ಡೈಲಿ ವಾರ್ತೆ: 12/Feb/2024

ವರದಿ: ಶಿವಾನಂದಸ್ವಾಮಿ ಆರ್.ಬಿದರಕುಂದಿ ದೊರೆ.

ಶಿಕ್ಷಣ ಕೇಂದ್ರವನ್ನು ಆರಂಭಿಸಲು
ಸಚಿವ ಸತೀಶ್ ಜಾರಕಿಹೊಳಿಯವರು ತೀರ್ಮಾನ.


ಸುರಪುರ:ಫೆ.12. ತಾಲೂಕಿನ ಬಂಡೋಳಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಿಂದ ಖರೀದಿಸಿದ ಜಮೀನಿನಲ್ಲಿ ಶಿಕ್ಷಣ ಕೇಂದ್ರವನ್ನ ಆರಂಭಿಸಲು ಮತ್ತು ಅಲ್ಲಿಯ ವಾಲ್ಮೀಕಿ ಗುರುಪೀಠದ ಶಾಲೆಯನ್ನು ನಡೆಸಲು ಈಗಾಗಲೇ ಪೂಜ್ಯ ಗುರುಗಳಾದ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು ಮತ್ತು ನಮ್ಮ ಸಮಾಜದ ಮುತ್ಸದ್ದಿ ರಾಜಕಾರಣಿ ಹಾಗೂ ಕರ್ನಾಟಕ ಸರಕಾರದ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿಯವರು ತೀರ್ಮಾನ ಕೈಗೊಂಡಿದ್ದಾರೆ.

ಆದಕಾರಣ ನಾಳೆ ಬೆಳಿಗ್ಗೆ ಆ ಜಮೀನವನ್ನು ಸ್ವಚ್ಚತಾ ಕಾರ್ಯ ಪ್ರಾರಂಭವಾಗಲಿದೆ. ನಮ್ಮ ಸಮಾಜದ ಬಂಧುಗಳು ಆಗಮಿಸಿ ಅಲ್ಲಿ ನಡೆಯುವ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಸದೊಂದು ಆಶಾಕಿರಣ ಹುಟ್ಟಿಸಿದಂತಾಗಿದೆ. ಮುಂದಿನ ದಿನಮಾನದಲ್ಲಿ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗುವ ದೃಷ್ಟಿಯಿಂದ ಶಿಕ್ಷಣ ಸಂಸ್ಥೆ ಆರಂಭವಾಗುತ್ತಿರುವುದು ಸಂತೋಷದಾಯಕ ವಿಷಯ ಎಲ್ಲಾ ನಮ್ಮ ಸಮಾಜ ಬಂಧುಗಳು ಸುರಪುರ ನಗರ ಸಮಿತಿಯ ವಾಲ್ಮೀಕಿ ಸಂಘದ ಪದಾಧಿಕಾರಿಗಳು ಹಾಗೂ ತಾಲೂಕ ವಾಲ್ಮೀಕಿ ನಾಯಕ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಗ್ರಾಮಗಳ ವಾಲ್ಮೀಕಿ ನಾಯಕ ಸಮಾಜದ ಬಾಂಧವರು ಹಿರಿಯರು ಮುಖಂಡರು ಯುವಕರು ಭಾಗವಹಿಸಲು ಸುರಪುರ
ತಾಲೂಕ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಅಧ್ಯಕ್ಷರಾದ ಗಂಗಾಧರ ನಾಯಕ್ ತಿಂಥಣಿ ಇವರು ವಿನಂತಿಸಿದ್ದಾರೆ.