ಡೈಲಿ ವಾರ್ತೆ: 24/ಜೂ./2024

✍️ ಸುರೇಂದ್ರ ಕಾಂಚನ್ ಸಂಗಮ್

ಹೇರಿಕುದ್ರು ರಸ್ತೆಗೆ ಮರು ನಾಮಕರಣ ಹಾಗೂ ಪುತ್ಥಳಿ ನಿರ್ಮಾಣವನ್ನು ವಿರೋಧಿಸಿ ಗ್ರಾಮಸ್ಥರಿಂದ,, ಗ್ರಾಮ ಪಂಚಾಯಿತಿನ ಅಧಿಕಾರಿಗೆ ಮನವಿ


ಕುಂದಾಪುರ (ಜೂ 24) ಹೇರಿಕುದ್ರು ಶಾಲೆ ರಸ್ತೆ ದಿ.ಗಂಗಾಧರ ಶೆಟ್ಟಿ ಅವರ ಹೆಸರಿಡುವುದು ಮತ್ತು ಅವರ ಪುತ್ಥಳಿ ನಿರ್ಮಾಣವನ್ನು ವಿರೋಧಿಸಿ ಇಂದು ಅನಗಳ್ಳಿ ಗ್ರಾಮ ಪಂಚಾಯಿತಿನ ಪಿ.ಡಿ.ಓ.ಗೆ ಪಂಚಾಯಿತಿನ ಸದಸ್ಯರು ಹಾಗೂ ಗ್ರಾಮಸ್ಥರು ಮನವಿ ಪತ್ರವನ್ನು ಸಲ್ಲಿಸಿದ್ದರು.


ಆನಗಳ್ಳಿ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಹೇರಿಕುದ್ರು ಶಾಲೆ ರಸ್ತೆಗೆ ದಿ ಗಂಗಾಧರ ಶೆಟ್ಟಿ ಹೆಸರು ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅವರ ಪುತ್ತಳಿ ನಿರ್ಮಿಸುವ ಬಗ್ಗ ಪಂಚಾಯತ್ ಗಮನಕ್ಕೆ ತಂದಿದ್ದು
ಇದೀಗ ಗ್ರಾಮಸ್ಥರ ಗಮನಕ್ಕೆ ಬಂದಿದ್ದು, ದಿ.ಗಂಗಾಧರ ಶೆಟ್ಟಿ ಅವರು ಒಂದು ರಾಜಕೀಯ ಪಕ್ಷಕ್ಕೆ ಸೀಮಿತರಾಗಿರುತ್ತಾರೆ, ಅವರ ಮರಣವನ್ನು ಒಂದು ರಾಜಕೀಯ ದಾಳವಾಗಿ ಬಳಸಿಕೊಂಡು ನಮ್ಮೆಲ್ಲರ ಮನಸ್ಸುನ್ನು ತಮ್ಮ ಕಡೆ ತೆಗೆದುಕೊಳ್ಳುವ ಸಲುವಾಗಿ ಒಂದು ಪಕ್ಷದ ಸ್ಥಳೀಯರು ಕೆಲವರು ಈ ಕೃತ್ಯವನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ.ಚುನಾವಣಾ ಸಂದರ್ಭದಲ್ಲಿ ದಿ.ಗಂಗಾಧರ ಶೆಟ್ಟಿಯವರ ಸ್ಪಪಕ್ಷದವರೇ ಪುತ್ಥಳಿ ಅಥವಾ ರಸ್ತೆಯ ನಾಮಫಲಕವನ್ನು ಹಾನಿಗೊಳಿಸಿ ಇನ್ನೊಂದು ಪಕ್ಷದ ಕಾರ್ಯಕರ್ತರ ಮೇಲೆ ಹಾಕಿ ರಾಜಕೀಯ ಲಾಭವನ್ನು ಪಡೆಯಲು ಪ್ರಯತ್ನಿಸಬಹುದು.

ಹೇರಿಕುದ್ರು ಪರಿಸರದಲ್ಲಿ ಇಲ್ಲಿಯವರೆಗೆ ಶಾಂತಿ ಸಹ ಬಾಳ್ವೆಯಿಂದ ಜೀವನ ನಡೆಸುತ್ತಿದ್ದು, ಈ ಕಾರ್ಯದಿಂದ ನಮ್ಮಲ್ಲಿ ದ್ವೇಷ ,ಅಸೂಯೆಗಳ ಬೆಳವಣಿಗೆಯಾಗಿ, ನಮ್ಮೆಲ್ಲರ ನೆಮ್ಮದಿ ಬದುಕಿಗೆ ಭಂಗವಾಗುತ್ತಿದೆ.
ಹೀಗಿರುವಾಗ ಏಕಮುಖ ರಾಜಕೀಯ ಜೀವನ ನಡೆಸಿದ ದಿ. ಗಂಗಾಧರ ಶೆಟ್ಟಿ ಅವರ ಪುತ್ತಳಿ ಮತ್ತು ಹೆಸರನ್ನು ರಸ್ತೆಗೆ ಇಡುವುದು ಅಷ್ಟೊಂದು ಸಮಂಜಸವಲ್ಲ ಒಂದು ವೇಳೆ ಅನುಮತಿ ನೀಡಿದ್ದಲ್ಲಿ ಊರಿನ ಅಶಾಂತಿಗೆ ದಾರಿ ಮಾಡಿದ್ದಂತೆ ಆಗುತ್ತದೆ.

ಅಲ್ಲದೆ ಬೇರೆ ಗ್ರಾಮ ಪಂಚಾಯಿತಿಗಳಲ್ಲಿ ಆ ಊರಿನ ರಾಜಕೀಯ ದಿವಂಗತ ಮುಖಂಡರ ಹೆಸರನ್ನು ಅಥವಾ ಪುತ್ತಳಿಯ ಬಗ್ಗೆ ಚರ್ಚೆ ಆರಂಭವಾಗುವ ಸಂಭವವಿದ್ದು,, ಈಗಾಗಲೇ ಆನಗಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ 1 ಮತ್ತು 2ನೇ ಹಾಗೂ3 ಮತ್ತು 4ನೇ ವಾರ್ಡ್ ಗಳಲ್ಲಿ ಸ್ಥಳೀಯರು ಬೇರೆ ಬೇರೆ ಮಹನೀಯರ ಹೆಸರನ್ನು ಇಡಲು ಮನವಿ ಮಾಡಿಕೊಂಡಿರುತ್ತಾರೆ.

ಹೇರಿಕುದ್ರು ಊರಿನ ಶಾಂತಿ ರಕ್ಷಣೆ ಕಾಪಾಡುವ ಹೊಣೆಗಾರಿಕೆ, ಆನಗಳ್ಳಿ ಗ್ರಾಮ ಪಂಚಾಯಿತಿನವರ ಮೇಲೆ ಇದ್ದು, ಪುತ್ಥಳಿ ನಿರ್ಮಾಣಕ್ಕೆ ಅಥವಾ ರಸ್ತೆ ಮರುನಾಮಕರಣ ಅವಕಾಶ ಮಾಡಬಾರದೆಂದು ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಶ್ರೀಮತಿ ಸವಿತಾ, ಸದಸ್ಯರಾದ ಶ್ರೀಮತಿ ನಿರ್ಮಲ,, ಶ್ರೀಮತಿ ಮೂಕಾಂಬು
ಹಾಗೂ ತಾಲೂಕು ಪಂಚಾಯಿತಿನ ಮಾಜಿ ಅಧ್ಯಕ್ಷರಾದ ಭಾಸ್ಕರ್ ಬಿಲ್ಲವ ಹೇರಿಕುದ್ರು,, ಕಲಂಜಿ ಗೋಪಾಲ, ಚಂದ್ರಶೇಖರ ಶೆಟ್ಟಿ, ಮಹಾಬಲ ಪೂಜಾರಿ ಹೇರಿಕುದ್ರು,ಸುನಿಲ್ ಶೆಟ್ಟಿ ಹೇರಿಕುದ್ರು,,ಗೊಡ್ವಿನ್ ಮಸ್ಕರಿಸ್,, ರಾಘವೇಂದ್ರ ಗಾಣಿಗ,, ಪ್ರದೀಪ್ ಆನಗಳ್ಳಿ, ಲಕ್ಷ್ಮಣ್ ಶೆಟ್ಟಿ ಹೇರಿಕುದ್ರು,, ಬಾಬು ಶೆಟ್ಟಿ,, ಹಾಗೂ ಊರಿನ ಹಿರಿಯ ಮುಖಂಡರು ಮತ್ತು ಗ್ರಾಮಸ್ಥರು, ಗ್ರಾಮ ಪಂಚಾಯಿತಿನ ಅಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಿ, ಮತ್ತು ವಿವಿಧ ಇಲಾಖೆಗೆ ನೊಂದಾಯಿತ ಪೋಸ್ಟ್ ಮೂಲಕ ಮನವಿ ನೀಡಲಾಯಿತು.