



ಡೈಲಿ ವಾರ್ತೆ: 11/Mar/2024




ಉಡುಪಿ/ದಕ್ಷಿಣ ಕನ್ನಡದಲ್ಲಿ ರಮಝಾನ್ ತಿಂಗಳು ಪ್ರಾರಂಭ
ಉಡುಪಿ /ಮಂಗಳೂರು: ಇಂದು 11-03-2024 ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ ರಮಝಾನ್ ತಿಂಗಳ ಪ್ರಥಮ ಚಂದ್ರದರ್ಶನ ವಾಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದರ ನಿರ್ದೇಶನದಂತೆ ಮಂಗಳೂರು ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಜುಮಾ ಮಸೀದಿಯ ಕೋಶಾಧಿಕಾರಿ ಹಾಜಿ ಎಸ್.ಎಂ. ರಶೀದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇರಳದಲ್ಲಿ ರಮಝಾನ್ ತಿಂಗಳ ಚಂದ್ರ ದರ್ಶನವಾಗಿದ್ದರಿಂದ ಮಂಗಳವಾರದಿಂದ ರಂಝಾನ್ ಪ್ರಾರಂಭ ಆಗಿರುತ್ತದೆ ಎಂದು ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಮಾಣಿ ಉಸ್ತಾದ್ ಘೋಷಿಸಿದ್ದಾರೆ.
ಆದ್ದರಿಂದ ಜಿಲ್ಲೆಯಲ್ಲಿ ನಿರೀಕ್ಷೆಯಂತೆ ನಾಳೆಯಿಂದ ಉಪವಾಸ ಆರಂಭಗೊಳ್ಳಲಿದ್ದು, ಇಂದು ಇಶಾ ನಮಾಝಿನ ಬಳಿಕ ತರಾವೀಹ್ ನಮಾಝ್ ಇರಲಿದೆ.

