ಡೈಲಿ ವಾರ್ತೆ: 11/Mar/2024

ಕೋಟ ಜನತಾ ಫಿಶ್ ಮೀಲ್ & ಆಯಿಲ್‌ ಪ್ರಾಡಕ್ಟ್ಸ್ ಸಂಸ್ಥೆ ವತಿಯಿಂದ 53ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ

ಕೋಟ:- ಜನತಾ ಫಿಶ್ ಮೀಲ್ & ಆಯಿಲ್‌ ಪ್ರಾಡಕ್ಟ್ಸ್ ಕೋಟ ಸಂಸ್ಥೆ ಇಲ್ಲಿ ರಾಷ್ಟ್ರೀಯ ಸುರಕ್ಷತಾ ಸಪ್ತಾಹದ ಅಂಗವಾಗಿ 53ನೆ ಸುರಕ್ಷತಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.

ಆ ಪ್ರಯುಕ್ತ ಸಂಸ್ಥೆಯ ಸಿಬ್ಬಂದಿಗಳಿಗೆ ಸುರಕ್ಷತೆಗೆ ಸಂಬಂಧಪಟ್ಟಂತೆ ವಿವಿಧ ಸ್ಪರ್ಧೆಗಳನ್ನು ಆಯೊಜಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಿಲಾಯಿತು. ಸಂಸ್ಥೆಯ ಸಿಬ್ಬಂದಿಗಳಿಗೆ ಸುರಕ್ಷತಾ ಉಪಕರಣಗಳ ಪ್ರದರ್ಶನ ಎರ್ಪಡಿಸಲಾಗಿತ್ತು. ಸಂಸ್ಥೆಯ ಮುಖ್ಯಸ್ಥರಾದ ಆನಂದ ಸಿ ಕುಂದರ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿ ‘ಜನತಾ ಸಮೂಹ ಸಂಸ್ಥೆಗಳಲ್ಲಿ ಸುರಕ್ಷತೆಗಾಗಿ ಸಂಸ್ಥೆಯು ಸಾಕಷ್ಟು ಪರಿಕರಗಳನ್ನು ಒದಗಿಸುತ್ತಿದ್ದು ಅದನ್ನು ಪ್ರತಿಯೊಬ್ಬ ನೌಕರನು ಬಳಸಿಕೊಂಡು‌ ತನ್ನ‌‌‌ ,ತನ್ನ ಕುಟುಂಬ ಮತ್ತು ಸಂಸ್ಥೆಯ ಹಿತದ್ರಷ್ಟಿಯಿಂದ ಕಡ್ಡಾಯವಾಗಿ ಪಾಲಿಸಬೇಕು’ ಎಂದು ಹೇಳಿದರು ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ಪ್ರಶಾಂತ್ ಎ ಕುಂದರ್, ಮುಖ್ಯ ಕಾರ್ಯ ನಿರ್ವಹಣಾದಿಕಾರಿ ಡಾ ಧಾನೆಶ್ ಜೀವಾನಿ, ಸುರಕ್ಷತಾಧಿಕಾರಿ ಸಂದೀಪ್ ಶೆಟ್ಟಿ ಅತಿಥಿಗಳಾದ‌ ಬಾಲಕ್ರಷ್ಣ ಶೆಟ್ಟಿ ಮತ್ತು ಸಂಸ್ಥೆಯ‌ ಸರ್ವ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಂಸ್ಥೆಯ ವವ್ಯಸ್ಥಾಪಕರಾದ ಶ್ರೀನಿವಾಸ ಕುಂದರ್ ಪ್ರಸ್ತಾವಿಸಿ ಮಮತಾ ಗುಳ್ಳಾಡಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.