂಂಗೆ ಬೆದರಿಕೆಗಳು ಬಂದಿವೆ. ಆದರೆ ಯಾವುದನ್ನೂ ನೆಗ್ಲೆಕ್ಟ್ ಮಾಡುವಂತಿಲ್ಲ.
ಕಳೆದ ವರ್ಷದ ಘಟನೆ ಮುಂಬೈ: ಆರ್‌ಬಿಐ, ವಿವಿಧ ಬ್ಯಾಂಕ್‌ಗಳ ಕೇಂದ್ರ ಕಚೇರಿಗಳಿಗೆ ಹುಸಿ ಬಾಂಬ್ ಬೆದರಿಕೆ ನಗರದ ಆರ್‌ಬಿಐ ಕೇಂದ್ರ ಕಚೇರಿ ಸೇರಿದಂತೆ ಹನ್ನೊಂದು ಕಡೆಗಳಲ್ಲಿ ಮಧ್ಯಾಹ್ನ 1.30 ಗಂಟೆಗೆ ಬಾಂಬ್ ಸ್ಫೋಟವಾಗುತ್ತದೆ. ಎಲ್ಲೆಡೆ ಶಕ್ತಿಶಾಲಿ ಬಾಂಬ್‌ಗಳನ್ನು ಅಳವಡಿಸಲಾಗಿದೆ ಎಂಬ ಬೆದರಿಕೆ ಸಂದೇಶದ ಇ-ಮೇಲ್ ಮಂಗಳವಾರ ಪೊಲೀಸರನ್ನು ತಲ್ಲಣಗೊಳಿಸಿತ್ತು.
ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಎಲ್ಲೆಡೆ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದರು. ಪೊಲೀಸರ ಜತೆ ಬಾಂಬ್ ಪತ್ತೆ ದಳ ಕೂಡ ಜತೆಗೂಡಿತ್ತು. ಆದರೆ ಯಾವುದೇ ಶಂಕಿತ ವಸ್ತುಗಳೂ ಪತ್ತೆಯಾಗಲಿಲ್ಲ. ಇದೊಂದು ಹುಸಿ ಬೆದರಿಕೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದರು.
ಬಾಂಬ್ ಬೆದರಿಕೆ ಜತೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ರಾಜೀನಾಮೆ ನೀಡಬೇಕು ಎಂದು ಇ-ಮೇಲ್‌ನಲ್ಲಿ ಒತ್ತಾಯಿಸಲಾಗಿತ್ತು. ಅಲ್ಲದೆ ಬ್ಯಾಂಕಿಂಗ್ ಹಗರಣವನ್ನು ಬಹಿರಂಗಪಡಿಸುವ ಬಗ್ಗೆ ಸಂಪೂರ್ಣ ಹೇಳಿಕೆಯನ್ನು ಬಿಡುಗಡೆ ಮಾಡಬೇಕು ಎಂದು ಇ – ಮೇಲ್‌ನಲ್ಲಿ ಒತ್ತಾಯಿಸಲಾಗಿತ್ತು.
ಬೆದರಿಕೆ ಸಂದೇಶದವನ್ನು ಕಳುಹಿಸಿದ ಇ-ಮೇಲ್‌ನಲ್ಲಿ ಕಿಲಾಫತ್ ಇಂಡಿಯಾ ಎಂಬ ಯೂಸರ್‌ನೇಮ್ ಇತ್ತು. ಈ ಸಂಬಂಧ ಮುಂಬಯಿನ ಎಂಆರ್‌ಎ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ತನಿಖೆ ನಡೆಸಲಾಗಿತ್ತು.