ಡೈಲಿ ವಾರ್ತೆ: 09/ಮೇ /2024

ಕೆ. ಸಂತೋಷ್  ಶೆಟ್ಟಿ, ಮೊಳಹಳ್ಳಿ ಕುಂದಾಪುರ ಉಡುಪಿ ಜಿಲ್ಲೆ.

” 50 ವರ್ಷದ ಇತಿಹಾಸ ಹೊಂದಿರುವ “ಬೆಂಗಳೂರಿನ ಕಾವೇರಿ ಚಿತ್ರಮಂದಿರ” ನೆಲಸಮ….!”ಕಣ್ಮುಚ್ಚಿದ ಕಾವೇರಿ…!” ಮಲ್ಟಿಪ್ಲೆಕ್ಸ್ಗಳ ಹಾವಳಿ, ಏಕ ಪರದೆ ಚಿತ್ರಮಂದಿರಕ್ಕೆ ಪ್ರೇಕ್ಷಕರಿಲ್ಲದೆ ಪರದಾಟ…!”  ಚಿತ್ರಮಂದಿರಗಳು ವಾಣಿಜ್ಯ ಸಂಕೀರ್ಣಗಳಾಗಿ ಮಾರ್ಪಾಡು..!” ಚಲನಚಿತ್ರದ ಬಗ್ಗೆ ಬದಲಾಗುತ್ತಿದೆ ಪ್ರೇಕ್ಷಕರ ಮನಸ್ಸು…!” ಈಡೇರುತ್ತಿಲ್ಲ ಚಿತ್ರರಂಗದ ಕನಸು..!”

ದಿನದಿಂದ ದಿನಕ್ಕೆ ಕನ್ನಡ ಚಿತ್ರರಂಗ ಬಾಗಿಲು ಮುಚ್ಚುವ ಪರಿಸ್ಥಿತಿಯೇ ನಿರ್ಮಾಣವಾಗಿದೆ. ಒಂದೆಡೆ ಸಿನಿಮಾಗಳ ಕೊರತೆ ಇನ್ನೊಂದೆಡೆ, ಚಿತ್ರಮಂದಿರಗಳು ಪ್ರದರ್ಶನವನ್ನ ಕಾಣದೆ ಸಿನಿಮಾ ಮಂದಿರದ ಮಾಲೀಕರು ಬೇಸತ್ತು ಹೋಗಿದ್ದಾರೆ. ಮೊದಲಿನ ಉತ್ಸಾಹ ಹಾಗೂ ಪ್ರೀತಿ ಅಭಿಮಾನಿಗಳಲ್ಲಿ ಕಡಿಮೆಯಾಗಿದೆ. ಕನ್ನಡ ಚಿತ್ರರಂಗಕ್ಕೆ ಇತಿಹಾಸಗಳು ಕಳೆದ ಅದೆಷ್ಟೋ ದಿನಗಳು ಇಂದು ನೆನಪು ಮಾತ್ರ. ಬೆಳ್ಳಿ ಪರದೆಯ ಕೆಲವೊಂದು ಚಿತ್ರಮಂದಿರಗಳು ಕಾಂಪ್ಲೆಕ್ಸ್ ಮಾಲ್ಗಳಾಗಿ ಬದಲಾಗುತ್ತಿದೆ. ನಿರ್ಮಾಪಕರ ಕೊರತೆ ಸಿನಿಮಾ ನೋಡುವರ ಕೊರತೆ ಹಾಗೂ ಆಸಕ್ತಿದಾಯಕರ ಕೊರತೆಯಿಂದ ಈ ದಾರಿ ಹಿಡಿದಿದೆ. ವಾಣಿಜ್ಯ ಸಂಕೀರ್ಣಗಳಾಗಿ ಬದಲಾಗುತ್ತಿರುವ ಚಿತ್ರಮಂದಿರಗಳ ಸ್ಥಳ.
ಮೊದಲು ಮಲ್ಟಿಪ್ಲೆಕ್ಸ್ ಬಂದು, ಆಮೇಲೆ ಒಟಿಟಿ ಬಂತು. ಇದರಿಂದಾಗಿ ಏಕಪರದೆ ಚಿತ್ರಮಂದಿರಗಳಿಗೆ ದೊಡ್ಡ ಹೊಡೆತ ಬಿತ್ತು. ವರ್ಷದಿಂದ ವರ್ಷಕ್ಕೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಒಂದೊಂದಾಗಿಯೇ ಬಾಗಿಲು ಮುಚ್ಚುತ್ತಿವೆ. ಈಗ ಬೆಂಗಳೂರಿನ ‘ಕಾವೇರಿ’ ಚಿತ್ರಮಂದಿರ ಬಂದ್ ಆಗಿದೆ. ಚಿತ್ರಮಂದಿರದ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಇದರ ಪರಿಣಾಮ ಸಿನಿಪ್ರಿಯರಿಗೆ ತಟ್ಟಲಿದೆ.
ಕಾವೇರಿ ಚಿತ್ರ ಮಂದಿರ ಇನ್ನೂ ಮರೀಚಿಕೆ ಮಾತ್ರ…!”ಚಲನಚಿತ್ರದ ಜನರಿಗೆ ಯಾಕೋ ಆಸಕ್ತಿ ಕಡಿಮೆ ಆಗುತಿದೆ ಅನಿಸುತಿದೆ.

ಬೆಂಗಳೂರಿನ ಜನಪ್ರಿಯ ‘ಕಾವೇರಿ’ ಚಿತ್ರ ಮಂದಿರ  ನೆಲಸಮ ಆಗಿದೆ. 50 ವರ್ಷಗಳ ಇತಿಹಾಸ ಹೊಂದಿರುವ ಈ ಥಿಯೇಟರ್ನಲ್ಲಿ ಹಲವಾರು ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಅದೆಲ್ಲವೂ ಈಗ ನೆನಪು ಮಾತ್ರ. ಸರಿಯಾದ ಬಿಸ್ನೆಸ್ ಇಲ್ಲದ ಕಾರಣ ಈ ಚಿತ್ರಮಂದಿರವನ್ನು ಮುಚ್ಚಲಾಗಿದೆ. ಕೊರೊನಾ ಲಾಕ್ಡೌನ್ ಬಳಿಕ ನಿರೀಕ್ಷಿತ ಪ್ರಮಾಣದಲ್ಲಿ ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂಬ ಕಾರಣದಿಂದ ‘ಕಾವೇರಿ’ ಚಿತ್ರಮಂದಿರವನ್ನು ನಡೆಸುವುದು ಮಾಲಿಕರಿಗೆ ಕಷ್ಟ ಆಯಿತು. ಹಾಗಾಗಿ ಚಿತ್ರಮಂದಿರವನ್ನು ಕೆಡವಿ ಆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟುವ ನಿರ್ಧಾರಕ್ಕೆ ಬರಲಾಗಿದೆ. ಈ ರೀತಿ ಏಕಪರದೆ ಚಿತ್ರಮಂದಿರಗಳು (Single Screen Theatre) ಮುಚ್ಚಿದರೆ ನಿಜಕ್ಕೂ ನಷ್ಟ ಆಗುವುದು ಯಾರಿಗೆ ಎನ್ನುದು ಪ್ರಶ್ನೆ…? ಚಿತ್ರರಂಗದವರಿಗೆ ಮತ್ತು ಪ್ರೇಕ್ಷಕರಿಗೆ.

ಮಲ್ಟಿಪ್ಲೆಕ್ಸ್ ದುಬಾರಿ…!”ಸಿಂಗಲ್ ಪರದೆ ಇನ್ನೂ ಮರೀಚಿಕೆ….!”
ಏಕಪರದೆ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ಗೆ ಹೋಲಿಸಿದರೆ ಮಲ್ಟಿಪ್ಲೆಕ್ಸ್ನಲ್ಲಿ ಬೆಲೆ ದುಬಾರಿ ಆಗಿರುತ್ತದೆ. ಟಿಕೆಟ್ ಬೆಲೆಯಿಂದ ಹಿಡಿದು ತಿಂಡಿ, ಪಾನೀಯ, ಪಾರ್ಕಿಂಗ್ ದರ ಎಲ್ಲವೂ ಕೂಡ ಸಿಂಗಲ್ ಸ್ಕ್ರೀನ್ ಥಿಯೇಟರ್ನಲ್ಲಿ ಕಡಿಮೆ ಇರುತ್ತದೆ. ಈಗಾಗಲೇ ಕರ್ನಾಟಕದಲ್ಲಿ ನೂರಾರು ಏಕಪರದೆ ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಆದರೆ ಹಲವಾರು ಹೊಸ ಮಲ್ಟಿಪ್ಲೆಕ್ಸ್ಗಳು ತಲೆ ಎತ್ತಿವೆ. ಅಲ್ಲಿ ಸಾಮಾನ್ಯ ಜನರ ಕೈಗೆ ಎಟುಕದ ಬೆಲೆ ಇದೆ. ಹೀಗೆ ಪ್ರತಿಯೊಂದು ಚಿತ್ರಮಂದಿರ ಮುಚ್ಚಿದಾಗಲೂ ಮಲ್ಟಿಪ್ಲೆಕ್ಸ್ಗೆ ಬೇಡಿಕೆ ಹೆಚ್ಚುತ್ತದೆ. ಆ ಬೇಡಿಕೆಗೆ ತಕ್ಕಂತೆ ಬೆಲೆ ಏರುತ್ತದೆ. ಪ್ರೇಕ್ಷಕರ ಜೇಬಿಗೆ ಹೆಚ್ಚು ಹೆಚ್ಚು ಕತ್ತರಿ ಬೀಳುತ್ತದೆ.

ಚಿತ್ರರಂಗಕ್ಕೂ ನಷ್ಟ….!’ಪ್ರೇಕ್ಷಕ ರಿಗೂ ಕಷ್ಟ…!”
ಬಹುಬೇಡಿಕೆಯ ಸ್ಟಾರ್ ಸಿನಿಮಾಗಳು ಬಿಡುಗಡೆ ಆದಾಗ ಮಲ್ಟಿಪ್ಲೆಕ್ಸ್ಗಳಲ್ಲಿ ಸಿಕ್ಕಾಪಟ್ಟೆ ಬೆಲೆ ಏರಿಸಲಾಗುತ್ತದೆ. ಒಂದು ಟಿಕೆಟ್ನ ಬೆಲೆ ಸಾವಿರ ರೂಪಾಯಿ ತನಕವೂ ಏರುವುದುಂಟು. ಮಾಮೂಲಿ ಸಿನಿಮಾಗಳಿಗೂ ಸಹ ಏಕಪರದೆ ಚಿತ್ರಮಂದಿರಗಳಿಂತ ಹೆಚ್ಚು ದರ ಇರುತ್ತದೆ. ಇನ್ನು, ಇದರೊಳಗೆ ಸಿಗುವ ಪಾಪ್ಕಾರ್ನ್, ಪಾನೀಯಗಳನ್ನು ಕೊಂಡುಕೊಳ್ಳಲು ಹೋದರೆ ಕೈ ಸುಡುತ್ತದೆ ! ಅಷ್ಟರಮಟ್ಟಿಗೆ ದುಬಾರಿ ಆಗಿವೆ ಮಲ್ಟಿಪ್ಲೆಕ್ಸ್ನಲ್ಲಿ ಸಿಗುವ ತಿನಿಸುಗಳು. ಪಾರ್ಕಿಂಗ್ ದರ ಕೂಡ ಹೆಚ್ಚಿರುತ್ತದೆ. ಇದರಿಂದ ಸಹಜವಾಗಿಯೇ ಬಡವರು ಮತ್ತು ಮಧ್ಯಮ ವರ್ಗದ ಜನರು ಸಿನಿಮಾ ನೋಡಲು ಮಲ್ಟಿಪ್ಲೆಕ್ಸ್ ಕಡೆಗೆ ಬರಲು ಹಿಂದೇಟು ಹಾಕುತ್ತಾರೆ. ಅದರಿಂದ ಚಿತ್ರರಂಗಕ್ಕೆ ನಿಜಕ್ಕೂ ನಷ್ಟ ಆಗುತ್ತದೆ.