ಡೈಲಿ ವಾರ್ತೆ: 08/Sep/2024

ಸೈಬ್ರಕಟ್ಟೆ ಎನ್.ಟಿ.ಟಿ. ಟೀಚರ್ ಟ್ರೈನಿಂಗ್ ಸಂಸ್ಥೆಯಲ್ಲಿ ಪದವಿ ಪ್ರದಾನ ಸಮಾರಂಭ

ಕೋಟ: ಮೈಂಡ್ ಲೀಡ್ ಸ್ಕೂಲ್ ಕ್ಯಾಂಪಸ್ ನಲ್ಲಿ 2023-24 ನೇ ಶೈಕ್ಷಣಿಕ ಸಾಲಿನ ಎನ್.ಟಿ.ಟಿ ಟೀಚರ್ ಟ್ರೈನಿಂಗ್ (ಆಲ್ ಇಂಡಿಯಾ ಅರ್ಲಿ ‌ಚೈಲ್ಡ್ ಹುಡ್ ಕೇರ್ ಎಂಡ್ ಎಜ್ಯುಕೇಶನ್) ನ ‌ಪದವಿ ಪ್ರದಾನ ಸಮಾರಂಭವು ಸೆ. 08 ರಂದು ಭಾನುವಾರ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಅಶ್ವಿನಿ ಶೆಟ್ಟಿ ಶಿಕ್ಷಕಿ ಜಿ.ಹೆಚ್.ಪಿ.ಎಸ್ ಶಾಲೆ ಹೊಳೆಬಾಗಿಲು ಹಾಗೂ ಶ್ರೀ ಶಕ್ತಿ ಫೌಂಡೇಶನ್ ನ ಪದಾಧಿಕಾರಿಗಳು, ಮೈಂಡ್ ಲೀಡ್ ಸಂಸ್ಥೆಯ ಮುಖ್ಯಸ್ಥರು‌,‌ ಶಿಕ್ಷಕ ವರ್ಗದವರು ಹಾಗೂ ಎನ್.ಟಿ.ಟಿ. ತರಬೇತಿ ಸಂಸ್ಥೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.