ಡೈಲಿ ವಾರ್ತೆ: 07/ಜುಲೈ /2024

ವಿಜಯಪುರ: ರಾತ್ರಿ ಭೂಮಿ ಕಂಪಿಸಿದ ಅನುಭವ: ಬೆಚ್ಚಿ ಮನೆಯಿಂದಾಚೆ ಓಡಿ ಬಂದ ಜನ!

ವಿಜಯಪುರ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದ್ದು, ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ, ಘೋಣಸಗಿ, ಕಳ್ಳಕವಟಗಿ, ಹುಬನೂರ, ಟಕ್ಕಳಕಿ ಭಾಗದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ.

ಗ್ರಾಮಸ್ಥರಿಗೆ ರಾತ್ರಿ 9:26ಕ್ಕೆ ಭೂಕಂಪನ ಅನುಭವ ಆಗಿದೆ. ಜೋರಾದ ಶಬ್ದಕ್ಕೆ ಭಯಗೊಂಡ ಜನರು ಮನೆಯಿಂದ ಹೊರ ಓಡಿ ಬಂದಿದ್ದಾರೆ.