ಡೈಲಿ ವಾರ್ತೆ: 24/Mar/2024

ನಂದಾವರ ಜುಮಾ ಮಸೀದಿ ಅಧ್ಯಕ್ಷರಾಗಿ ಇದ್ದಿನಬ್ಬ ನಂದಾವರ

ಬಂಟ್ವಾಳ : ಪಾಣೆಮಂಗಳೂರು ಸಮೀಪದ ನಂದಾವರ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಇದ್ದಿನಬ್ಬ ನಂದಾವರ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಮಸೀದಿಯಲ್ಲಿ ನಡೆದ ಜಮಾಅತ್ ಕಮಿಟಿಯ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಮುಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಖತೀಬ್ ಖಾಸಿಂ ದಾರಿಮಿ ಕಿನ್ಯ ದು:ಹಾ ನೆರವೇರಿಸಿದರು.

ಉಪಾಧ್ಯಕ್ಷರಾಗಿ ಡಿ.ಎ.ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಆರಿಫ್, ಕಾರ್ಯದರ್ಶಿಗಳಾಗಿ ಇಮ್ರಾನ್ ಅಬ್ದುಲ್ ಜಬ್ಬಾರ್, ಮುಹಮ್ಮದ್ ಶರೀಫ್, ಕೋಶಾಧಿಕಾರಿಯಾಗಿ ದಾವೂದ್ ಖಾನ್, ಲೆಕ್ಕ ಪರಿಶೋಧಕರಾಗಿ ಹಮ್ಮಬ್ಬ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಇಸ್ಮಾಯಿಲ್ ಆಶ್ರಯ, ಝಾಹಿರ್ ಅಬ್ಬಾಸ್, ಸಲೀಂ ಖಾನ್, ಅಬ್ದುಲ್ ಜಬ್ಬಾರ್ ಹಾಗೂ ಮುಹಮ್ಮದ್ ಶರೀಫ್ ಉಸ್ತಾದ್ ಅವರನ್ನು ಆರಿಸಲಾಯಿತು.

ಮಸೀದಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಯತೀಂ ವಿಭಾಗದ ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್, ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಹಾಗೂ ಕೋಶಾಧಿಕಾರಿಯಾಗಿ ಅಬ್ದುಲ್ ಲತೀಫ್ ಕೋಟೆ ಆಯ್ಕೆಯಾಗಿದ್ದಾರೆ.