ಡೈಲಿ ವಾರ್ತೆ: 20/ಜೂ./2024

ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಮಣೂರು ಕೂಸ ತಾಂಡೇಲರ ಮನೆಗೆ ಭೇಟಿ

ಕೋಟ: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಹೆಚ್ಚು ಅಂತರದಿಂದ ಆಯ್ಕೆಗೊಂಡ ಕೋಟ ಶ್ರೀನಿವಾಸ ಪೂಜಾರಿಯವರು ಕೋಟದ ಮಣೂರು ಪಡುಕರೆ ಕೂಸ ತಾಂಡೇಲರ ಮನೆಗೆ ಭೇಟಿ ನೀಡಿ ಚುನಾವಣೆ ಸಂದರ್ಭದಲ್ಲಿ ಮುಖಂಡರ, ಕಾರ್ಯಕರ್ತರ ಕಾರ್ಯವೈಕರಿಯನ್ನು ಮೆಚ್ಚಿಕೊಂಡರು.

ಸ್ಥಳೀಯ ಮುಖಂಡರಾದ ಪ್ರಸ್ತುತ ದ.ಕ ಮೀನುಗಾರಿಕಾ ಫೆಡರೇಶನ್ ಉಪಾಧ್ಯಕ್ಷ ದೇವಪ್ಪ ಕಾಂಚನ್ ಸಂಸದರನ್ನು ಪುಷ್ಪ ನೀಡಿ ಸ್ವಾಗತಿಸಿಕೊಂಡು ವಿವಿಧ ಸ್ಥಳೀಯ ಮುಖಂಡರಲ್ಲಿ ಕುಶಲೋಪರಿ ನಡೆಸಿದರು.

ಈ ಸಂದರ್ಭದಲ್ಲಿ ಕೋಟ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ, ಸದಸ್ಯರಾದ ಅಜಿತ್ ದೇವಾಡಿಗ, ಚಂದ್ರ ಪೂಜಾರಿ, ಶೇಖರ್ ಗಿಳಿಯಾರ್, ಪ್ರದೀಪ್ ಸಾಲಿಯಾನ್, ಜಯಂತಿ ಪೂಜಾರಿ, ಶಾರದ ಆರ್ ಕಾಂಚನ್, ರತ್ನ ಮರಕಾಲ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾದ ಪ್ರಸಾದ್ ಬಿಲ್ಲವ, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕರಾದ ಶಂಕರ್ ದೇವಾಡಿಗ ಕೋಟ, ಸ್ಥಳೀಯ ಮುಖಂಡರಾದ ಬೈಲ್ ಚಂದ್ರ, ಶಶಿಧರ ತಿಂಗಳಾಯ, ಅವಿನಾಶ್ ಹೊಳ್ಳ, ಕೂಸ ತಾಂಡೇಲರ ಪುತ್ರರಾದ ದಯಾನಂದ ಕಾಂಚನ್,ಸುರೇಶ್ ಕಾಂಚನ್ ಮತ್ತಿತರರು ಇದ್ದರು.