ಡೈಲಿ ವಾರ್ತೆ: 08/ಜುಲೈ /2024
ಕುಂದಾಪುರ ಸರ್ವಿಸ್ ರಸ್ತೆಯಲ್ಲಿ ಮರಣ ಕಂದಕ -ಉರುಳಿ ಬೀಳುತ್ತಿರುವ ದ್ವಿಚಕ್ರ ಸವಾರರು
ಕುಂದಾಪುರ : ನಗರದ ಹಂಗಳೂರು – ಮೂರುಕೈ ಬಳಿಯ ಸರ್ವಿಸ್ ರಸ್ತೆಯಲ್ಲಿ ಸತತ ಸುರಿಯುತ್ತಿರುವ ಜಡಿ ಮಳೆಗೆ ಕಂದಕವೊಂದು ಸೃಷ್ಟಿಯಾಗಿದ್ದು, ದ್ವಿಚಕ್ರ ವಾಹನ ಸವಾರರು ಸರತಿ ಯಂತೆ ಬಿದ್ದು ಗಾಯಗೊಳ್ಳುತ್ತಿದ್ದರೂ ಸಂಬಂಧ ಪಟ್ಟ ಇಲಾಖೆಯವರು ಮೌನ ವಹಿಸಿರುವುದರ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸ್ಥಳೀಯ ಸರ್ವಿಸ್ ರಸ್ತೆ ಮಳೆಗಾಲದಲ್ಲಿ ನೀರು ತುಂಬಿ ಸಾಕ್ಷಾತ್ ನದಿಯಂತೆ ಕಂಡು ಬರುತ್ತದೆ. ವಾಹನ ಸವಾರರು ಅದರಲ್ಲಿಯೇ ವಾಹನ ಚಲಾಯಿಸುವ ಅಭ್ಯಾಸವನ್ನು ರೂಢಿ ಮಾಡಿಕೊಂಡಿದ್ದರು. ಆದರೆ ಇದೀಗ ಸರ್ವಿಸ್ ರಸ್ತೆಯಲ್ಲಿ ಭಾರಿ ಆಳದ ಕಂದಕಗಳು ಸ್ರಷ್ಟಿಯಾಗಿ ನೀರು ತುಂಬಿ ಕೊಂಡಿದೆ. ಇದರ ಬಗ್ಗೆ ಅರಿವಿಲ್ಲದ ವಾಹನ ಸವಾರರು ಕಂದಕ ದಲ್ಲಿ ಉರುಳಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರ ಸಹಿತ ಸಾರ್ವಜನಿಕರು ಸಂಬಂಧ ಪಟ್ಟ ಇಲಾಖೆಗಳಿಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಲಾಗಿದೆ. ಹೆಚ್ಚಿನ ದುರಂತ ಸಂಭವಿಸುವ ಮುನ್ನವೇ ಅಧಿಕಾರಿಗಳು ಎಚ್ಚತ್ತು ಶೀಘ್ರ ಕ್ರಮ ಕೊಳ್ಳಬೇಕಾಗಿ ಸಾರ್ವಜ ನಿಕರು ಆಗ್ರಹಿಸಿದ್ದಾರೆ.