ಡೈಲಿ ವಾರ್ತೆ: 17/ಜುಲೈ /2024

ಉದ್ಯೋಗ ಭರವಸೆ, ಕೃಷಿ ಭೂಮಿ ಹಕ್ಕುಪತ್ರಕ್ಕೆ ಆಗ್ರಹಿಸಿ
ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದಿಂದ ಜು. 18 ರಂದು (ನಾಳೆ) ವಾಹನ ಜಾಥಾ

ಉಡುಪಿ: ಕೊರಗ ಸಮುದಾಯದ ಯುವ ಜನರ ಶೇ. 100ರಷ್ಟು ಉದ್ಯೋಗ ಭರವಸೆ ಈಡೇರಿಕೆ ಹಾಗೂ ಕೃಷಿ ಭೂಮಿ ಹಕ್ಕುಪತ್ರ ಮಂಜುರಾತಿಗಾಗಿ ಆಗ್ರಹಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳ ಇದರ ನೇತೃತ್ವದಲ್ಲಿ ನಾಳೆ (ಜುಲೈ 18) ಕಾಪುವಿನಿಂದ ಬ್ರಹ್ಮಾವರದವರೆಗೆ ಕಾರು, ಆಟೋ ರಿಕ್ಷಾ, ಬೈಕ್, ಸ್ಕೂಟ‌ರ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಜುಲೈ 22ರಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅಹೋ ರಾತ್ರಿ ನಿರಂತರ ಧರಣಿ ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ತಿಳಿಸಿದರು.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಹಾಗೂ ಜಿಲ್ಲಾಡಳಿತ ಶೇ.100ರಷ್ಟು ಉದ್ಯೋಗದ ಭರವಸೆ ಹಾಗೂ ಕೃಷಿ ಭೂಮಿ ಹಕ್ಕುಪತ್ರ ಮಂಜೂರಾತಿ ಮಾಡುವ ಬಗ್ಗೆ ಆಶ್ವಾಸನೆ ನೀಡಿ ಇಡೀ ಕೊರಗ ಸಮುದಾಯಕ್ಕೆ ವಂಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಕಾರ್ಯದರ್ಶಿ ವಿನಯ ಅಡ್ವೆ , ಸಂಯೋಜಕ ಕೆ. ಪುತ್ರನ್, ಕೋಶಾಧಿಕಾರಿ ದಿವಾಕರ್ ಇದ್ದರು.