ಡೈಲಿ ವಾರ್ತೆ: 09/ಆಗಸ್ಟ್/2024

ದೂದ್‌ ಸಾಗರ್‌ ಫಾಲ್ಸ್‌ ಸಮೀಪ ಹಳಿ ತಪ್ಪಿದ ರೈಲು: ವಾಸ್ಕೋ ಯಶವಂತಪುರ ಎಕ್ಸ್‌ಪ್ರೆಸ್‌ ರದ್ದು; 3 ರೈಲುಗಳ ಮಾರ್ಗ ಬದಲಾವಣೆ

ಗೋವಾ ರೈಲು ಮಾರ್ಗದ ದೂದ್‌ ಸಾಗರ್‌ ಜಲಪಾತ ಸಮೀಪ ಶುಕ್ರವಾರ ಬೆಳಿಗ್ಗೆ ಗೂಡ್ಸ್‌ ರೈಲು ಹಳಿ ತಪ್ಪಿದ್ದು, ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಆಗಸ್ಟ್‌ 9 ರಂದು ಬೆಳಿಗ್ಗೆ 09:35 ಕ್ಕೆ 17 ಲೋಡ್ ವ್ಯಾಗನ್‌ಗಳನ್ನು ಒಳಗೊಡ ಗೂಡ್ಸ್ ರೈಲು ಬ್ರಗಾಂಜಾ ಘಾಟ್ ವಿಭಾಗದಲ್ಲಿ ಸೋನಾಲಿಮ್ ಮತ್ತು ದೂದ್‌ ಸಾಗರ್ ನಿಲ್ದಾಣಗಳ ನಡುವೆ ಹಳಿತಪ್ಪಿದೆ. ಇದರಿಂದಾಗಿ ಇತರೆ ರೈಲುಗಳ ಸಂಚಾರವನ್ನು ಶುಕ್ರವಾರ ಸಂಪೂರ್ಣ ರದ್ದು ಮಾಡಲಾಗಿದೆ.

ಕ್ರೇನ್‌ಗಳು ಮತ್ತು ಇತರ ಅಗತ್ಯ ಸಾಮಗ್ರಿಗಳೊಂದಿಗೆ ವಾಸ್ಕೋ ಡ ಗಾಮಾ ಮತ್ತು ಹುಬ್ಬಳ್ಳಿಯಿಂದ ಅಪಘಾತ ಸ್ಥಳಕ್ಕೆ ಕಳುಹಿಸಲಾಗಿದೆ. ಕಾರ್ಯಾಚರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನೈರುತ್ಯ ರೈಲ್ವೆ ತಿಳಿಸಿದೆ.