ಡೈಲಿ ವಾರ್ತೆ: 09/ಆಗಸ್ಟ್/2024

ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ (ಪತ್ರಕರ್ತರು ಮಾಧ್ಯಮ ವಿಶ್ಲೇಷಕರು ಅಂಕಣಕಾರರು.) “ನಾಗರ ಪಂಚಮಿಯ ತನ್ನಿಮಿತ್ತ ಲೇಖನ…!”

ಭೂಲೋಕದ ಒಡೆಯನಿಗೆ ನಾಗರಾಧನೆಯ ಸಂಭ್ರಮ: ನಾಗದೇವತೆಯು ಭುವಿಯಲ್ಲಿ ನೆಲೆ ನಿಲ್ಲಲು “ಸರ್ಪಯಜ್ಞ” ವನ್ನು ನಿಲ್ಲಿಸಿದ ದಿನವೇ “ನಾಗರಪಂಚಮಿ” ಎಂಬ ಭಕ್ತಿಯ ಆಚರಣೆ ಕಂಡಿತು. ಭೂಲೋಕದ ಸತ್ಯದೇವತೆಗೆ ಪಂಚಮಿಯ ಸಂಭ್ರಮ

ನಾಡಿನ ಹಿಂದುಗಳ ಧಾರ್ಮಿಕತೆಯ ಹಬ್ಬಗಳಲ್ಲಿ ನಾಗರಪಂಚಮಿ ವಿಶಿಷ್ಟತೆಯ ಪರಿಕಲ್ಪನೆಯನ್ನು ಪಡೆದುಕೊಳ್ಳುತ್ತದೆ. ಭೂಲೋಕವನ್ನ ಹೊತ್ತಿರುವ ಏಳು ಹೆಡೆ ಸರ್ಪಗಳಲ್ಲಿ ವಿಶಿಷ್ಟ ಪೂಜಾ ಆರಾಧನೆ ನಡೆಯುವಂತಹ , ಕಾರ್ಯಗಳನ್ನು ಮಾಡುವ ನಾಗರಾಧನೆ ಹಬ್ಬ ಭಾರತೀಯರ ಸಂಸ್ಕೃತಿಯಲ್ಲಿ ಹುದುಗಿ ಹೋಗಿದೆ, ಕರಾವಳಿಯಲ್ಲಿ ನಾಗರಾಧನೆ, ನಾಗಮಂಡಲ, ಉತ್ಸವ ಕೂಡ ವಿಶಿಷ್ಟತೆಯ ಸ್ಥಾನಮಾನಗಳನ್ನ ಕಂಡುಕೊಳ್ಳುತ್ತದೆ. ಪ್ರಕೃತಿ ದತ್ತವಾಗಿ ಬಂದಿರುವಂತಹ ನಾಗರಾಜನ ಆರೈಕೆ ಹಾಗೂ ಜೀವ ಜಂತುಗಳಲ್ಲಿ ಸರಿಸೃಪಗಳಾಗಿ ಭೂಲೋಕದಲ್ಲಿ ಗೋಚರಿಸುವ ದೇವಾನುದೇವತೆಗಳಲ್ಲಿ ನಾಗರಾಜನ ಶಕ್ತಿ ಅಪಾರವಾದದ್ದು. ನಾಗರ ಪಂಚಮಿ ಎಂದು ಕಲ್ಲಿನ ಮೂರ್ತಿಗೆ ಹಾಲು ಬಾಳೆಹಣ್ಣು ಇತರ ಪೂಜೆ ಕೈ ಕಾರ್ಯಗಳನ್ನ ನೆರವೇರಿಸುವುದು ಕರಾವಳಿ ಸಂಸ್ಕೃತಿಯಿಂದ ಹಿಡಿದು ದೇಗುಲಗಳಲ್ಲಿ ವಿಚ್ಛ್ರಮಣೆಯಿಂದ ಆಚರಿಸುವುದು ಪ್ರತಿತಿ….!”

ಇಂದು ನಾಗರ ಪಂಚಮಿಯ ಸಂಭ್ರಮ…, ದೇವಾನುದೇವತೆಗಳು ನಾಗರಾಜನ ಭಕ್ತಿಯ ಸುಧೆಯಲ್ಲಿ ನಾಗರಪಂಚಮಿ ವಿಶೇಷತೆಯನ್ನ ಹೊರಸೂಸುತ್ತದೆ.

ನಾಗರ ಪಂಚಮಿ ಸಾರಾಂಶ :-
ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬಳು ತಂಗಿ ಮತ್ತು ಅವಳಿಗೆ ನಾಲ್ಕು ಜನ ಅಣ್ಣಂದಿರು ಇದ್ದರು. ಮನೆಯವರೆಲ್ಲಾ ಸೇರಿ ಒಟ್ಟಿಗೆ ನಾಗರ ಪಂಚಮಿಯಂದು ಪೂಜಾ ಕಾರ್ಯಕ್ರಮದಲ್ಲಿ ತೊಡಗಿದ್ದರು. ಆ ಸಮಯದಲ್ಲಿ ಅಲ್ಲಿಗೆ ನಾಗರಹಾವೊಂದು ರಭಸದಿಂದ ಬಂದು ನಾಲ್ಕು ಜನ ಅಣ್ಣಂದಿರನ್ನು ಬಲಿ ತೆಗೆದುಕೊಂಡಿತು. ನಂತರ ಆ ತಂಗಿಯು ಅಣ್ಣಂದಿರನ್ನು ಕಳೆದುಕೊಂಡ ನೋವನ್ನು ತಡೆಯಲಾರದೆ ಆ ನಾಗರಹಾವಿಗೆ ಹೇಳಿದಳು, ನನ್ನ ನಾಲ್ಕು ಜನ ಅಣ್ಣಂದಿರಲ್ಲಿ ಒಬ್ಬರನ್ನಾದರೂ ಬದುಕಿಸಿಕೊಡು, ನಾನು ಯಾರನ್ನು ಅಣ್ಣ ಎಂದು ಕರೆಯಲಿ ಎಂದು ಕಣ್ಣೀರಿಟ್ಟಳು. ತದ ನಂತರ ಆ ನಾಗರ ಹಾವು ಆಕೆಯ ಮಾತಿಗೆ ಕಿವಿಗೊಟ್ಟು ಅಣ್ಣಂದಿರ ಬಳಿ ಬಂದು ಒಬ್ಬ ಅಣ್ಣನನ್ನು ಪ್ರಾಣಾಪಾಯದಿಂದ ಕಾಪಾಡಿತು. ನಂತರ ಅಣ್ಣ – ತಂಗಿ ಇಬ್ಬರು ಸೇರಿ ನಾಗರಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ಸರ್ಪವೊಂದು ಕಾರಣವೆಂದು ತಿಳಿದು, ಭೂಲೋಕದಲ್ಲಿ ಸರ್ಪಸಂಕುಲವನ್ನು ನಿರ್ನಾಮ ಮಾಡಲು ‘ಸರ್ಪಯಜ್ಞ’ವನ್ನು ಆರಂಭಿಸುತ್ತಾನೆ. ಆ ಸಂದರ್ಭದಲ್ಲಿ ಸರ್ಪಗಳ ದೂರದ ಬಂಧುವಾದ ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಂಡನು. ಜನಮೇಜಯ ರಾಜನು ‘ವರವನ್ನು ಕೇಳು’ ಎಂದು ಹೇಳಿದಾಗ, ಆಸ್ತಿಕನು ಪ್ರಾಣಿಹಿಂಸೆ ಮಹಾಪಾಪ, ನೀನು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಂಡನು. ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸಿದ ದಿನ ಪಂಚಮಿಯಾಗಿತ್ತು.ನಾಗರಪಂಚಮಿಯಂದು ಮಾಡಿದ ಉಪವಾಸದ ಮಹತ್ವವೆಂದರೆ ೫ ಯುಗಗಳ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ದೇವಿಯಿದ್ದಳು. ಸತ್ಯೇಶ್ವರನು ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತ್ಯು ಹೊಂದಿದನು. ಆಗ ಸಹೋದರನ ಮೃತ್ಯುವಿನ ಶೋಕದಲ್ಲಿ ಸತ್ಯೇಶ್ವರಿಯು ಆಹಾರವನ್ನು ಸ್ವೀಕರಿಸಲಿಲ್ಲ. ಆದುದರಿಂದ ಆ ದಿನ ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ‘ಸಹೋದರನಿಗೆ ಅಖಂಡ ಆಯುಷ್ಯವು ದೊರಕಲಿ, ಅನೇಕ ಆಯುಧಗಳು ಪ್ರಾಪ್ತವಾಗಲಿ ಮತ್ತು ಅವನು ಪ್ರತಿಯೊಂದು ದುಃಖ ಮತ್ತು ಸಂಕಟ ಗಳಿಂದ ಪಾರಾಗಲಿ’ ಎನ್ನುವುದು ಸಹ ಈ ಉಪವಾಸದ ಹಿಂದಿನ ಕಾರಣವಾಗಿದೆ.
ನಾಗರಪಂಚಮಿಯ ಹಿಂದಿನ ದಿನ ಪ್ರತಿಯೊಬ್ಬ ಸಹೋದರಿಯು ದೇವರಲ್ಲಿ ಮೊರೆ ಇಡುವುದರಿಂದ ಅವಳ ಸಹೋದರನಿಗೆ ಲಾಭವಾಗುತ್ತದೆ ಮತ್ತು ಅವನ ರಕ್ಷಣೆಯಾಗುತ್ತದೆ. ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು. ಆಗ ಅವಳು ಆ ನಾಗರೂಪವನ್ನು ತನ್ನ ಸಹೋದರನೆಂದು ಭಾವಿಸಿದಳು. ಆಗ ನಾಗದೇವನು, ನನ್ನನ್ನು ಸಹೋದರನೆಂದು ಭಾವಿಸಿ ಪೂಜೆ ಮಾಡಿದ ಸಹೋದರಿಯ ರಕ್ಷಣೆಯನ್ನು ನಾನು ಮಾಡುವೆನು ಎಂದು ಅವಳಿಗೆ ವಚನ ನೀಡಿದನು. ಆದುದರಿಂದಲೇ ಆ ದಿನ ಪ್ರತಿಯೊಬ್ಬ ಸ್ತ್ರೀಯು ನಾಗನ ಪೂಜೆ ಮಾಡಿ ನಾಗರಪಂಚಮಿಯನ್ನು ಆಚರಿಸುತ್ತಾಳೆ.
ನಾಗರ ಪಂಚಮಿ ಅಥವಾ ನಾಗ ಪಂಚಮಿ ನಾಗ ಪೂಜೆಯನ್ನು ಮಾಡಲು ಒಂದು ಮಂಗಳಕರ ದಿನವಾಗಿದೆ. ನಾಗರ ಪಂಚಮಿಯು ಭಾರತದ ಬಹುತೇಕ ಭಾಗಗಳಲ್ಲಿ ಹಿಂದೂಗಳು ಆಚರಿಸುವ ಹಿಂದೂ ಹಬ್ಬವಾಗಿದೆ. ಇದನ್ನು ಶ್ರಾವಣ ಮಾಸ ಅಥವಾ ಶ್ರಾವಣ ಮಾಸದ 5 ನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ಅವರು ನಾಗ (ನಾಗರ) ಪೂಜಿಸುತ್ತಾರೆ. ಜನರು ದೇವಾಲಯಗಳು ಮತ್ತು ಹಾವಿನ ಹೊಂಡಗಳಿಗೆ ಹೋಗುತ್ತಾರೆ ಮತ್ತು ಅವರು ಹಾವುಗಳನ್ನು ಪೂಜಿಸುತ್ತಾರೆ. ನಾಗರಹಾವುಗಳಿಗೆ ಹಾಲನ್ನು ಅರ್ಪಿಸುತ್ತಾರೆ. ಅರಿಶಿನ ಮತ್ತು ಹಳದಿ ಹೂವುಗಳನ್ನು ಪೂಜೆಯಲ್ಲಿ ಬಳಸಲಾಗುತ್ತದೆ ಮತ್ತು ಅವುಗಳನ್ನು ಅಮೂಲ್ಯವೆಂದು ಪರಿಗಣಿಸಲಾಗುತ್ತದೆ.
ಅಕ್ಕಿ ಭಕ್ಷ್ಯಗಳು ಮತ್ತು ಲಡ್ಡುಗಳು ನಾಗದೇವತೆಗೆ ಇಷ್ಟವಾಗುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಜನರು ಹಲಬಾಯಿ, ಕಡುಬು, ಲಡು (ಉಂಡೆ), ಅರಿಶಿನ ಎಲೆ ಕಡುಬು, ಎಳ್ಳು ಪಂಚಕಜ್ಜಾಯ ಮುಂತಾದ ವಿವಿಧ ಭಕ್ಷ್ಯಗಳನ್ನು ನೀಡುತ್ತಾರೆ, ನಾಗರ ಪಂಚಮಿಯಂದು ತಯಾರಿಸುವ ಭಕ್ಷ್ಯಗಳು ಅಥವಾ ಪಾಕವಿಧಾನಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತವೆ. ನಾಗರ ಪಂಚಮಿಯನ್ನು ಆಚರಿಸಲು ಕರ್ನಾಟಕದ ವಿವಿಧ ಭಾಗಗಳಲ್ಲಿ ತಯಾರಿಸಲಾದ ಕೆಲವು ಪಾಕವಿಧಾನಗಳನ್ನು ನೀವು ಕೆಳಗೆ ಕಾಣಬಹುದು. ನಿಮಗೆಲ್ಲರಿಗೂ ನಾಗರ ಪಂಚಮಿಯ ಶುಭಾಶಯಗಳು.