ಡೈಲಿ ವಾರ್ತೆ: 19/Mar/2024

ದಕ್ಷಿಣ ಕನ್ನಡ: ಅಕ್ರಮ ಗಾಂಜಾ ಮಾರಾಟ – ಆರೋಪಿಯ ಬಂಧನ!

ಕೊಣಾಜೆ: ನರಿಂಗಾನ ಗ್ರಾಮದ ಬೋಳ ಲವ ಕುಶ ಕಂಬಳ ಮೈದಾನದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೊಣಾಜೆ ಪೊಲೀಸರು, 20 ಸಾವಿರ ಮೌಲ್ಯದ 998 ಗ್ರಾಂ ಗಾಂಜಾ ಹಾಗೂ ಆಕ್ಟಿವಾ ಸ್ಕೂಟರ್ ನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಮೂಲತಃ ಕಾಟಿಪಳ್ಳ ನಿವಾಸಿ, ಪ್ರಸಕ್ತ ನೆತ್ತಿಲಪದವಿನಲ್ಲಿ ವಾಸವಿರುವ ಉಮ್ಮರ್ ಫಾರೂಕ್ ಯಾನೆ ಮಂಗಳ್ ಫಾರೂಕ್ ಯಾನೆ ಕುಞಿಮೋನು (68) ಎಂಬಾತನನ್ನು ಬಂಧಿಸಿದ್ದಾರೆ.

ಕೊಣಾಜೆ ಠಾಣಾ ಪಿ.ಎಸ್.ಐ ಪುನೀತ್ ಗಾಂವಕಾರ್ ರವರಿಗೆ ಲಭಿಸಿದ ಮಾಹಿತಿಯಂತೆ ಈ ದಾಳಿ ನಡೆಸಿದ್ದು, ದಾಳಿ ವೇಳೆ ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 52800 ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.