ಡೈಲಿವಾರ್ತೆ:18/ಮಾರ್ಚ್/2026

ಸರಕಾರ ಗಾಣಿಗ ಸಮುದಾಯದ ಅಭಿವೃದ್ದಿಗಾಗಿ ನಿಗಮ ಸ್ಥಾಪನೆ: ಮಾಜಿ ಸಭಾಪತಿ ವಿ.ಆರ್ ಸುದರ್ಶನ್

ಕೋಟ: ಗಾಣಿಗ ಸಮುದಾಯದ ಗುರು ಮಠವಾದ ಕುಂದಾಪುರ ವ್ಯಾಸರಾಜ ಮಠಕ್ಕೆ ಮಂಗಳವಾರ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್ ಸುದರ್ಶನ್, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣ ಸ್ವಾಮಿ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿ.ಆರ್ ಸುದರ್ಶನ್ ಮಾತನಾಡಿ ಗಾಣಿಗ ಸಮುದಾಯ ಸಂಘಟನೆಯ ಮೂಲಕ ಬಲಗೊಳ್ಳಬೇಕಿದೆ. ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಾಣಿಗ ಸಮುದಾಯ ಗುರುತಿಸಿಕೊಳ್ಳುವುದರ ಮೂಲಕ ರಾಜಕೀಯವಾಗಿ ಬೆಳೆದು ತನ್ನ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು. ರಾಜ್ಯ ಸರಕಾರ ಗಾಣಿಗ ಸಮುದಾಯದ ಅಭಿವೃದ್ದಿಗಾಗಿ ಗಾಣಿಗರ ಅಭಿವೃದ್ದಿ ನಿಗಮ ಸ್ಥಾಪಿಸಿದೆ ಎಂದರು.

ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಕಿಶನ್ ಹೆಗ್ಡೆ, ಶಂಕರ್ ಕುಂದರ್, ಭುಜಂಗ ಗುರಿಕಾರ್ ಮೊದಲಾದವರು ಉಪಸ್ಥಿತರಿದ್ದರು.

ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಸತೀಶ್ ಗಾಣಿಗ ಕುಂದಾಪುರ, ಮಾಜಿ ಅಧ್ಯಕ್ಷ ರಮೇಶ್ ಗಾಣಿಗ ಕೊಲ್ಲೂರು, ಕಾರ್ಯದರ್ಶಿ ರಾಘವೇಂದ್ರ ಗಾಣಿಗ ಆನಗಳ್ಳಿ, ಕೋಶಾಧಿಕಾರಿ ಹೆಚ್.ಎಸ್.ಗಾಣಿಗ, ಮಾಜಿ ಉಪಾಧ್ಯಕ್ಷ ನಾರಾಯಣ ಗಾಣಿಗ ಕುಂದಾಪುರ, ಕಾರ್ಯಕಾರಿ ಸಮಿತಿಯ ಸದಸ್ಯ ಗುರುರಾಜ್ ಹಂಗಳೂರು ಮೊದಲಾದವರು ವಿ.ಆರ್.ಸುದರ್ಶನ್, ನಾರಾಯಣ ಸ್ವಾಮಿ ಮೊದಲಾದವರಿಗೆ ಶಾಲು ಹೊದಿಸಿ ಗೌರವಿಸಿದರು.

ಸಂಘದ ವತಿಯಿಂದ ಸರಕಾರದ ಅನುದಾನಕ್ಕಾಗಿ ಮನವಿ ಸಲ್ಲಿಸಲಾಯಿತು.
. ಪತ್ರಕರ್ತ ಚಂದ್ರಶೇಖರ ಬೀಜಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.