ಡೈಲಿ ವಾರ್ತೆ: 06/Feb/2024

✒️ ಓಂಕಾರ ಎಸ್. ವಿ. ತಾಳಗುಪ್ಪ

ಶಿವಮೊಗ್ಗ ಮಹಾ ನಗರಪಾಲಿಕೆಯಲ್ಲಿ ನಿಲ್ಲದ ಭ್ರಷ್ಟಾಚಾರ – ಜನನ ಮರಣ ಪ್ರಮಾಣ ಪತ್ರ ನೀಡಲು ಲಂಚಕ್ಕೆ ಕೈ ಚಾಚಿದ ಕಡು ಭ್ರಷ್ಟ – ಲೋಕಾಯುಕ್ತ ಬಲೆಗೆ FDA ನಾಗರಾಜ

ಶಿವಮೊಗ್ಗ: ಶಿವಮೊಗ್ಗ ಮಹಾ ನಗರ ಪಾಲಿಕೆಯಲ್ಲಿ ಮಿತಿಮೀರಿದ ಭ್ರಷ್ಟಾಚಾರ ಬ್ರಹ್ಮಾಂಡ ಕೇಳಿ ಬರುತ್ತಿದ್ದೂ, ಜನನ ಮತ್ತು ಮರಣ ವಿಭಾಗದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಎಫ್ ಡಿ ಎ ನಾಗರಾಜ್ ಎಂಬುವರನ್ನ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜನನ ಮತ್ತು ಮರಣ ವಿಭಾಗದಲ್ಲಿ ಶಿವಮೊಗ್ಗ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದೆ. ಮಹಾನಗರ ಪಾಲಿಕೆಯಲ್ಲಿ ಜನನ ಪ್ರಮಾಣ ಪತ್ರ ನೀಡಲು ಲಂಚ ಕೇಳಿದ್ದ ನೌಕರನ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಒಂದು ಸಾವಿರ ಲಂಚ ಪಡೆಯುವಾಗ ಎಫ್‌ಡಿಎ ನಾಗರಾಜ್ ಲೋಕಾಯುಕ್ತ ದಾಳಿಗೆ ಒಳಗಾಗಿದ್ದಾರೆ. ಮಹಾನಗರ ಪಾಲಿಕೆ ಜನನ ಮತ್ತು ಮರಣ ನೋಂದಣಾಧಿಕಾರಿಗೆ ಗೀರಿಶ್ ಎಂಬುವವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ದಾಳಿ ನಡೆದಿದೆ. ಭ್ರಷ್ಟರ ಸಿಂಹಸ್ವಪ್ನ ಎಂದೇ ಖ್ಯಾತರಾದ ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ ನೇತೃತ್ವದಲ್ಲಿ ದಾಳಿ ನಡೆದಿದೆ. ಈ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದ FDA ನಾಗರಾಜ ವಿರುದ್ಧ ಕಾನೂನು ಕ್ರಮ ಕೈಗೊಂಡು ವಿಚಾರಣೆ ಮುಂದುವರೆದಿದೆ.