ಡೈಲಿ ವಾರ್ತೆ: 19/ಜುಲೈ /2024
ಕುಸಿಯುವ ಭೀತಿಯಲ್ಲಿ ಉಳಾಯಿಬೆಟ್ಟು ಕಿರು ಸೇತುವೆ ಶೀಘ್ರವೇ ದುರಸ್ಥಿಗೊಳಿಸಲು : SDPI ಆಗ್ರಹ
ಉಳಾಯಿಬೆಟ್ಟು : ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳಾಯಿಬೆಟ್ಟು -ಮಂಗಳೂರು ಸಂಪರ್ಕಿಸುವ ಕಿರುಸೇತುವೆ ಸುಮಾರು 80 ವರ್ಷದಷ್ಟು ಹಳೆಯದಾಗಿದ್ದು ಇದೀಗ ಕುಸಿಯುವ ಭೀತಿಯಲ್ಲಿದೆ.
ನಿತ್ಯ ನೂರಾರು ಜನ ಸಂಚರಿಸುವ ರಸ್ತೆ ಇದಾಗಿದ್ದು ಅಪಾಯ ಸಂಭವಿಸುವ ಮೊದಲು ಆದಷ್ಟು ಬೇಗ ದುರಸ್ಥಿಗೊಳಿಸಬೇಕೆಂದು ಎಸ್.ಡಿ. ಪಿ.ಐ ಮಂಗಳೂರು ಉತ್ತರ ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ನಾಸಿರ್ ಉಳಾಯಿಬೆಟ್ಟು ಅಗ್ರಹಿಸಿದ್ದಾರೆ