ಡೈಲಿ ವಾರ್ತೆ: 18/ಜೂ./2024

ಲಕ್ಷ್ಮಣ ಫಲ ಕ್ಯಾನ್ಸರ್ ರೋಗಕ್ಕೆ ರಾಮಬಾಣ

ನೀವು ಎಂದಾದರೂ ಲಕ್ಷ್ಮಣ ಫಲವನ್ನು ತಿಂದಿದ್ದೀರಾ? ರಾಮ ಫಲದ ಬಗ್ಗೆ ಕೇಳಿದ್ದೇವೆ. ಆದರೆ ಲಕ್ಷ್ಮಣ ಹಣ್ಣು ಎಂದರೇನು? ಇದು ಸಾಮಾನ್ಯವಾಗಿ ಮೆಕ್ಸಿಕೊ ಮತ್ತು ದಕ್ಷಿಣ ಅಮೆರಿಕಾದಲ್ಲಿ ಕಂಡುಬರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಇದನ್ನು ಕರ್ನಾಟಕದ ಕೆಲವು ಭಾಗದಲ್ಲಿ ಬೆಳೆಯುತ್ತಿದ್ದಾರೆ. ಈ ಹಣ್ಣನ್ನು ಲಕ್ಷ್ಮಣ ಹಣ್ಣು ಅಥವಾ ಲಕ್ಷ್ಮಣ ಫಲ ಎಂದು ಕರೆಯಲಾಗುತ್ತದೆ. ಇದು ರುಚಿಯಲ್ಲಿ ಸ್ಟ್ರಾಬೆರಿ ಮತ್ತು ಅನಾನಸ್ ಹಣ್ಣಿನ ಮಿಶ್ರಣವಾಗಿದೆ. ಅಂದರೆ ಇದನ್ನು ತಿಂದ ನಂತರ, ಈ ಎರಡು ಹಣ್ಣುಗಳನ್ನು ತಿಂದ ಅನುಭವವಾಗುತ್ತದೆ. ಇದು ರುಚಿಕರ ಮಾತ್ರವಲ್ಲ ದೇಹಕ್ಕೂ ಅನೇಕ ಉಪಯುಕ್ತವಾದ ಜೀವಸತ್ವಗಳು ಮತ್ತು ಪೋಷಕಾಂಶಗಳನ್ನು ನೀಡುತ್ತದೆ.

ಹಾಗಾದರೆ ಈ ಹಣ್ಣನ್ನು ತಿನ್ನುವುದರಿಂದ ಸಿಗುವ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

ಕ್ಯಾನ್ಸರ್‌ ನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ ಮಾರುಕಟ್ಟೆಯಲ್ಲಿ ರಾಮ, ಲಕ್ಷ್ಮಣ ಹಾಗೂ ಹನುಮಂತ ಫಲಗಳಿಗೆ ಬಾರಿ ಬೇಡಿಕೆಯಿದೆ ಅದರಲ್ಲಿಯೂ ಲಕ್ಷ್ಮಣ ಫಲ ಅತ್ಯಂತ ಅಪರೂಪದ ಹಣ್ಣಾಗಿದ್ದು ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳಿಗೆ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದರ ಹಣ್ಣು ಮಾತ್ರವಲ್ಲ ಈ ಹಣ್ಣಿನ ಸಿಪ್ಪೆ, ಬೀಜ ಮತ್ತು ಎಲೆಗಳು ಕೂಡ ಅನೇಕ ರೀತಿಯ ಔಷಧೀಯ ಗುಣಗಳನ್ನು ಹೊಂದಿವೆ. ಅನೇಕ ರೋಗಕ್ಕೆ ಮನೆಮದ್ದುಲಕ್ಷ್ಮಣ ಫಲ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಇದು ಅಲ್ಸರ್ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಕೂಡ ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಯಕೃತ್ತನ್ನು ಹಾನಿಯಿಂದ ರಕ್ಷಿಸುತ್ತದೆ. ಸಂಧಿವಾತಕ್ಕೂ ಒಳ್ಳೆಯ ಮದ್ದಾಗಿದೆ. ವಾಸ್ತವದಲ್ಲಿ ಈ ಹಣ್ಣಿನಲ್ಲಿರುವ ಉರಿಯೂತ ನಿರೋಧಕ ಗುಣಲಕ್ಷಣಗಳು ನೋವನ್ನು ನಿವಾರಿಸುತ್ತದೆ. ಮೂತ್ರಜನಕಾಂಗ ಸೋಂಕು, ಮೂಳೆ ಸಂಬಂಧಿತ ಕಾಯಿಲೆಗಳು, ಕೀಲು ನೋವು, ಅತಿಸಾರ ಬೇಧಿ ತಡೆಗೆ ಮನೆ ಮದ್ದಾಗಿದ್ದು, ದೇಹಕ್ಕೆ ಅಗತ್ಯ ಶಕ್ತಿನೀಡುವುದರೊಂದಿಗೆ ನರಗಳ ಆರೋಗ್ಯವನ್ನು ಕಾಪಾಡುತ್ತದೆ.

ಕ್ಯಾನ್ಸರ್ ರೋಗಕ್ಕೂ ಒಳ್ಳೆಯದು: ಲಕ್ಷ್ಮಣ ಫಲದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಆ್ಯಂಟಿ ಆಕ್ಸಿಡೆಂಟ್‌ ಅಂಶಗಳು ಇರುವುದರಿಂದ ಕ್ಯಾನ್ಸರ್‌ನಿಂದ ದೇಹದಲ್ಲಿರುವ ಕಣಗಳಿಗೆ ತೊಂದರೆ ಆಗುವುದನ್ನು ತಡೆಯುತ್ತವೆ. ಇದರಿಂದಾಗಿ ಕ್ಯಾನ್ಸರ್‌ ನಿಯಂತ್ರಣಕ್ಕೆ ಬರುತ್ತದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಅದರಲ್ಲಿಯೂ ಪ್ರಮುಖವಾಗಿ ಸ್ತನ ಕ್ಯಾನ್ಸರ್‌ಗೆ ಲಕ್ಷ್ಮಣ ಫಲದ ಎಲೆಗಳು ಮದ್ದಾಗಿವೆ.

ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ: ದೇಹವನ್ನು ರೋಗಗಳಿಂದ ಸುರಕ್ಷಿತವಾಗಿಡಲು, ಬಲವಾದ ರೋಗನಿರೋಧಕ ಶಕ್ತಿ ಬಹಳ ಮುಖ್ಯ. ಆದ್ದರಿಂದ, ನಿಮ್ಮ ಆಹಾರದಲ್ಲಿ ಲಕ್ಷ್ಮಣ ಫಲಗಳನ್ನು ವಿವಿಧ ರೀತಿಯಲ್ಲಿ ಸೇರಿಸಿಕೊಳ್ಳಿ. ಆರೋಗ್ಯವಾಗಿರಿ.