ಡೈಲಿ ವಾರ್ತೆ: 06/Feb/2024

ಬಂಟ್ವಾಳ : ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿ ಕೊಂಡಿದ್ದ ಉತ್ತರ ಪ್ರದೇಶ ಮೂಲದ 18 ಮಂದಿ ಬಂಧನ, ಬಿಡುಗಡೆ

ಬಂಟ್ವಾಳ : ಅಕ್ರಮ ಮರಳುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿ ಬಿಡುಗಡೆಗೊಂಡ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಉತ್ತರ ಪ್ರದೇಶ ಮೂಲದ 18 ಮಂದಿಯನ್ನು ಬಂಟ್ವಾಳ ಗ್ರಾಮಾಂತರ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 247/2017 ಕಲಂ 379 & 34 i p c ಮಾನ್ಯ ಎ.ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯದ ಸಿ.ಸಿ ನಂಬ್ರ 1266/2018 ರ ಆರೋಪಿತರು ಸುಮಾರು 5 ವರ್ಷಗಳಿಂದ ತಲೆಮರೆಸಿಕೊಂಡಿದ್ದರು.

ಉತ್ತರ ಪ್ರದೇಶದ ಬಲಿಯಾ ಜಿಲ್ಲೆ, ಘಾಜೀಯಾಪುರ ಪೀಯುಶ್ ಕುಮಾರ್, ವಿನಯ್ ಕುಮಾರ್ , ಬ್ರಿಜಿ ನಾರಾಯಣ, ರವೀಂದ್ರ ಕೃಪ ಶಂಕರ್, ವಿವೇಕ್ ರಾಮ್, ಬದ್ಧ ರಾಮ್, ನಂದಿನಿ ರಾಮ್, ಕಿಶೋರ್ ಕುಮಾರ್, ಶಾಮ್ ಬಿಹಾರಿ ರಾಮ್, ಪ್ರೇಮಾಚಂದ ರಾಮ್, ಸತೇಂದ್ರ, ಭಗವಾನ್ ರಾಮ್, ಉಮೇಶ್ ರಾಮ್, ರಾಸ್ ಬಿಹಾರಿ ರಾಮ್, ಭಗೀರಥಿ ಚೌಧರಿ, ಸುನೀಲ್ ರಾಮ್ ಹಾಗೂ ನಂದಿಹಳ ರಾಮ್ ಬಂಧಿತ ಆರೋಪಿಗಳು.

ಪೊಲೀಸ್‌ ನಿರೀಕ್ಷಕ ಶಿವಕುಮಾರ ಬಿ. ಹಾಗೂ ಪೊಲೀಸ್‌ ಉಪ ನಿರೀಕ್ಷಕ ಹರೀಶ್‌ ಎಂ.ಆರ್‌ ರವರ ಮಾರ್ಗದರ್ಶನದಲ್ಲಿ ಉಪ ನಿರೀಕ್ಷಕ ಮೂರ್ತಿ, ಹೆಚ್.ಸಿ ಗಣೇಶ್ ಪ್ರಸಾದ್ , ಪಿ.ಸಿ ಯೋಗೇಶ್‌ . ಡಿ.ಎಲ್‌ ವಿಜಯ್‌ ಕುಮಾರ್‌ ಸುರೇಶ್ ಉಪ್ಪಾರ ಇವರು ಉತ್ತರ ಪ್ರದೇಶಕ್ಕೆ ತೇರಳಿ ಮಾಹಿತಿ ಸಂಗ್ರಹಿಸಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನ್ಯಾಯಾಲಯವು ಸದ್ರಿ ಆರೋಪಿಗಳಿಗೆ ದಂಡ ವಿಧಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿ, ಅವರನ್ನು ಬಿಡುಗಡೆಗೊಳಿಸಿದೆ.