ಡೈಲಿ ವಾರ್ತೆ: 22/Feb/2024

ಕರಿಮಣಿ ಸರ ವಾರಸುದಾರರಿಗೆ ತಲುಪಿಸಿದ ಪ್ರಾಮಾಣಿಕರು

ಕುಂದಾಪುರ : ‘ಕರಿಮಣಿ ಮಾಲೀಕ ನೀನಲ್ಲ’ ಅನ್ನುವ ಹಾಡು ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿದ್ದರೆ, ಇಲ್ಲಿಬ್ಬರು ಪ್ರಾಮಾಣಿಕ ವ್ಯಕ್ತಿಗಳು, ಬಸ್ಸಿನಲ್ಲಿ ಕರಿಮಣಿ ಕಳೆದುಕೊಂಡ ಮಾಲೀಕರನ್ನು ಹುಡುಕಿ ಅವರಿಗೆ ಅವರ ಕರಿಮಣಿ ತಲುಪಿಸಿದ್ದಾರೆ. ಇದರಿಂದ ಆ ಬಸ್ ನ ಪ್ರಾಮಾಣಿಕ ಸಿಬಂದಿಗಳು, ಬಿದ್ದು ಸಿಕ್ಕಿದ ಕರಿಮಣಿ ಮಾಲಕರು ನಾವಲ್ಲ ಎಂದು ಸಾರಿದ್ದಾರೆ.

ಅದು ಕೂಡ…ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕುವರೆ ಲಕ್ಷ ಮೌಲ್ಯದ ವಜ್ರದ ಕರಿಮಣಿ ಅನ್ನೋದು ವಿಶೇಷ!! ಮಣಿಪಾಲದಿಂದ ಮಂಗಳೂರಿಗೆ ತೆರಳುವ ರೇಷ್ಮಾ ಹೆಸರಿನ ಖಾಸಗಿ ಬಸ್ಸು ಚಾಲಕ ಪುರಂದರ ಹಾಗೂ ನಿರ್ವಾಹಕ ಆಸಿಫ್ ಎಂಬವರು ಪ್ರಾಮಾಣಿಕತೆ ಮೆರೆದಿದ್ದಾರೆ.

ಬಸ್ ನಲ್ಲಿ ಕಳೆದುಕೊಂಡ ಸತ್ತುಗಳನ್ನು ಮರಳಿಸುವ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿದ್ದು, ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.