



ಡೈಲಿ ವಾರ್ತೆ: 24/Mar/2024


ಎರಡು ದ್ವಿಚಕ್ರವಾಹನಗಳ ಮೇಲೆ ಹರಿದ ಲಾರಿ – ಬೈಕಗಳು ಸಂಪೂರ್ಣ ಜಖಂ

ಬಂಟ್ವಾಳ : ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಎರಡು ದ್ವಿಚಕ್ರ ವಾಹನಗಳ ಮೇಲೆ ಘನಗಾತ್ರದ ಲಾರಿಯೊಂದು ಹರಿದು ಬೈಕಗಳು ಅಪ್ಪಚ್ಚಿಯಾದ ಘಟನೆ ಬೆಂಜನಪದವು ಸಮೀಪದ ಕೊಡ್ಮಾನ್ ಕೋಡಿ ಎಂಬಲ್ಲಿ ನಡೆದಿದೆ.
ಬೆಂಜನಪದವು ಕಡೆಯಿಂದ ತಮಿಳುನಾಡಿಗೆ ಮಣ್ಣು ಸಾಗಾಟ ಮಾಡುವ ತಮಿಳುನಾಡು ಮೂಲದ ಬೃಹತ್ ಗಾತ್ರದ ಲಾರಿ ಮಣ್ಣು ತುಂಬಿಸಿಕೊಂಡು ಬೆಂಜನಪದವು ಕಡೆಯಿಂದ ಬಿಸಿರೋಡಿನ ಕೈಕಂಬ ರಸ್ತೆಗೆ ತೆರಳಬೇಕಿತ್ತು. ಚಾಲಕ ದಾರಿ ತಪ್ಪಿ ಮಾರಿಪಳ್ಳ ರಸ್ತೆಯಲ್ಲಿ ಸಾಗಿದ್ದಾನೆ. ಈ ವೇಳೆ ತಿರುವಿನಲ್ಲಿ ಅಧಿಕ ಲೋಡ್ ಹೊಂದಿದ ಕಾರಣ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಬೈಕ್ ಗಳೆರಡನ್ನು ಎಳೆದುಕೊಂಡು ಹೋಗಿ ಬೈಕ್ ಗಳನ್ನು ಟೋಟಲ್ ಲಾಸ್ ಗೆ ಹಾಕುವಂತೆ ಪುಡಿಪುಡಿ ಮಾಡಿದೆ. ಘಟನಾ ಸ್ಥಳಕ್ಕೆ 112 ಪೋಲೀಸ್ ವಾಹನ, ಎ.ಎಸ್.ಐ.ಮೋನಪ್ಪ ಗೌಡ ಹಾಗೂ ಚಾಲಕ ವಿಶ್ವನಾಥ ಭೇಟಿ ನೀಡಿದ್ದಾರೆ