ಡೈಲಿ ವಾರ್ತೆ: 28/Mar/2024

ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ₹ 3.5 ಕೋಟಿ ಮೌಲ್ಯದ ಚಿನ್ನಾಭರಣ ವಶ!

ಹಿರಿಯೂರು: ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 5 ಕೆ.ಜಿ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಇದರ ಮೌಲ್ಯ ₹ 3.5 ಕೋಟಿ ಎಂದು ಅಂದಾಜಿಸಲಾಗಿದೆ.

ನಗರದಲ್ಲಿ ಚೀಲ ಹಿಡಿದು ಅನುಮಾನಸ್ಪದವಾಗಿ ಓಡಾಡುತ್ತಿದ್ದವರನ್ನು ವಿಚಾರಿಸಿದ ಪೊಲೀಸರು, ಬ್ಯಾಗ್ ಪರಿಶೀಲಿಸಿದಾಗ ಚಿನ್ನ ಪತ್ತೆಯಾಗಿದೆ. 18 ಕ್ಯಾರೆಟ್ ಚಿನ್ನದ ದಾಖಲೆ ಹಾಜರುಪಡಿಸಲು ವಿಫಲರಾದ ಮನೋಜ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಿನ್ನವನ್ನು ದಾವಣಗೆರೆಯಿಂದ ಹಿರಿಯೂರು ಚಿನ್ನದ ಅಂಗಡಿಗೆ ತರಲಾಗುತ್ತಿತ್ತು ಎನ್ನಲಾಗಿದೆ.