ಡೈಲಿ ವಾರ್ತೆ: 10/ಆಗಸ್ಟ್/2024
ಆ. 15 ರಂದು ಜೀವನ್ ಮಿತ್ರ ದಶಮ ಸಂಭ್ರಮ: ಗ್ರಾಮೀಣ ಕ್ರೀಡೆ, ಅಶಕ್ತರಿಗೆ ನೆರವು, ನೇತ್ರದಾನ ಶಿಬಿರ, ಸಮಾಜ ಸೇವಕರಿಗೆ ಸನ್ಮಾನ, ಫೋಟೋಗ್ರಾಫಿ ಸ್ಪರ್ಧೆ – ಟ್ರಸ್ಟಿ ನಾಗರಾಜ್ ಪುತ್ರನ್
ಕೋಟ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟದ ಜೀವನ್ ಮಿತ್ರ ಸೇವಾ ಟ್ರಸ್ಟ್ ನ ಜೀವನ್ ಮಿತ್ರ ದಶಮ ಸಂಭ್ರಮ-2024 ರ ಉದ್ಘಾಟನಾ ಸಮಾರಂಭವು ಆ. 15 ರಂದು ಗುರುವಾರ ಬೆಳಿಗ್ಗೆ ಕೋಟ ಗಿಳಿಯಾರಿನ ಸ್ಮಾರ್ಟ್ ಸಿಟಿಯಲ್ಲಿ ನಡೆಯಲಿದೆ ಎಂದು ಜೀವನ್ ಮಿತ್ರ ಸೇವಾ ಟ್ರಸ್ಟ್‌ನ ಮುಖ್ಯಸ್ಥ ನಾಗರಾಜ ಪುತ್ರನ್ ತಿಳಿಸಿದರು.
ಕೋಟದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ ಅಂದು ಬೆಳಿಗ್ಗೆ ಧ್ವಜಾರೋಹಣ, ಗ್ರಾಮೀಣ ಕ್ರೀಡೆ, ಅಶಕ್ತರಿಗೆ ನೆರವು, ನೇತ್ರದಾನ ಶಿಬಿರ, ಸಮಾಜ ಸೇವಕರಿಗೆ ಸನ್ಮಾನ, ಫೋಟೋಗ್ರಾಫಿ ಸ್ಪರ್ಧೆ ನಡೆಯಲಿದೆ.
2014 ರಲ್ಲಿ ಪ್ರಾರಂಭಗೊಂಡ ಜೀವನ್ ಮಿತ್ರ ಆಂಬುಲೆನ್ಸ್ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದೇವೆ. ನಂತರ ದಿನಗಳಲ್ಲಿ ಎಂಟು ಜನರ ತಂಡದಿಂದ ಜೀವನ್ ಮಿತ್ರ ಸೇವಾ ಟ್ರಸ್ಟ್ ಮಾಡಿ ಟ್ರಸ್ಟ್ ಮೂಲಕ ಹಲವಾರು ಸಮಾಜ ಸೇವೆ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇವೆ.
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ಜೀವನ್ ಮಿತ್ರ ಸೇವಾ ಟ್ರಸ್ಟ್ ವತಿಯಿಂದ ಉಚಿತ ಊಟ ನೀಡಿ ಅಸಹಾಯಕರಿಗೆ ಸಹಾಯ ಮಾಡಿದ್ದೇವೆ. ಅಲ್ಲದೆ ಆಂಬುಲೆನ್ಸ್ ನಲ್ಲಿ 10 ವರ್ಷದಿಂದ ಉಚಿತ ಸೇವೆಯನ್ನು ನೀಡುತ್ತಾ ಬಂದಿದ್ದೇನೆ ಎಂದು ನಾಗರಾಜ್ ಪುತ್ರನ್ ಹೇಳಿದರು.
ಆಗಸ್ಟ್ 15 ರಂದು ಜೀವನ್ ಮಿತ್ರ ದಶಮ ಸಂಭ್ರಮ: ಬೆಳಿಗ್ಗೆ 9:15 ಕ್ಕೆ ಸೈನಿಕರಿಂದ ಧ್ವಜಾರೋಹಣ, ರೈತರಿಂದ ಭೂಮಿ ಪೂಜೆ ನಡೆಯಲಿದೆ.
ಕಾರ್ಯಕ್ರಮವು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರ ಸಭಾಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಗೌರವ ಉಪಸ್ಥಿತಿಯಲ್ಲಿ ಕೋಟ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಹಾಗೂ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಬಿ ಕುಂದರ್ ಇವರು ಉಪಸ್ಥಿತರಿರಲಿದ್ದಾರೆ. ಸ್ಮರಣಿಕೆ ಅನಾವರಣವನ್ನು ಶ್ರೀದೇವಿ ಕಿರಣ್ ಎಲೆಕ್ಟ್ರಿಕಲ್ ಕೋಟ ಇದರ ಮಾಲೀಕರಾದ ಶ್ರೀಕಾಂತ್ ಶೆಣೈ ಮಾಡುವರು.
ಯೋಧ ಮತ್ತು ರೈತರಿಗೆ ಗೌರವಾರ್ಪಣೆ ನಡೆಯಲಿದೆ.
ಗಾಡಿ ಕೂಸ ಪೂಜಾರಿ ಅವರು ಕಂಬಳ ಕೋಣಗಳನ್ನು ಓಡಿಸುವುದರ ಮೂಲಕ ಗ್ರಾಮೀಣ ಕ್ರೀಡಾ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ.
ಮುಳುಗು ತಜ್ಞ ಈಶ್ವರ ಮಲ್ಪೆ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.
ಸಂಜೆ ದಿ. ಡಾ. ಸತೀಶ್ ಪೂಜಾರಿಯವರ ವೇದಿಕೆಯಲ್ಲಿ ನಡೆಯುವ ಸಮಾರೋಪ ಸಮಾರಂಭ ಕಾರ್ಯಕ್ರಮ:
ಸಮಾಜ ಸೇವಕ ಇಬ್ರಾಹಿಂ ಗಂಗೊಳ್ಳಿ, ಶವಮರಣೋತ್ತರ ಪರೀಕ್ಷಕರು ಮಂಜುನಾಥ ನಾಯಕ್, ಗಾಯಕ ರವಿ ಬನ್ನಾಡಿ, ಕೆಇಬಿ ನೌಕರ ದಿನೇಶ್ ಪುತ್ರನ್ ವಿಠಲವಾಡಿ, ಕಂಬಳ ಮತ್ತು ಸಮಾಜ ಸೇವಕ ಪ್ರಕಾಶ್ ಗಾಣಿಗ ಸಾಲಿಗ್ರಾಮ, ಮಲ್ಲಿಗೆ ಕೃಷಿಕರು ಶ್ರೀಮತಿ ಪ್ರೇಮ ಪೂಜಾರಿ ಕುಂಭಾಶಿ, ಉರಗ ಸಂರಕ್ಷಕ ವಿಜಯ ಪೂಜಾರಿ ಬಾರಿಕೆರೆ, ಸಮಾಜಸೇವಕ ಗಣೇಶ್ ಭಂಡಾರಿ ಅವರನ್ನು ಸನ್ಮಾನಿಸಲಾಗುವುದು.
ಸಮಾರೋಪ ಸಮಾರಂಭದಲ್ಲಿ ಪತ್ರಕರ್ತರಾದ
ರಾಜೇಶ್ ಗಾಣಿಗ ಅಚ್ಲಾಡಿ , ರವೀಂದ್ರ ಕೋಟ, ಚಂದ್ರಶೇಖರ ಬೀಜಾಡಿ, ಪ್ರಭಾಕರ್ ಆಚಾರ್ಯ, ಇಬ್ರಾಹಿಂ ಪಡುಕರೆ, ಶೇಷಗಿರಿ ಭಟ್ ಅರೂರು ಅವರನ್ನು ಗೌರವಿಸಲಾಗುವುದು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಸತೀಶ್ ಹೆಚ್. ಕುಂದರ್ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಾಗರಾಜ್ ಪುತ್ರನ್, ನಾಗೇಂದ್ರ ಪುತ್ರನ್, ಪವನ್ ಶೆಟ್ಟಿ ಐರೊಡಿ, ಗೋಪಾಲಕೃಷ್ಣ ಕುಂಭಾಶಿ, ಮಿಥುನ್ ಶೆಟ್ಟಿ ಐರೋಡಿ, ವಸಂತ್ ಸುವರ್ಣ ಮಣೂರು, ರಮೇಶ್ ಕಾಂಚನ್, ಧನುಷ್ ವಡ್ಡರ್ಸೆ, ಭರತ್ ಗಾಣಿಗೆ ಕೋಟ, ವಿಜಯ್ ಕುಮಾರ್ ಪಡುಕರೆ, ಶುಶಾಂತ್ ಶೆಟ್ಟಿ ಉಪಸ್ಥಿತರಿದ್ದರು.