ಡೈಲಿ ವಾರ್ತೆ: 15/ಜುಲೈ /2024

ಹಾಸನ ಜಿಲ್ಲೆಯಲ್ಲಿ ವರುಣನ ಆರ್ಭಟ : 4 ತಾಲೂಕುಗಳ ಶಾಲೆಗಳಿಗೆ (ನಾಳೆ) ಜು.16 ರಜೆ ಘೋಷಣೆ

ಹಾಸನ: ಹಾಸನ ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳ ಶಾಲೆಗಳಿಗೆ ಮಂಗಳವಾರ ರಜೆ ಘೋಷಣೆ ಮಾಡಲಾಗಿದೆ.

ಅದರಂತೆ ಜು.16 ರ ಮಂಗಳವಾರ ಹಾಸನ, ಆಲೂರು, ಸಕಲೇಶಪುರ ಮತ್ತು ಅರಕಲಗೂಡು ತಾಲೂಕುಗಳ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಹಾಸನ ಜಿಲ್ಲಾ ಡಿಡಿಪಿಐ ರಜೆ ಘೋಷಣೆ ಮಾಡಿದ್ದಾರೆ.