ಡೈಲಿ ವಾರ್ತೆ: 23/April/2024

ಏ.23 ರಿಂದ 29 ರ ವರೆಗೆ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿಶ್ವ ಪುಸ್ತಕ ದಿನಾಚರಣೆಯ ಪ್ರಯುಕ್ತ ‘ಪುಸ್ತಕ ಸಂತೆ’ ಕಾರ್ಯಕ್ರಮ

ಕಾರ್ಕಳ: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಸಲ್ಪಡುತ್ತಿರುವ ಕಾರ್ಕಳದ ಪ್ರಸಿದ್ಧ ಪುಸ್ತಕ ಮಳಿಗೆಯಾದ ‘ಪುಸ್ತಕ ಮನೆ’ಯಲ್ಲಿ ಏಪ್ರಿಲ್ 23 ರಿಂದ ಏಪ್ರಿಲ್ 29ರ ವರೆಗೆ ವಿಶ್ವ ಪುಸ್ತಕ ದಿನಾಚರಣೆಯ ಪ್ರಯುಕ್ತ ‘ಪುಸ್ತಕ ಸಂತೆ’ ಕಾರ್ಯಕ್ರಮವನ್ನು ಆಯೋಜಿಸಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಎಲ್ಲಾ ಪುಸ್ತಕಗಳಿಗೂ 10 ರಿಂದ 50 ವರೆಗೆ ಶೇಕಡಾ ವಿಶೇಷ ರಿಯಾಯಿತಿಯನ್ನು ನೀಡಲಾಗುವುದು. ಜೊತೆಗೆ ಪ್ರತೀ ಖರೀದಿಯೊಂದಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತದೆ.
ಈ ಒಂದು ಕಾರ್ಯಕ್ರಮದಲ್ಲಿ ಎಲ್ಲ ಮಾಧ್ಯಮ ಮಿತ್ರರು ಪಾಲ್ಗೊಂಡು ‘ಪುಸ್ತಕ ಸಂತೆ’ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಮ್ಮಲ್ಲಿ ಕೇಳಿಕೊಳ್ಳುತಿದ್ದೇವೆ.