ಡೈಲಿ ವಾರ್ತೆ: 24/ಜೂ./2024

✍️. ಸುರೇಂದ್ರ ಕಾಂಚನ್ ಸಂಗಮ್

ಸಾರ್ವಜನಿಕರ ಮನವಿಗೆ ತುರ್ತಾಗಿ ಸ್ಪಂದಿಸಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ

ಕುಂದಾಪುರ: ಪುರಸಭಾ ವ್ಯಾಪ್ತಿಯ ಚಿಕ್ಕನ್ ಸಾಲ್ ರಸ್ತೆಯ ಜೈಹಿಂದ್ ಹೋಟೆಲ್ ಹತ್ತಿರದ ಅಶ್ವತ್ಥ ಮರದ ಕೊಂಬೆಗಳು ಅಗಲವಾಗಿ ರಸ್ತೆಯ ಕಡೆಗೆ ವಾಲಿಕೊಂಡಿದ್ದು, ಮಳೆಗಾಲ ಪ್ರಾರಂಭಗೊಂಡಿರುವುದರಿಂದ ರಸ್ತೆಗೆ ಬಿದ್ದು ಜೀವ ಹಾನಿಯಾಗುವ ಸಂದರ್ಭವಿದ್ದು, ಶಾಲಾ ವಿದ್ಯಾರ್ಥಿಗಳು ತಿರುಗುವಾಗ ವಾಹನಗಳು ಅಧಿಕವಾಗಿ ಈ ರಸ್ತೆಯಲ್ಲಿ ತಿರುಗುತ್ತಿದ್ದು ಹತ್ತಿರದ ಮನೆಗಳು ಅಂಗಡಿಗಳು ಹಾಗೂ ಹೋಟೆಲ್ ಗಳು ಇದ್ದು ದುರಂತ ಸಂಭವಿಸಿದರೆ ಅಪಾರ ಹಾನಿ ನಷ್ಟ ಆಗುತ್ತದೆ. ಆದ್ದರಿಂದ ದುರಂತ ನಡೆಯುವ ಮೊದಲೇ ಮರವನ್ನು ತೆರವುಗೊಳಿಸುವುದರ ಬಗ್ಗೆ ಸಾರ್ವಜನಿಕರ ಸಹಿ ಸಂಗ್ರಹದ ಮನವಿಯನ್ನು ಪುರಸಭಾ ಸದಸ್ಯರಾದ ಸಂತೋಷ್ ಶೆಟ್ಟಿಯವರು ಸಾರ್ವಜನಿಕರೊಂದಿಗೆ ಶಾಸಕರ ಕಚೇರಿಯಲ್ಲಿ ಮನವಿ ಪತ್ರವನ್ನು ನೀಡಿದರು.

ಈ ಸಂದರ್ಭದಲ್ಲಿ ಶಾಸಕರು ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಿ ತುರ್ತಾಗಿ ಮರ ತೆರವುಗೊಳಿಸುವಂತೆ ಸೂಚನೆ ನೀಡಿದ್ದು 24 ಗಂಟೆ ಒಳಗೆ ಅಪಾಯಕಾರಿ ಮರ ತೆರವುಗೊಳಿಸಿದ್ದು ಈ ಬಗ್ಗೆ ಸಾರ್ವಜನಿಕರು ಶಾಸಕರ ಹಾಗೂ ಅಧಿಕಾರಿಗಳ ಕಾರ್ಯವೈಕರಿಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು.