ಡೈಲಿ ವಾರ್ತೆ: 30/April/2024
ಕೋಟ ಮೂರುಕೈಯಲ್ಲಿ ಸರಣಿ ಅಪಘಾತ: ಸ್ಕೂಟರ್ ಸವಾರನಿಗೆ ಗಂಭೀರ ಗಾಯ!
ಕೋಟ: ಟೆಂಪೋ, ಕಾರು ಹಾಗೂ ಸ್ಕೂಟರ್ ನಡುವೆ ನಡೆದ ಸರಣಿ ಅಪಘಾತದಲ್ಲಿ ಸ್ಕೂಟರ್ ಸವಾರ ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಕೋಟ ಮೂರುಕೈ ಸರ್ಕಲ್ ನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಬನ್ನಾಡಿ ಕಡೆಯಿಂದ ಸದಾನಂದ ಬಳ್ಕೂರು ಅವರು ಚಲಾಯಿಸಿಕೊಂಡು ಬಂದ ಮಾರುತಿ ಸ್ವಿಫ್ಟ್ ಕಾರು ಹೆದ್ದಾರಿ ಕ್ರಾಸ್ ಮಾಡುವ ಸಂದರ್ಭ ಭಟ್ಕಳದಿಂದ ಮಲ್ಪೆ ಕಡೆ ಹೋಗುವ ಮೀನು ತುಂಬಿದ ಟೆಂಪೋ ಅತೀ ವೇಗೆ ಹಾಗೂ ಅಜಗಾರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರಿಗೆ ನೇರ ಡಿಕ್ಕಿ ಹೊಡೆದು ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಸ್ಕೂಟರ್ ಸವಾರನಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಕಾರು ಹಾಗೂ ಸ್ಕೂಟರ್ ಜಖಂಗೊಂಡಿದ್ದು ಸ್ಕೂಟರ್ ಸವಾರ ತೆಕ್ಕಟ್ಟೆ ಸಂತೋಷ್ ಪೂಜಾರಿ ಗಾಯಗೊಂಡಿರುತ್ತಾರೆ.
ಕೋಟ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಜಗನ್ನಾಥ್ ಅವರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.