ಡೈಲಿ ವಾರ್ತೆ: 12/Feb/2024


ವರದಿ: ಶಿವಾನಂದಸ್ವಾಮಿ ಆರ್.ಬಿದರಕುಂದಿ ದೊರೆ.

ವಾಲ್ಮೀಕಿ ಸಂಘದಿಂದ ಬೃಹತ್ ಪ್ರತಿಭಟನೆ


ಹುಣಸಗಿ:ಫೆ12. ತಾಲೂಕಿನ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಹಾಗೂ ಹುಣಿಸಗಿ ನಗರ ವಾಲ್ಮೀಕಿ ಸಂಘದಿಂದ ಇಂದು ಬೃಹತ್ ಪ್ರತಿಭಟನೆ ಮಾಡಲಾಯಿತು.

ಶ್ರೀ ಬಸವೇಶ್ವರ ಚೌಕದಿಂದ ಬೃಹತ್ ಮೆರವಣಿಗೆಯೊಂದಿಗೆ ಘೋಷಣೆ ಕೂಗುತ್ತಾ ತಹಸಿಲ್ದಾರ್ ಕಚೇರಿಯವರಿಗೆ ಮೆರವಣಿಗೆ ಸಾಗಿತು.

ಕರ್ನಾಟಕ ರಾಜ್ಯ ಎಸ್ ಸಿ ಎಸ್ ಟಿ ನಕಲಿ ಜಾತಿ ಪ್ರಮಾಣ ಪತ್ರಗಳ ತಡೆ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಶ್ರೀ ಶ್ರವಣಕುಮಾರ್ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಜೀವ ಬೆದರಿಕೆ ಜಾತಿ ನಿಂದನೆ ಹಾಗೂ ತೇಜೋವಧೆ ಮತ್ತು ಪರಿಶಿಷ್ಟ ಪಂಗಡದ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ರಕ್ಷಣೆ ಮಾಡುತ್ತಿರುವ ಮತ್ತು ಸಮಾಜ ಸಮಾಜದ ಮಧ್ಯೆ ದ್ವೇಷಗಳನ್ನು ಹಚ್ಚುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಶ್ರವಣಕುಮಾರ್ ಡಿ ನಾಯಕ್ ರಾಜ್ಯಾಧ್ಯಕ್ಷರಿಗೆ ಈಗಾಗಲೇ ಪರಿಶಿಷ್ಟ ವರ್ಗಗಳು ಮತ್ತು ಸಮಾಜ ಕಲ್ಯಾಣ ಇಲಾಖೆ ಇವರಿಗೆ ರಕ್ಷಣೆ ಕೊಡಬೇಕೆಂದು ಆದೇಶ ಮಾಡಿದರು ಕೂಡ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸುರಪುರ ತಾಲೂಕ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರಾದ ಗಂಗಾಧರ ನಾಯಕ್ ತಿಂತಣಿ, ಹುಣಸಿಗಿ ನಗರ ಘಟಕ ಅಧ್ಯಕ್ಷ ನಂದಣ್ಣ ದೊರೆ, ಶ್ರೀನಿವಾಸಪುರ, ಸಮಾಜದ ಮುಖಂಡರಾದ ಶ್ರೀ ಭೀಮಣ್ಣ ದೊರೆ ವಜ್ಜಲ್, ಶರಣಪ್ಪ ನಾಯಕ್, ಗೋವಿಂದ ಮಲ್ಲು ನಾಯಕ್, ಹೆಬ್ಬಾಳ ಪ.ಪಂ ಸದಸ್ಯರು ಗೌಡಪ್ಪ ಬಿರಾದಾರ್, ಈರಣ್ಣ ಗೌಡ ಕೋಟೆಗುಡ್ಡ, ನಿಂಗಣ್ಣ ದೊರೆ, ಪರಮಣ್ಣ ವಡಿಕೇರಿ ಕಕ್ಕೇರ, ಸಾಯಿಗೌಡ, ಚಿದಾನಂದ ನಾಯಕ್, ಬಿ ಎಂ ಗೌಡ, ಬಸವಣ್ಣಪ್ಪ ಕಾಮನಟಗಿ, ದಶರಥ ದೊರೆ ಕಚಕನೂರು ಅಧ್ಯಕ್ಷರು ಕರ್ನಾಟಕ ಸಂರಕ್ಷಣಾ ವೇದಿಕೆ, ವೆಂಕೋಬ ಬೈಚಬಾಳ,ಹಾಗೂ ಸಮಾಜ ಯುವಕರು ಇದ್ದರು