



ಡೈಲಿ ವಾರ್ತೆ: 14/ಜೂ./2024


ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ನಾಲ್ವರಿಗೆ ಗಾಯ !
ಉಡುಪಿ:ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿ ಹೊಡೆದು ನಾಲ್ವರು ಗಾಯಗೊಂಡ ಘಟನೆ ಜೂ. 13 ರಂದು ಗುರುವಾರ ತಡರಾತ್ರಿ ಅಂಬಾಗಿಲು ಮೀನು ಮಾರುಕಟ್ಟೆ ಬಳಿ ನಡೆದಿದೆ.
ಭಟ್ಕಳದಿಂದ ಮಂಗಳೂರಿನತ್ತ ಅತೀ ವೇಗದಿಂದ ತೆರಳುತ್ತಿದ್ದ ಕಾರು ಅಂಬಾಗಿಲು ಆಗಮಿಸಿದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಾರಿನಲ್ಲಿದ್ದ ನಾಲ್ವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.