ಡೈಲಿ ವಾರ್ತೆ: 12/April/2024
– ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ.
ಕಾಡು ಬೆಕ್ಕಿನ ಮಾಂಸ ಸೇವಿಸಿದ ಗರ್ಭಿಣಿ: ಬೆಕ್ಕಿನ ರೂಪ ತಾಳಿ ಜನಿಸಿದ ಮಗು! ಮಗುವಿನ ಮೈಯಲ್ಲಲ್ಲ ಬೆಕ್ಕಿನ ರೋಮ – ವೈದ್ಯ ಲೋಕಕ್ಕೆ ಸವಾಲ್ ಆದ ಘಟನೆ. – ಗರ್ಭಿಣಿಯರು ಎಚ್ಚರ ತಪ್ಪಿದರೆ ಆಪತ್ತು.!
ಮನುಷ್ಯನ ಆಕಾರಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಗುರೂಪಿಯಾಗಿ ಕಾಣಬಹುದು, ಪ್ರಾಣಿಗಳಿಗೆ ಹೋಗುವ ಮನುಷ್ಯರೇ ಜನ್ಮ ತಾಳಿದರೆ ಏನನ್ನಬೇಕು, ಮನುಷ್ಯನ ಅವಿಭಾಜ್ಯ ಅಂಗಗಳು ಸಫಲತೆಯನ್ನ ಕಂಡುಕೊಂಡಾಗ ಮಾತ್ರ ಅವನಿಗೊಂದು ಜೀವನ., ಆದರೆ ಅಂತಹ ಅಮೂಲ್ಯವಾದ ಜೀವನವನ್ನು ಪಡೆಯಲು ಪುಣ್ಯ ಪ್ರಾಪ್ತಿಯಾಗಬೇಕೆನ್ನುವುದು ನಂಬಿಕೆ. ವಿಚಿತ್ರವಾಗಿ ಜನಿಸಿದ ಗಂಡು ಮಗುವಿನ ಕಹಾನಿ….!”
ಮನುಷ್ಯರಿಗೆ ದೇಹದ ಕೆಲವು ಭಾಗಗಳಲ್ಲಿ ಕೂದಲು ಬೆಳೆಯುವುದು ಸಹಜ. ಆದ್ರೆ ಇಲ್ಲೊಂದು ಮಗುವಿಗೆ ಮೈ ಹಾಗೂ ಮುಖದ ತುಂಬಾ ದಟ್ಟವಾದ ಕೂದಲು ಬೆಳೆದಿದ್ದು, ಗರ್ಭಿಣಿಯಾಗಿದ್ದಾಗ ನಾನು ಬೆಕ್ಕಿನ ಮಾಂಸವನ್ನು ತಿಂದಿದ್ದೇ ಇದಕ್ಕೆ ಕಾರಣ ಎಂದು ಆ ಮಗುವಿನ ತಾಯಿ ಹೇಳಿಕೆ ನೀಡಿದ್ದಾರೆ. ಗರ್ಭಿಣಿಯರು ಗರ್ಭಾವಸ್ಥೆಯಲ್ಲಿದ್ದಾಗ ಮಾಡಬೇಕಾದಂತಹ ಕೆಲಸಗಳನ್ನ ಹಚ್ಚುಕಟ್ಟಾಗಿ ನಿರ್ವಹಿಸಿದರೆ ಹುಟ್ಟಿದಂತಹ ಮಗು ಸುಂದರವಾಗಿಯು ಹಾಗೂ ಆರೋಗ್ಯವಾಗಿ ಹುಟ್ಟುತ್ತದೆ. ಆದರೆ ಸ್ವಲ್ಪ ನಿರ್ಲಕ್ಷ ವಹಿಸಿದರು ತಾಯಿಗೂ ಮಗುವಿಗೂ ಕಂಠಕ ಕಟ್ಟಿಟ್ಟ ಬುತ್ತಿ. ಆಹಾರ ಪದ್ಧತಿ ಹಾಗೂ ದಿನನಿತ್ಯದ ಕಾರ್ಯವೈಕರಿ ಹೆಚ್ಚು ಕಡಿಮೆಯಾದರೂ ಅಪಾಯ ತಪ್ಪಿದ್ದಲ್ಲ…!”
ಕೆಲವು ಭಾಗಗಳಲ್ಲಿ ಕೂದಲು ಬೆಳೆಯುವುದು ಸಾಮಾನ್ಯ. ಆದ್ರೆ ಇಲ್ಲೊಂದು ಮಗುವಿಗೆ ದೇಹ ಹಾಗೂ ಮುಖದ ತುಂಬಾ ದಟ್ಟವಾಗಿ ಕೂದಲು ಬೆಳೆದಿದೆ. ಗರ್ಭಾವಸ್ಥೆಯಲ್ಲಿ ನಾನು ಕಾಡು ಬೆಕ್ಕಿನ ಮಾಂಸವನ್ನು ತಿಂದಿದ್ದೇ, ನನ್ನ ಮಗ ಈ ಪರಿಸ್ಥಿತಿಗೆ ಬರಲು ಕಾರಣವೆಂದು ಮಗುವಿನ ತಾಯಿ ಹೇಳಿದ್ದಾರೆ. ಈ ಘಟನೆ ಫಿಲಿಪ್ಪೀನ್ಸ್ ಅಲ್ಲಿ ನಡೆದಿದ್ದು, ಇಲ್ಲಿನ ಜರೆನ್ ಎಂಬ ಎರಡು ವರ್ಷದ ಬಾಲಕ ಮುಖದ ತುಂಬಾ ದಟ್ಟವಾದ ಕೂದಲುಗಳನ್ನು ಹೊಂದಿದ್ದಾನೆ. ಇದಕ್ಕೆ ಕಾರಣ ʼವೆರ್ವುಲ್ಫ್ ಸಿಂಡ್ರೋಮ್ʼ. ಈ ಸಮಸ್ಯೆಯಿಂದ ಬಳಲುತ್ತಿರುವವರಿಗೆ ದೇಹದಾದ್ಯಂತ ಕೂದಲು ಬೆಳೆಯುತ್ತದೆ. ಆದರೆ ನನ್ನ ಮಗನ ಈ ಸ್ಥಿತಿಗೆ ಗರ್ಭಿಣಿಯಾಗಿದ್ದಾಗ ನಾನು ಕಾಡು ಬೆಕ್ಕಿನ ಮಾಂಸವನ್ನು ತಿಂದಿದ್ದೇ ಕಾರಣ ಎಂದು ಜರೆನ್ ನ ತಾಯಿ ಅಲ್ಮಾ ಗಮೊಂಗನ್ ಹೇಳಿದ್ದಾರೆ.
ಗರ್ಭಿಣಿಯಾಗಿದ್ದಾಗ ಅಲ್ಮಾ ಅವರಿಗೆ ಕಾಡು ಬೆಕ್ಕಿನ ಮಾಂಸವನ್ನು ತಿನ್ನುವ ಬಯಕೆ ಉಂಟಾಗುತ್ತದೆ. ಹಾಗಾಗಿ ಆಕೆ ಹಳ್ಳಿಯವರಿಗೆ ಹೇಳಿ ಕಾಡು ಬೆಕ್ಕಿನ ಮಾಂಸವನ್ನು ತರಿಸಿ, ಅದನ್ನು ಪದಾರ್ಥ ಮಾಡಿ ತಿಂದು ತನ್ನ ಗರ್ಭಿಣಿ ಬಯಕೆಯನ್ನು ಈಡೇರಿಸುತ್ತಾಳೆ. ಈ ಕಾಡು ಬೆಕ್ಕಿನ ಮಾಂಸವನ್ನು ತಿಂದ ಕಾರಣ ನನ್ನ ಮಗನಿಗೆ ಶಾಪ ತಟ್ಟಿದೆ, ಅದರಿಂದ ಮಗುವಿನ ಮೈ ತುಂಬಾ ಕೂದಲು ಬೆಳೆದಿದೆ ಎಂದು ಅಲ್ಮಾ ತನ್ನನ್ನು ತಾನು ವಿಷಾಧಿಸಿದ್ದಾರೆ. ಆದರೆ ಈ ಮಗು ವೆರ್ ವುಲ್ಫ್ ಅಥವಾ ಹೈಪರ್ಟೀಕೋಸಿಕ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಈ ಕಾರಣದಿಂದ ಮುಖದಲ್ಲಿ ದಟ್ಟವಾಗಿ ಕೂದಲು ಬೆಳೆಯುತ್ತದೆ. ಇದಕ್ಕೂ ನಿಮಗೂ ಯಾವುದೇ ಸಂಬಂಧವಿಲ್ಲ ಎಂದು ಅಲ್ಮಾ ಅವರನ್ನು ವೈದ್ಯರು ಸಮಧಾನ ಪಡಿಸಿದ್ದಾರೆ.
ಈ ಸ್ಥಿತಿಯು ಒಂದು ಬಿಲಿಯನ್ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುತ್ತದೆ. ಇಲ್ಲಿಯವರೆಗೆ ಕೇವಲ 50 ವೂಲ್ಫ್ ಸಿಂಡ್ರೋಮ್ ಪ್ರಕರಣಗಳು ವರದಿಯಾಗಿವೆ ಎಂದು ಡಾ. ರಾವೆಲಿಂಡಾ ಸೊರಿಯಾನೊ ಪೆರೆಜ್ ಹೇಳಿದ್ದಾರೆ. ಈ ಸಿಂಡ್ರೋಮ್ ಗೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ, ಲೇಸರ್ ಹೇರ್ ರಿಮೂವಲ್ ಟ್ರೀಟ್ಮೆಂಟ್ ಮೂಲಕ ಮುಖದ ಮೇಲಿನ ಈ ಕೂದಲನ್ನು ತೆಗೆಯಬಹುದಾಗಿದೆ.
ಒಟ್ಟಾರೆಯಾಗಿ ತಾಯಿ ಮಾಡಿದ ಎಡವಟ್ಟಿನ ಕೆಲಸಕ್ಕೆ ಮಗು ಅನುಭವಿಸುವಂತಾಯಿತು. ಕಾಡು ಬೆಕ್ಕಿನ ಮಾಂಸವನ್ನು ಸೇವಿಸಿರುವುದರಿಂದ ಮಗು ಈ ರೀತಿಯಲ್ಲಿ ಜನ್ಮ ತಾಳಿದೆ. ವೈದ್ಯ ಲೋಕಕ್ಕೆ ಸವಾಲಾಗಿರುವ ಈ ಘಟನೆ ಬೆಚ್ಚಿಬಿದ್ದಿದೆ.