ಡೈಲಿ ವಾರ್ತೆ: 28/Mar/2024

7 ನೇ ತರಗತಿಯ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಮಿತ್ತೂರು ಸಿರಾಜುಲ್ ಹುದಾ ಮದರಸದ ವಿದ್ಯಾರ್ಥಿನಿ ಸೋಹ ಶನುಮ್ ಪ್ರಥಮ

ಬಂಟ್ವಾಳ : ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ 2023-24ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ  ಮಿತ್ತೂರು ಸಿರಾಜುಲ್ ಹುದಾ ಮದರಸದ ಇಬ್ಬರು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.

   ಮಿತ್ತೂರು ಹಕೀಮ್ ಕಂದಕ್ ಮತ್ತು ಫಾತಿಮಾತ್ ಸಫ್ ವಾನ ದಂಪತಿಗಳ ಪುತ್ರಿ ಸೋಹ ಶನುಮ್  448 ಅಂಕದೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿ   ಮದರಸದಲ್ಲಿ  ಪ್ರಥಮ ಸ್ಥಾನಿಯಾಗಿದ್ದಾರೆ.

    ಭಗವಂತ ಕೊಡಿ ನಿವಾಸಿ ಹಂಝ ರವರ ಪುತ್ರಿ ನಸೀಬ 445 ಅಂಕ  ಪಡೆದಿರುತ್ತಾರೆ.