ಡೈಲಿ ವಾರ್ತೆ: 08/Sep/2024
ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ -ಬಾರಕೂರಿ ನಲ್ಲಿ ಶಿಕ್ಷಕರ ದಿನಾಚರಣೆ
ಬ್ರಹ್ಮಾವರ:ಶಿಕ್ಷಣ ಕೇಂದ್ರದಲ್ಲಿ ಮೂಲ ಸೌಕರ್ಯ ಎಷ್ಟು ಮುಖ್ಯವೋ ಅಷ್ಟೇ ಅಲ್ಲಿರುವ ಶಿಕ್ಷಕರು ಮುಖ್ಯ
ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ -ಬಾರಕೂರಿ ನಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಲಿಖಿತಾ ಕೊಠಾರಿ ರವರು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮ ದಲ್ಲಿ ದೀಪ ಬೆಳಗಿಸಿ.. ” ಶಿಕ್ಷಣ ಕೇಂದ್ರದಲ್ಲಿ ಮೂಲ ಸೌಕರ್ಯ ಗಳು ಎಷ್ಟು ಮುಖ್ಯ ವೋ ಅಷ್ಟೇ ಅಲ್ಲಿರುವ ಶಿಕ್ಷಕರು ಮುಖ್ಯ ” ಎಂದು ಶಿಕ್ಷಕರ ಮಹತ್ವ ಕುರಿತು ತಮ್ಮ ಮಾತಾಗಳನ್ನಾಡಿದರು.
ವಿದ್ಯಾರ್ಥಿಗಳಾದ ಪ್ರತೀಕ್, ಸಿಂಚನ, ತ್ರಿಶುಲ್ ಮತ್ತು ಹಿರಿಯ ಶಿಕ್ಷಕಿ ಶ್ರೀಮತಿ ಸುಜಾತಾ ಎಲ್. ರೈ ರವರು ಶಿಕ್ಷಕರ ಮಹತ್ವ ಕುರಿತು ಮಾತುಗಳನ್ನಾಡಿದರು.
ಶಾಲೆಯ 10ನೇ ತರಗತಿ ವಿದ್ಯಾರ್ಥಿ ಗಳು ಶಾಲೆಯ ಎಲ್ಲಾ ತರಗತಿ ಗಳಿಗೆ ತಾವೇ ಶಿಕ್ಷಕರಾಗಿ ಪಾಠ ಗಳನ್ನು ಮಾಡಿದರು.
ಶಿಕ್ಷಕರಿಗೋಸ್ಕರ ಹಲವು ಸ್ಪರ್ಧೆ ಗಳನ್ನು ಏರ್ಪಡಿಸಿದರು.
ಶಾಲೆಯ ಎಲ್ಲಾ ಶಿಕ್ಷಕ – ಶಿಕ್ಷಕೇತರರು ಸಂತೋಷ ದಿಂದ ಲವಲವಿಕೆ ಯಿಂದ ಭಾಗವಹಿಸಿದರು.
ಸಂಗೀತ ಕುರ್ಚಿ, ಪಾಸಿಂಗ್ ದ ಲೆಮನ್, ಕುದುರೆ ಚಿತ್ರಕ್ಕೆ ಬಾಲ ಬಿಡಿಸುವ ಸ್ಪರ್ಧೆ ಯನ್ನು ಏರ್ಪಡಿಸಿ 10ನೇ ತರಗತಿಯ ವಿದ್ಯಾರ್ಥಿ ಗಳಾದ ಅಮೋಘ, ದಿಗಂತ್, ಅಭಿಷೇಕ್, ಸೃಜನ್, ಧೀರಜ್, ಕೃಷ್ಣ, ಲಾಲಿತ್ಯ, ವಿಜೇತ ರಿಗೆ ಬಹುಮಾನ ನೀಡಿದರು.
ವಿದ್ಯಾರ್ಥಿ ರಾಕೇಶ್, ಡಾ /ರಾಧಾ ಕೃಷ್ಣನ್ ರವರ ಭಾವ ಚಿತ್ರ ಬಿಡಿಸುವಾಗ ವಿದ್ಯಾರ್ಥಿ ಗಳಾದ ಧನುಶ್ರೀ, ಪ್ರತೀಕ್ಷಾ, ಅನಿಷಾ, ಸಿಂಚನ, ದೀಕ್ಷಿತಾ, ಅನ್ವಿತಾ, ಅಂಡ್ರಿಯಾ, ಲಾಸ್ಯ, ಗೀತೆ ಯನ್ನು ಹಾಡಿದರು.
ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕೇತರರಿಗೆ ವಿದ್ಯಾರ್ಥಿ ಗಳಾದ ಶೋರವ, ಸುಶ್ರೀತ್, ವರುಣ್, ವಿನೀತ್, ಸಜನ್, ಕವನ ರವರು 10ನೇ ತರಗತಿ ವಿದ್ಯಾರ್ಥಿ ಗಳು ಮಾಡಿದ ಹೂ ಮತ್ತು ಗಿಫ್ಟ್ ನ್ನು ನೀಡಿದರು.
ಶಿಕ್ಷಕರ ಮಹತ್ವ ತಿಳಿಸುವ ಗೀತೆಯನ್ನು ವೈಷ್ಣವಿ, ಪೂಜಾ, ಅಶ್ರಿತಾ, ಆಶಿನಿ, ಸಾನ್ವಿತಾ, ಅಪೇಕ್ಷಾ, ಖುಷಿ ಹಾಡಿದರು. ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಾಲಾ ವತಿಯಿಂದ ಎಲ್ಲಾ ಶಿಕ್ಷಕ -ಶಿಕ್ಷಕೇತರರಿಗೆ ಗಿಫ್ಟ್ ನ್ನು ನೀಡಲಾಯಿತು
ಈ ಕಾರ್ಯಕ್ರಮ ವನ್ನು 10ನೇ ತರಗತಿ ವಿದ್ಯಾರ್ಥಿ ಯಾದ ಫಾತಿಮಾ ನಿರೂಪಿಸಿ, ಸಾಗರ್ ಸ್ವಾಗತಿಸಿದರು, ನಿಧಿ ಕಾಮತ್ ವಂದಿಸಿದರು, ಶಾಲೆಯ 10ನೇ ತರಗತಿ ವಿದ್ಯಾರ್ಥಿ ಗಳು ಕಾರ್ಯಕ್ರಮ ಸಂಯೋಜನೆ ಮಾಡಿ, ಸಹಕರಿಸಿದರು.