ಡೈಲಿ ವಾರ್ತೆ: 19/ಜುಲೈ /2024

ತೆಂಕ ಎಡಪದವು ಅರೋಗ್ಯ ಮಂದಿರ ಅವ್ಯವಸ್ಥೆ :SDPI ಆಕ್ರೋಶ

ಎಡಪದವು : ಮಂಗಳೂರು ತಾಲೂಕಿನ ತೆಂಕ ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಡಪದವು -ಕುಪ್ಪೆಪದವು ಮುಖ್ಯ ರಸ್ತೆಯಲ್ಲಿರುವ ಆಯುಷ್ಮಾನ್ ಅರೋಗ್ಯ ಮಂದಿರ ಅವ್ಯವಸ್ತೆಯಿಂದ ಕೂಡಿದ್ದು ಮರ ಗಿಡ ಪೊದೆಗಲ್ಲಿಂದ ಕೂಡಿದ್ದು ಮಲೇರಿಯಾ, ಡೆಂಗ್ಯೂ ವಿನಂತಹಾ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿದೆ,.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲೇರಿಯಾ, ಡೆಂಗ್ಯೂ ವಿನಂತಹ ಸಾಂಕ್ರಾಮಿಕ ರೋಗಗಳು ವ್ಯಾಪಾಕವಾಗಿ ಹರಡುತ್ತಿದ್ದು ಇದರ ಬಗ್ಗೆ ಜಾಗೃತಿ ಮೂಡಿಸುವ ಅರೋಗ್ಯ ಕೇಂದ್ರವೇ ಸಾಂಕ್ರಾಮಿಕ ರೋಗಗಳು ಹರಡುವ ತಾಣವಾಗಿ ಪರಿಣಮಿಸಿದೆ ಸಂಭಂದಪಟ್ಟ ಅರೋಗ್ಯ ಅಧಿಕಾರಿಗಳು ಇದರ ಬಗ್ಗೆ ಶೀಘ್ರವೇ ಕ್ರಮ ವಹಿಸಬೇಕೆಂದು ಎಸ್.ಡಿ.ಪಿ.ಐ ಗುರುಪುರ ಬ್ಲಾಕ್ ಕಾರ್ಯದರ್ಶಿ ಇರ್ಷಾದ್ ಅಡ್ಡೂರು ಅಗ್ರಹಿಸಿದ್ದಾರೆ. ಇಲ್ಲದಿದ್ದಲ್ಲಿ ಸಾರ್ವಜನಿಕರನ್ನು ಒಟ್ಟುಗೂಡಿಸಿ ಬೃಹತ್ ಪ್ರತಿಭಟನೆ ಮಾಡಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.