



ಡೈಲಿ ವಾರ್ತೆ: 08/ಜುಲೈ /2024


ಉಳ್ಳಾಲ ತಲುಪಿದ ಕೂರ ತಂಙಲ್ ಪಾರ್ಥಿವ ಶರೀರ: ಅಂತಿಮ ದರ್ಶನಕ್ಕೆ ಜನಸಾಗರ

ಉಳ್ಳಾಲ: ಇಂದು ಬೆಳಿಗ್ಗೆ ಕೇರಳದ ಎಟ್ಟಿಕುಳಂನಲ್ಲಿ ನಿಧನರಾದ ಉಳ್ಳಾಲ ಖಾಝಿ ಫಝಲ್ ಕೋಯಮ್ಮ ಕೂರ ತಂಙಳ್ ಅವರ ಪಾರ್ಥಿವ ಶರೀರ ಉಳ್ಳಾಲ ದರ್ಗಾ ವಠಾದಲ್ಲಿದ್ದು, ಸಹಸ್ರಾರು ಜನರು ಅಂತಿಮ ದರ್ಶನಕ್ಕೆ ಸೇರಿದ್ದಾರೆ.
ಉಳ್ಳಾಲದಲ್ಲಿ ಅಂತಿಮ ದರ್ಶನದ ಬಳಿಕ ಕೂರ ತಂಙಳ್ ಅವರ ಕರ್ಮಭೂಮಿಯಾದ ಕಡಬ ತಾಲೂಕಿನ ಕೂರಗೆ ಪಾರ್ಥಿವ ಶರೀರ ರವಾನೆಯಾಗಲಿದೆ. ಕೂರ ಮಸೀದಿ ವಠಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.